
ಬೆಂಗಳೂರು, ಜುಲೈ 21: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವಿಚಾರ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ. ಬೆಂಗಳೂರಿನ (Bengaluru) ಹೆಚ್ಎಸ್ಆರ್ ಲೇಔಟ್‌ನ ವಾರ್ಡ್ ನಂಬರ್ 53ರಲ್ಲಿ 13,000ಕ್ಕೂ ಹೆಚ್ಚು ಮತದಾರರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ದಾಖಲಿಸಿರುವ ಬಗ್ಗೆ ಉಲ್ಲೇಖಿಸಿರುವ ಅವರು, ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅನ್ಬುಕುಮಾರ್ ಅವರನ್ನು ಆಗ್ರಹಿಸಿದ್ದಾರೆ.
ಬೊಮ್ಮನಹಳ್ಳಿ ಕ್ಷೇತ್ರದ HSR ಲೇಔಟ್ (ವಾರ್ಡ್-174) ನಲ್ಲಿ ನಡೆದಿರುವುದು ಸಾಮಾನ್ಯ ಅಕ್ರಮವಲ್ಲ, ಇದು ನಾಗರಿಕರ ಮತದಾನದ ಹಕ್ಕಿನ ಮೇಲಿನ ಆಕ್ರಮಣ!
ಯಾವುದೇ ಭೌತಿಕ ತನಿಖೆ ಇಲ್ಲ, BLA-2 ಏಜೆಂಟರಿಗೆ ಮಾಹಿತಿಯೇ ಇಲ್ಲ! ಎಲ್ಲೋ ಕುಳಿತ ಅಧಿಕಾರಿಗಳು ಒಂದೇ ಏಟಿಗೆ 13,000ಕ್ಕೂ ಹೆಚ್ಚು ಅರ್ಹ ಮತದಾರರನ್ನು ‘UEF – Permanent Shifting’… pic.twitter.com/SgJXOy4Vug
— Tejasvi Surya (@Tejasvi_Surya) July 21, 2026
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ, ಹೆಚ್.ಎಸ್.ಆರ್ ಲೇಔಟ್ ವಾರ್ಡ್-174ರ ಒಟ್ಟು 53 ಮತಗಟ್ಟೆಗಳಲ್ಲಿ ನಡೆದಿರುವ ಮನೆ-ಮನೆ ಮತದಾರರ ಪರಿಶೀಲನೆ ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳು ಹಾಗೂ ಸಂದೇಹಾಸ್ಪದ ಚಟುವಟಿಕೆಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದಿವೆ.ಯಾವುದೇ ಸಮರ್ಪಕ ಹಾಗೂ ದೃಢೀಕೃತ ಭೌತಿಕ ಪರಿಶೀಲನೆ ನಡೆಸದೇ, ಸುಮಾರು 13,000ಕ್ಕೂ ಅಧಿಕ ಅರ್ಹ ಮತದಾರರನ್ನು “UEF – Permanent Shifting” (ಶಾಶ್ವತವಾಗಿ ಸ್ಥಳಾಂತರಗೊಂಡವರು) ಎಂದು ದಾಖಲಿಸಲಾಗಿದೆ. ಯಾವುದೇ ಭೌತಿಕ ಪರಿಶೀಲನೆಯಿಲ್ಲದೆ ಶೇ.75ರಷ್ಟು ಮನೆ-ಮನೆ ಮತದಾರರ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ ಎಂದು ವರದಿ ಸಲ್ಲಿಸಿರುವುದು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಕುರಿತು ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ವಿರುದ್ಧ ರಾಜ್ಯಪಾಲರಿಗೆ ದೂರು, ಏನಿದು ನೀತಿ ?
ಚುನಾವಣಾ ಆಯೋಗದ ಸ್ಪಷ್ಟ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ನಡೆದಿರುವ ಈ ಪ್ರಕ್ರಿಯೆಯಿಂದಾಗಿ ಸಾವಿರಾರು ಅರ್ಹ ನಾಗರಿಕರು ತಮ್ಮ ಸಂವಿಧಾನಾತ್ಮಕ ಮತದಾನದ ಹಕ್ಕಿನಿಂದ ವಂಚಿತರಾಗುವ ಭೀತಿ ಎದುರಾಗಿದೆ. ಆದ್ದರಿಂದ, ಪ್ರಜಾಪ್ರಭುತ್ವದ ಆಶಯಗಳನ್ನು ಹಾಗೂ ಮತದಾರರ ಹಕ್ಕುಗಳನ್ನು ಎತ್ತಿಹಿಡಿಯುವ ಹಿತದೃಷ್ಟಿಯಿಂದ, ಆಯೋಗವು ತಕ್ಷಣವೇ ನಿಯಮಬಾಹಿರವಾಗಿ “UEF – Permanent Shifting” ಎಂದು ದಾಖಲಿಸಲಾದ ಎಲ್ಲಾ 13,000+ ಮತದಾರರ ಮಾಹಿತಿಯನ್ನು ಮರು ಭೌತಿಕ ಪರಿಶೀಲನೆಗೆ (Re-verification) ಒಳಪಡಿಸಬೇಕು. HSR ಲೇಔಟ್ ವಾರ್ಡ್-174ರ 53 ಮತಗಟ್ಟೆಗಳಲ್ಲಿ ನಡೆದ Enumeration ಕಾರ್ಯದ ಕುರಿತು ತಕ್ಷಣವೇ ಉನ್ನತ ಮಟ್ಟದ ಸಮಗ್ರ ತನಿಖೆಗೆ ಆದೇಶಿಸಬೇಕು. ಕರ್ತವ್ಯ ಲೋಪ ಎಸಗಿದ ಹಾಗೂ ಸುಳ್ಳು ವರದಿ ಸಲ್ಲಿಕೆಗೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಬೇಕು ಎಂದವರು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.