ಮತದಾರರ ಮಾಹಿತಿ ಕಳವು: ಚಿಲುಮೆ ಮುಖ್ಯಸ್ಥ ರವಿಕುಮಾರ್​ ಪತ್ನಿ, ಕೃಷ್ಣೇಗೌಡ ಪತ್ನಿ ವಶಕ್ಕೆ

Voters Data Theft Case: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿ ‘ಚಿಲುಮೆ’ ಮುಖ್ಯಸ್ಥ ರವಿಕುಮಾರ್​ ಪತ್ನಿ, ಕೃಷ್ಣೇಗೌಡ ಪತ್ನಿ ವಶಕ್ಕೆ ಪಡೆಯಲಾಗಿದೆ.

ಮತದಾರರ ಮಾಹಿತಿ ಕಳವು: ಚಿಲುಮೆ ಮುಖ್ಯಸ್ಥ ರವಿಕುಮಾರ್​ ಪತ್ನಿ, ಕೃಷ್ಣೇಗೌಡ ಪತ್ನಿ ವಶಕ್ಕೆ
ಸಾಂಧರ್ಬಿಕ ಚಿತ್ರ
Edited By: ಆಯೇಷಾ ಬಾನು

Updated on: Nov 19, 2022 | 12:00 PM

ಬೆಂಗಳೂರು: ನಗರದಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ(Voters Data Scam) ಅಕ್ರಮ ಆರೋಪಕ್ಕೆ ಸಂಬಂಧಿಸಿ ‘ಚಿಲುಮೆ’ ಮುಖ್ಯಸ್ಥ ರವಿಕುಮಾರ್​ ಪತ್ನಿ, ಕೃಷ್ಣೇಗೌಡ ಪತ್ನಿ ವಶಕ್ಕೆ ಪಡೆಯಲಾಗಿದೆ. ಚಿಲುಮೆ ಸಂಸ್ಥೆ ನಿರ್ದೇಶಕಿ ಆಗಿರುವ ರವಿಕುಮಾರ್ ಪತ್ನಿ ಐಶ್ವರ್ಯ ಹಾಗೂ ಟಿ.ಬೇಗೂರು ತೋಟದ ಮನೆಗೆ ದಾಖಲಾತಿ ಸಾಗಿಸಿದ್ದ ಕೃಷ್ಣೇಗೌಡ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾಹಿತಿ ಆಧರಿಸಿ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ್ದ ಹಲಸೂರು ಗೇಟ್​ ಪೊಲೀಸರು ನಿನ್ನೆ ನಾಲ್ವರನ್ನು ವಶಕ್ಕೆ ಪಡೆದಿದ್ದರು. ಇಂದು ಬೆಂಗಳೂರಿನ 1ನೇ ACMM ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರುಪಡಿಸಲಿದ್ದಾರೆ. ನಿನ್ನೆ ಚಿಲುಮೆ ಕಚೇರಿ ಮೇಲೆ ಹಲಸೂರು ಗೇಟ್ ಪೊಲೀಸರು ದಾಳಿ ನಡೆಸಿದ್ದರು. ದಾಳಿ ಹೋಗುವ ಮೊದಲೇ ಸಾಕಷ್ಟು ಕಂಪ್ಯೂಟರ್ ಹಾಗು ಲ್ಯಾಪ್‌ಟಾಪ್ ನಾಪತ್ತೆಯಾಗಿದೆ. ಒಂದೇ ಒಂದು ಲ್ಯಾಪ್ ಟಾಪ್, ಕಂಪ್ಯೂಟರ್ ಇಲ್ಲದಂತೆ ಚಿಲುಮೆ ಸಿಬ್ಬಂದಿ ಮಾಡಿದ್ದಾರೆ. ಸದ್ಯ ಪೊಲೀಸರು ಕಚೇರಿ ಸಿಸಿಟಿವಿ, ಡಿವಿಆರ್ ವಶಕ್ಕೆ ಪಡೆದಿದ್ದಾರೆ. ಪೊಲೀಸರು ದಾಳಿ ಮಾಡುವ ತನಕವೂ ಡಿವಿಆರ್ ರೆಕಾರ್ಡ್ ನಲ್ಲಿಯೇ ಇತ್ತು. ಹೀಗಾಗಿ ಡಿವಿಆರ್ ವಶಕ್ಕೆ ಪಡೆಯಲಾಗಿದೆ. ಡಿವಿಆರ್ ಮೂಲಕ ಯಾರು ಯಾರು ಬರ್ತಿದ್ದಾರೆ, ಹೋಗುತ್ತಿದ್ದಾರೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಕಚೇರಿಯಲ್ಲಿ ಲ್ಯಾಪ್ ನಲ್ಲಿ ಕೆಲಸ ಮಾಡಿರುವುದಕ್ಕೆ ಸಾಕ್ಷಿ ಇದೆ. ಆದ್ರೆ ಲ್ಯಾಪ್‌ಟಾಪ್ ಪತ್ತೆಯಾಗಿಲ್ಲ.

ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಪ್ರಕರಣ: ಕಚೇರಿ ಖಾಲಿ ಮಾಡಿದ ಚಿಲುಮೆ ಸಂಸ್ಥೆ ವಿರುದ್ಧ ಬಿಬಿಎಂಪಿ, ಕಾಂಗ್ರೆಸ್ ದೂರು

ಹಾಗೂ ಕಚೇರಿಯಲ್ಲಿ ಬಿಲ್​ಗಳು, ಸುಮಾರು ಐವತ್ತಕ್ಕೂ ಹೆಚ್ಚು ಐಡಿ ಕಾರ್ಡ್​ಗಳು ಲಭ್ಯವಾಗಿವೆ. ಇದೇ ಐಡಿ ಕಾರ್ಡ್ ಗಳನ್ನು ಬಳಸಿ ಸಾಕಷ್ಟು ಪ್ರಮಾಣದಲ್ಲಿ ಮತದಾರರ ಮಾಹಿತಿ ಸಂಗ್ರಹಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಬಿಜೆಪಿ ಹಾಲಿ ಸಚಿವರು ನೀಡಿರುವ ಚೆಕ್ ಹಾಗೂ ಇತರ ದಾಖಲಾತಿ, ಹೊಂಬಾಳೆ ಸಂಸ್ಥೆಗೆ ಸೇರಿದ್ದ ಒಂದಷ್ಟು ದಾಖಲೆಗಳನ್ನು ದಾಳಿ ವೇಳೆ ವಶಕ್ಕೆ ಪಡೆಯಲಾಗಿದೆ.

Bengaluru voter data theft: ವೋಟರ್ ಲಿಸ್ಟ್ ಹಗರಣ.. ಕಾಂಗ್ರೆಸ್ ಪಾಳಯ ಸಮರ..!

Published On - 11:45 am, Sat, 19 November 22

Follow Us