ಬೆಂಗಳೂರಿನಲ್ಲಿ ಜಲಕ್ಷಾಮ: ಹೋಳಿ ರೈನ್ ಡ್ಯಾನ್ಸ್‌ಗೆ ಮುಂದಾಗಿದ್ದ ಹೋಟೆಲ್‌ಗಳಿಗೆ ನೋಟಿಸ್
ಬೆಂಗಳೂರು ಮಹಾನಗರದಲ್ಲಿ ಮಳೆ ನೀರಿನ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ನಗರದಲ್ಲಿನ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಈ ಹಿನ್ನಲೆ ಮಾರ್ಚ್ 25 ರಂದು ನಡೆಯುವ ಹೋಳಿ ಹಬ್ಬ(Holi Habba)ಕ್ಕೆ ಸಜ್ಜಾಗಿದ್ದ ಹೋಟೆಲ್ ಹಾಗೂ ರೆಸಾರ್ಟ್ಗಳಿಗೆ ಜಲಮಂಡಳಿ ಶಾಕ್ ನೀಡಿದ್ದು, ರೈನ್ ಡ್ಯಾನ್ಸ್‌ಗೆ ಮುಂದಾಗಿದ್ದ ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು, ಮಾ.22: ಮಾರ್ಚ್ 25 ರಂದು ನಡೆಯುವ ಹೋಳಿ ಹಬ್ಬ(Holi Habba)ಕ್ಕೆ ಸಜ್ಜಾಗಿದ್ದ ಹೋಟೆಲ್ ಹಾಗೂ ರೆಸಾರ್ಟ್ಗಳಿಗೆ ಜಲಮಂಡಳಿ ಶಾಕ್ ನೀಡಿದ್ದು, ರೈನ್ ಡ್ಯಾನ್ಸ್‌ಗೆ ಮುಂದಾಗಿದ್ದ ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಿದೆ. ಬೆಂಗಳೂರು ಮಹಾನಗರದಲ್ಲಿ ಮಳೆ ನೀರಿನ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ನಗರದಲ್ಲಿನ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಈ ಹಿನ್ನಲೆ ಬೆಂಗಳೂರು ನಗರದಲ್ಲಿ ಜಲಕ್ಷಾಮ ಪರಿಣಾಮ ಡ್ರೈ ಹೋಳಿ ಆಚರಿಸುವಂತೆ ಜಲಮಂಡಳಿ ಅಧಿಕಾರಿಗಳು ಮನವೊಲಿಸಿದ್ದಾರೆ.
ಹೋಳಿ ರೈನ್ ಡ್ಯಾನ್ಸ್ ಪ್ರಕಟಿಸಿದ್ದ ಹೊಟೇಲ್‌ಗಳಾದ ಮೈಸೂರು ರಸ್ತೆಯ ಜೆ.ಕೆ ಗ್ರಾಂಡ್ ಅರೆನಾ, ಜಯಮಹಲ್ ಪ್ಯಾಲೇಸ್ ಹೋಟೆಲ್‌ಗಳಿಗೆ BWSSB ಅಧಿಕಾರಿಗಳು ಭೇಟಿ ನೀಡಿದ್ದು, ರೈನ್ ಡ್ಯಾನ್ಸ್‌ಗೆ ಕಾವೇರಿ ಹಾಗೂ ಕೊಳವೆ ಬಾವಿ ನೀರು ಬಳಸದಂತೆ ನೊಟೀಸ್ ನೀಡಿದ್ದಾರೆ. ಸಾಂಸ್ಕೃತಿ ಹಬ್ಬವಾಗಿ ಆಚರಣೆಗೆ ಯಾವುದೇ ನಿಷೇಧ ಇಲ್ಲ, ವಾಣಿಜ್ಯ ಉದ್ದೇಶಗಳಿಗಾಗಿ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜನೆಯಿಂದ ನೀರು ಪೋಲಾಗುತ್ತದೆ. ಇದನ್ನ ತಡೆಯುವ ನಿಟ್ಟಿನಲ್ಲಿ ಹೋಟಲ್‌ಗಳಿಗೆ ನೊಟೀಸ್ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ನೀರಿನ ಸಮಸ್ಯೆ: ಈಜು ಕೊಳಕ್ಕೆ ಕುಡಿಯುವ ನೀರಿನ ಬಳಕೆಗೆ ನಿಷೇಧ
ಬೆಂಗಳೂರು ಮಹಾನಗರದ ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆಯನ್ನು ಹೊತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಎಲ್ಲಾ ನಾಗರಿಕರಿಗೂ ಸಮರ್ಪಕವಾಗಿ ನೀರು ಪೂರೈಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರಸ್ತುತ 20,000 ಚದರ ಅಡಿ ಮೇಲ್ಪಟ್ಟ ಕಟ್ಟಡ ನಿರ್ಮಾಣ ಮಾಡುವ ಮಾಲೀಕರುಗಳೊಂದಿಗೆ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಸುವಂತೆ ಹಾಗೂ ತಮ್ಮಲ್ಲಿರುವ ಕೊಳವೆಬಾವಿಯ ಮೂಲದ ನೀರನ್ನು ಬೇಸಿಗೆ ಕಾಲದವರೆಗೆ ಮಂಡಳಿಯ ಉಪಯೋಗಕ್ಕೆ ಹಸ್ತಾಂತರಿಸಿ ಬೆಂಗಳೂರು ನಾಗರೀಕರ ನೀರು ಸರಬರಾಜಿಗೆ ಅನುವು ಮಾಡಿಕೊಡುವಂತೆ ಕೋರಿಕೊಳ್ಳಲಾಗಿತ್ತು. ಈ ಬಗ್ಗೆ ಎಲ್ಲರೂ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:41 pm, Fri, 22 March 24