ಇಂದು ಬೆಂಗಳೂರಿನ ಅರ್ಧ ಭಾಗಕ್ಕೆ ನೀರಿಲ್ಲ, ನಿಮ್ಮ ಏರಿಯಾ ಇದೆಯಾ?
ಚಂದ್ರಾ ಬಡಾವಣೆಯ ಜಲಗಾರಕ್ಕೆ ನೀರು ಪೂರೈಕೆಯ ಮಾರ್ಗಗಳಲ್ಲಿರುವ ಪೈಪ್ ವಾಲ್ವ್ ದುರಸ್ತಿ ಕಾಮಗಾರಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ 4ನೇ ಹಂತದ 1ನೇ ಫೇಸ್‌ನ ಮೂರು ಪಂಪ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದಾಗಿ ಅರ್ಧ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಲ್ಲಿ ಇಂದು (ಸೆ. 13) ವ್ಯತ್ಯಯವಾಗಲಿದೆ.
ಬೆಂಗಳೂರು, ಸೆ.13: ಇಂದು ಬೆಂಗಳೂರಿನ ಅರ್ಧ ಭಾಗದಲ್ಲಿ ಕಾವೇರಿ ನೀರಿನ ಸಮಸ್ಯೆ ಎದುರಾಗಲಿದೆ. ಜಲಮಂಡಳಿಯು (BWSSB) ಚಂದ್ರಾ ಬಡಾವಣೆಯ ಜಲಗಾರಕ್ಕೆ ನೀರು ಪೂರೈಕೆಯ (Water supply) ಮಾರ್ಗಗಳಲ್ಲಿರುವ ಪೈಪ್ ವಾಲ್ವ್ ದುರಸ್ತಿ ಕಾಮಗಾರಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ 4ನೇ ಹಂತದ 1ನೇ ಫೇಸ್‌ನ ಮೂರು ಪಂಪ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದಾಗಿ ಅರ್ಧ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಲ್ಲಿ ಇಂದು (ಸೆ. 13) ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ಕಾವೇರಿ ನೀರು ವ್ಯತ್ಯಯ?
ಮಹಾಲಕ್ಷ್ಮಿ ಲೇಔಟ್, ಜೆಸಿ ನಗರ, ಶ್ರೀ ರಾಮನಗರ, ಮುನೇಶ್ವರ ಬ್ಲಾಕ್, ಜೆಎಸ್ ನಗರ, ಸರಸ್ವತಿಪುರಂ, ಮೈಕೋ ಲೇಔಟ್, ಗಣೇಶ ಬ್ಲಾಕ್, ರಾಜಾಜಿನಗರ 2 ರಿಂದ 5 ನೇ ಬ್ಲಾಕ್‌ಗಳು, ಭುವನೇಶ್ವರಿ ನಗರ, ಕೆಬಿ ಸ್ಟ್ರೀಟ್, ಡಾ ರಾಜ್‌ಕುಮಾರ್ ರಸ್ತೆ, ಗುಬ್ಬಣ್ಣ ಇಂಡಸ್ಟ್ರಿಯಲ್ ಲೇಔಟ್, ಪ್ರಕಾಶ್ ನಗರ, ಸುಬ್ರಹ್ಮಣ್ಯ ನಗರ, ಗಾಯತ್ರಿನಗರದ ಭಾಗಗಳು, ಮಿಲ್ಕ್ ಕಾಲೋನಿ, ನಂದಿನಿ ಲೇಔಟ್, ಜೆಸಿ ನಗರ, ಡಾಲರ್ಸ್ ಸ್ಕೀಮ್ ಕಾಲೋನಿ, ನರಸಿಂಹ ಲೇಔಟ್, ವಿಜಯಾನಂದ ನಗರ, ಸೋಮೇಶ್ವರ ನಗರ, ರಾಜೀವ್ ಗಾಂಧಿ ನಗರ, ಕೃಷ್ಣಾನಂದ ನಗರ, ಕೆಎಚ್‌ಬಿ ಕಾಲೋನಿ, ಯಶವಂತಪುರ, ಎಪಿಎಂಸಿ ಮತ್ತು ಆರ್‌ಎಂಸಿ ಯಾರ್ಡ್, ಗೊರಗುಂಟೆಪಾಳ್ಯ, ಬಸವೇಶ್ವರನಗರ, ಬಸವೇಶ್ವರನಗರ ಎನ್‌ಜಿಒ ಕಾಲೋನಿ, ಗೃಹ ಲಕ್ಷ್ಮಿ ಲೇಔಟ್, ಕಮಲಾ ನಗರ, ಎಸ್‌ವಿಕೆ ಲೇಔಟ್, ಕರ್ನಾಟಕ ಲೇಔಟ್, ಕಾವೇರಿ ನಗರ, ವೈಯಾಲಿಕಾವಲ್, ಲಕ್ಷ್ಮಿ ನಗರ, ಎಂಜಿ ನಗರ, ಎಲ್‌ಐಸಿ ಕಾಲೋನಿ, ಟೀಚರ್ಸ್ ಕಾಲೋನಿ, ಮೀನಾಕ್ಷಿ ನಗರ, ಕಾಮಾಕ್ಷಿಪಾಳ್ಯ, ಎಸ್‌ಬಿಐ ಆಫೀಸರ್ಸ್ ಮತ್ತು ಸ್ಟಾಫ್ ಕಾಲೋನಿ, ಶಾರದ ಕಾಲೋನಿ.
ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ಇಂದು ತುರ್ತು ಸಭೆ ಕರೆದ ಸಿದ್ದರಾಮಯ್ಯ, ಪ್ರತಿಪಕ್ಷಗಳ ನಾಯಕರಿಗೂ ಆಹ್ವಾನ
ವೃಷಭಾವತಿ ನಗರ, ಮಾರುತಿ ನಗರ, ಚೆನ್ನಿಗಪ್ಪ ಲೇಔಟ್, ವಿನಾಯಕ ನಗರ, ಎಕೆ ಕಾಲೋನಿ, ನಂಜಪ್ಪ ಲೇಔಟ್, ಮಂಜುನಾಥ್ ನಗರ, ನ್ಯಾಯಾಧೀಶರ ಕಾಲೋನಿ, ನಾಗರಭಾವಿ, NGEF ಲೇಔಟ್, ವಿಧಾನ ಸೌಧ ಲೇಔಟ್, ದಾಸರಹಳ್ಳಿ, ಜಾಲಹಳ್ಳಿ, ಪೀಣ್ಯ ರಾಜಗೋಪಾಲ ನಗರ, ದೀಪನ್ ರಾಜಗೋಪಾಲ ನಗರ, ಪ್ರದೇಶ, ಹಂಪಿ ನಗರ, ಆರ್‌ಪಿಸಿ ಲೇಔಟ್, ವಿಜಯನಗರ, ಕೆಪಿ ಕೃಷ್ಣಪ್ಪ ಲೇಔಟ್, ಅತ್ತಿಗುಪ್ಪೆ, ಚಂದ್ರಾ ಲೇಔಟ್, ನಾಯಂಡಹಳ್ಳಿ, ಬಾಪೂಜಿ ಲೇಔಟ್, ಎಂಸಿ ಲೇಔಟ್, ಬಿನ್ನಿ ಲೇಔಟ್, ಮಾನಸ ನಗರ, ಹೊಯ್ಸಳ ನಗರ, ಸುವರ್ಣ ಲೇಔಟ್, ಮೆಟ್ರೋ ಲೇಔಟ್, ಮತ್ತು ಗೋವಿಂದರಾಜ ನಗರ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:39 am, Wed, 13 September 23