ನಾಗರಿಕರೇ ಗಮನಿಸಿ; ಬೆಂಗಳೂರಿನ ಈ ಸ್ಥಳಗಳಲ್ಲಿ ಸೆಪ್ಟೆಂಬರ್ 12 ಹಾಗೂ 13ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ
ತುರ್ತಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿರುವುದರಿಂದ ಕಾವೇರಿ 3ನೇ ಹಂತದ ಪ್ರದೇಶಗಳಲ್ಲಿ ಸೆ.12 ಹಾಗೂ ಸೆ.13ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು BWSSB ತಿಳಿಸಿದೆ.
ಬೆಂಗಳೂರಿನ ಕಾವೇರಿ 3ನೇ ಹಂತದಲ್ಲಿ ನೀರು ಪೂರೈಸಲಾಗುವ ಸ್ಥಳಗಳಲ್ಲಿ ದಿನಾಂಕ 12.09.2021 ಮತ್ತು 13.09.2021ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ(BWSSB) ತಿಳಿಸಿದೆ. ಕಾವೇರಿ 3ನೇ ಹಂತದ ಪಂಪಿಂಗ್ ಸ್ಟೇಶನ್ಗೆ ಸಂಬಂಧಪಟ್ಟ ಲೈನ್ನಲ್ಲಿ ಲೀಕೇಜ್ಗಳನ್ನು ಸರಿಪಡಿಸಲು ತುರ್ತಾಗಿ ದುರಸ್ತಿ ಮಾಡಬೇಕಾಗಿರುವುದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು BWSSB ತಿಳಿಸಿದೆ.
ಯಾವೆಲ್ಲಾ ಸ್ಥಳಗಳಲ್ಲಿ ನೀರು ಪೂರೈಕೆ ವ್ಯತ್ಯಯವಾಗಲಿದೆ?: ಗಾಂಧಿನಗರ, ಕುಮಾರಪಾರ್ಕ್ ಈಸ್ಟ್, ವಸಂತನಗರ, ಹೈ ಗ್ರೌಂಡ್ಸ್, ಸಂಪಂಗಿ ರಾಮನಗರ, ಸಿಕೆಸಿ ಗಾರ್ಡ್ನ್, ಕೆಎಸ್ ಗಾರ್ಡನ್, ಟೌನ್ ಹಾಲ್, ಲಾಲ್ ಭಾಗ್ ರಸ್ತೆಯ 1ರಿಂದ 4ನೇ ಕ್ರಾಸ್, ಲಾಲ್ ಭಾಗ್ ರೋಡ್, ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್, ಕಬ್ಬನ್ಪೇಟೆ, ನಗರ್ತಪೇಟೆ, ಕುಂಬಾರಪೇಟೆ, ಕಾಟನ್ಪೇಟೆ, ಚಿಕ್ಪೇಟೆ, ಬಕ್ಷಿ ಗಾರ್ಡನ್, ಭಾರತಿ ನಗರ, ಸೇಂಟ್ ಜಾನ್ಸ್ ರೋಡ್, ಹೈನ್ಸ್ ರೋಡ್, ನಾರಾಯಣ ಪಿಳ್ಳೈ ಸ್ಟ್ರೀಟ್, ಸಂಗಮ್ ರೋಡ್, ಕಾಮರಾಜ್ ರೋಡ್, ವೀರ ಪಿಳ್ಳೈ ಸ್ಟರೀಟ್, ಇನ್ಫ್ಯಾಂಟ್ರಿ ರೋಡ್, ಶಿವಾಜಿ ನಗರ, ಲಾವೆಲ್ಲೆ ರೋಡ್, ಫ್ರೇಜರ್ ಟೌನ್- ಬ್ಯಾಡರ ಹಳ್ಳಿ, ವಿಲಿಯಮ್ಸ್ ಟೌನ್, ಸಿಂಡ್ಲಿ ಕಾಲೋನಿ, ಎನ್ಸಿ ಕಾಲೋನಿಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಜೊತೆಗೆ ಕೋಲ್ಸ್ ರಸ್ತೆ, ಮಚಲಿಬೆಟ್ಟ, ಕಾಕ್ಸ್ ಟೌನ್, ದೊಡ್ಡಿಗುಂಟ, ಜೀವನಹಳ್ಳಿ, ವಿವೇಕಾನಂದ ನಗರ, ದೇವಿಸ್ ರಸ್ತೆ, ಕುಕ್ಸ್ ಟೌನ್, ಹಳೆಯ ಬೈಯಪ್ಪನಹಳ್ಳಿ, ನಾಗಯ್ಯನಪಾಳ್ಯ, ಸತ್ಯನಗರ, ಮಾರುತಿ ನಗರ, ಮುಸ್ಲಿಂ ಕಾಲೊನಿ, ಕುಶಾಲ್ ನಗರ, ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿ, ನಾಗವಾರ, ಸಮಾಧಾನ ನಗರ, ಹೊಸ ಬಾಗಲೂರು, ಹಳೆ ಬಾಗಲೂರು, ಲಿಂಗರಾಜಪುರ, ಚಾಮರಾಜ ಪೇಟೆ, ಬ್ಯಾಂಕ್ ಕಾಲೊನಿ, ಶ್ರೀನಿವಾಸ ನಗರ, ಗವಿಪುರ, ಹನುಮಂತ ನಗರ, ಗಿರಿ ನಗರ, ಬ್ಯಾಟರಾಯನಪುರ, ರಾಘವೇಂದ್ರ ಬ್ಲಾಕ್, ಆವಲಹಳ್ಳಿ, ಮುನೇಶ್ವರ ಬ್ಲಾಕ್, ಕಾಳಿದಾಸ ಬಡಾವಣೆ, ಶ್ರೀನಗರ, ಬನಶಂಕರಿ ಮೊದಲನೇ ಹಂತ, ಯಶವಂತಪುರ, ಮಲ್ಲೇಶ್ವರ, ಕುಮಾರ ಪಾರ್ಕ್, ಜಯಮಹಲ್, ಶೇಷಾದ್ರಿಪುರ.
ನಂದಿ ದುರ್ಗ ರಸ್ತೆ, ಜೆ.ಸಿ.ನಗರ, ಸದಾಶಿವನಗರ, ಪ್ಯಾಲೇಸ್ ಗುಟ್ಟಹಳ್ಳಿ, ಬಿ.ಇ.ಎಲ್ ರಸ್ತೆ, ಸಂಜಯ್ ನಗರ, ಡಾಲರ್ಸ್ ಕಾಲೊನಿ, ಆರ್.ಎಂ.ವಿ, ಗೆದ್ದಲಹಳ್ಳಿ, ಭೂಪಸಂದ್ರ, ಕಾವಲ್ ಬೈರಸಂದ್ರ, ಗಂಗಾನಗರ, ಆರ್.ಟಿ.ನಗರ, ಮನೋರಾಯನಪಾಳ್ಯ, ಆನಂದನಗರ, ವಿ.ನಾಗೇನಹಳ್ಳಿ, ಸುಲ್ತಾನ್ ಪಾಳ್ಯ, ಶಾಂತಲಾ ನಗರ, ಅಶೋಕ ನಗರ, ಎಂ ಜಿ. ರಸ್ತೆ, ಬ್ರಿಗೇಡ್ ರಸ್ತೆ, ಎಚ್ಎಎಲ್ 2ನೇ ಹಂತದ ಭಾಗ, ದೂಪನಹಳ್ಳಿ, ಇಂದಿರಾನಗರ, ಕದಿರಯ್ಯನ ಪಾಳ್ಯ, ಕಲ್ಹಳ್ಳಿ, ಆಂಧ್ರ ಕಾಲೊನಿ, ಎಚ್‌ಎಎಲ್ 3ನೇ ಹಂತ, ಜೀವನ್ ಬಿಮಾ ನಗರ, ಕೋಡಿಹಳ್ಳಿ, ಎಂ.ಜಿ. ರಸ್ತೆ, ಹನುಮಂತಪ್ಪ ಬಡಾವಣೆ, ಬಜಾರ್ ಸ್ಟ್ರೀಟ್, ಹಲಸೂರು, ಎಂ. ವಿ. ಗಾರ್ಡನ್, ಮರ್ಫಿ ಟೌನ್, ಜೋಗುಪಾಳ್ಯ, ಕೇಂಬ್ರಿಜ್ ಬಡಾವಣೆ, ದೀನಬಂಧು ನಗರ, ಲಿಂಗರಾಜಪುರ, ಜಾನಕಿರಾಮ್ ಬಡಾವಣೆ, ಸಿದ್ದರಾಮಪ್ಪ ಗಾರ್ಡನ್ ಪ್ರದೇಶಗಳಲ್ಲಿ ನೀರು ವ್ಯತ್ಯಯವಾಗಲಿದೆ ಎಂದು ಮಂಡಲಿ ತಿಳಿಸಿದ್ದು, ವ್ಯತ್ಯಯಕ್ಕೆ ನಾಗರಿಕರು ಸಹಕರಿಸಬೇಕು ಎಂದು ಅದು ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ:
6 ಲಕ್ಷ 50 ಸಾವಿರ ಕೊಟ್ಟು ಸವಾಲಲ್ಲಿ 1 ತೆಂಗಿನಕಾಯಿ ಗೆದ್ದ ಭಕ್ತಾಗ್ರೇಸರ! ಇದು ಮಾಳಿಂಗರಾಯ ದೇವರ ಮೇಲಿನ ಭಕ್ತಿ
ವಿರಿಜಾ ನಾಲೆಯ ಬಳಿ ರಾತ್ರಿ ಧುತ್ತನೆ ರಸ್ತೆಗೆ ಬಂದ ಮೊಸಳೆ! ಜಮೀನಿಗೆ ತೆರಳಲು ರೈತರ ಆತಂಕ
(Water supply variation in Bengaluru city on September 12th and 13th says BWSSB)
Published On - 10:01 am, Fri, 10 September 21