ವಿರಿಜಾ ನಾಲೆಯ ಬಳಿ ರಾತ್ರಿ ಧುತ್ತನೆ ರಸ್ತೆಗೆ ಬಂದ ಮೊಸಳೆ! ಜಮೀನಿಗೆ ತೆರಳಲು ರೈತರ ಆತಂಕ

ರಸ್ತೆಯಲ್ಲಿ ಮೊಸಳೆ ಸಂಚರಿಸಿವುದನ್ನು ಕಂಡ ಪ್ರವಾಸಿಗರು ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ರಸ್ತೆಯಲ್ಲಿ ಸಂಚರಿಸುತ್ತಿರುವ ಮೊಸಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿರಿಜಾ ನಾಲೆಯ ಬಳಿ ರಾತ್ರಿ ಧುತ್ತನೆ ರಸ್ತೆಗೆ ಬಂದ ಮೊಸಳೆ! ಜಮೀನಿಗೆ ತೆರಳಲು ರೈತರ ಆತಂಕ
ರಾತ್ರಿ ವೇಳೆ ರಸ್ತೆಗೆ ಬಂದ ಮೊಸಳೆ
TV9kannada Web Team

| Edited By: preethi shettigar

Sep 10, 2021 | 9:16 AM

ಮಂಡ್ಯ: ರಾತ್ರಿ ವೇಳೆ ರಸ್ತೆಗೆ ಮೊಸಳೆ( Crocodile) ಬಂದಿದ್ದು, ರೈತರು ಜಮೀನಿಗೆ ತೆರಳಲು ಆತಂಕ ಪಡುವ ಸ್ಥಿತಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ಬಳಿ ನಡೆದಿದೆ. ಗ್ರಾಮದ ಬಳಿಯ ವಿರಿಜಾನಾಲೆ ಹತ್ತಿರದ ರಸ್ತೆಯಲ್ಲಿ ಭಾರೀ ಗಾತ್ರದ ಮೊಸಳೆ ಕಾಣಿಸಿಕೊಂಡಿದೆ.

ಕಳೆದ 15 ದಿನಗಳಿಂದ ವಿರಿಜಾ ನಾಲೆಯಲ್ಲಿ ಕಾಣಿಕೊಂಡಿದ್ದ ಮೊಸಳೆ ನಿನ್ನೆ ತಡರಾತ್ರಿ ರಸ್ತೆಯಲ್ಲಿ ಅತ್ತಿಂದ್ದಿತ್ತ ಸಂಚರಿಸಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ನಾಲೆಯಿಂದ ಮೇಲೆ ಬಂದು ಮೂರ್ನಾಲ್ಕು ಕುರಿ ಮೇಕೆಗಳನ್ನು ಮೊಸಳೆ ಕೊಂದು ಹಾಕಿದ್ದು, ಆಹಾರಕ್ಕಾಗಿ ರಾತ್ರಿಯಲ್ಲಿ ರಸ್ತೆಗೆ ಬಂದು ಅಲೆದಾಟ ನಡೆಸಿದೆ.

ರಸ್ತೆಯಲ್ಲಿ ಮೊಸಳೆ ಸಂಚರಿಸಿವುದನ್ನು ಕಂಡ ಪ್ರವಾಸಿಗರು ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ರಸ್ತೆಯಲ್ಲಿ ಸಂಚರಿಸುತ್ತಿರುವ ಮೊಸಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಮ್ಮ ಜಮೀನಿಗೆ ರಾತ್ರಿ ವೇಳೆ ತೆರಳಲು ರೈತರು ಆತಂಕಪಡುತ್ತಿದ್ದು, ರಂಗನತಿಟ್ಟು ಪಕ್ಷಿಧಾಮದಿಂದ ಆಹಾರ ಅರಸಿ ಮೊಸಳೆ ಬಂದಿರಬೇಕೆಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಸದ್ಯ ಮೊಸಳೆ ಸೆರೆಗೆ ಅರಣ್ಯಾಧಿಕಾರಿಗಳು ಬೋನ್ ಇಟ್ಟಿದ್ದಾರೆ.

ಕೊಡಗು: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಜಾಯ್​ ವಾಕ್! ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆಗಳು ಕಾಡಿಗಿಂತ ನಾಡಿನಲ್ಲೇ ಹೆಚ್ಚು ತಿರುಗಾಡುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಸೋಮವಾರಪೇಟೆ ತಾಲ್ಲೂಕಿನ ಬಾಣಾವರ ಗ್ರಾಮದ ಮುಖ್ಯ ರಸ್ತೆಯಲ್ಲಿ ಒಂಟಿ ಸಲಗವೊಂದು ರಾಜಾರೋಷವಾಗಿ ಓಡಾಡುತ್ತಿದೆ. ಇದನ್ನು ನೋಡಿದ ಗ್ರಾಮಸ್ಥರು ಮತ್ತು ದಾರಿ ಹೋಕರು ಭಯಭೀತರಾಗಿದ್ದಾರೆ.

ಅರಣ್ಯದಂಚಿನಲ್ಲಿರುವ ಬಾಣಾವರ ಗ್ರಾಮದಲ್ಲಿ ಅರಣ್ಯ ಇಲಾಖೆಯ ಕಚೇರಿ ಇದೆ. ಈ ಕಚೇರಿಯ ಸುತ್ತ ಅಡ್ಡಾಡಿದ ಸಲಗ ಬಳಿಕ ರಸ್ತೆಗೆ ಬಂದು ಅರಣ್ಯ ದತ್ತ ಹೆಜ್ಜೆ ಹಾಕಿದೆ. ಯಾವುದೇ ಅಳುಕಿಲ್ಲದೆ ಕೆಲ ಕಾಲ ಅಡ್ಡಾಡಿದ ಈ ಆನೆ ಬಳಿಕ ಏನೂ ಗಲಾಟೆ ಮಾಡದೆ ಕಾಡು ಸೇರಿಕೊಂಡಿದೆ. ಆದರೆ ಒಂಟಿ ಸಲಗದ ದರ್ಶನದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದಾರು.

ಮೈಸೂರು: ರಸ್ತೆಗಿಳಿದ ಕಾಡುಪ್ರಾಣಿಗಳು ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಪೈಕಿ ಶ್ರೀ ಚಾಮರಾಜೇಂದ್ರ ಮೃಗಾಲಯವೂ ಒಂದು. ಅಲ್ಲಿಗೆ ತೆರಳಿದರೆ ಬಗೆಬಗೆಯ ಪ್ರಾಣಿ ಪಕ್ಷಿಗಳನ್ನು ನೋಡಿ ಆನಂದಿಸಬಹುದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದೀಗ ಮೃಗಾಲಯದಾಚೆಗೂ ಕೆಲ ಪ್ರಾಣಿಗಳು ಕಾಣಿಸಿಕೊಳ್ಳುತ್ತಾ ಜನರಿಗೆ ಮುದ ನೀಡುತ್ತಿವೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ರಸ್ತೆಯಲ್ಲಿ ಸಾಗುವ ಪ್ರಯಾಣಿಕರಿಗೆ ಕಾಡೆಮ್ಮೆ, ಜಿಂಕೆ, ಕರಡಿ ಸೇರಿದಂತೆ ಅಪರೂಪದ ಪ್ರಾಣಿಗಳ ದರ್ಶನವಾಗಿದ್ದು, ಆ ಫೋಟೋ ಮತ್ತು ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ವೀರನಹೊಸಹಳ್ಳಿಯಿಂದ ನಾಗರಹೊಳೆ ಮೂಲಕ ಕೊಡಗಿಗೆ ಹೋಗುವ ರಸ್ತೆಯಲ್ಲಿ ಕಾಡೆಮ್ಮೆ, ಜಿಂಕೆ, ಕರಡಿಗಳು ಕಾಣಿಸಿಕೊಂಡಿವೆ. ಕೊಡಗು ಜಿಲ್ಲೆಯಲ್ಲಿ ವಾರಾಂತ್ಯದ ಕರ್ಪ್ಯೂ ಹಿನ್ನೆಲೆ ನಿನ್ನೆ, ಮೊನ್ನೆ (ಶನಿವಾರ, ಭಾನುವಾರ) ಈ ಮಾರ್ಗದಲ್ಲಿ ವಾಹನ ಸಂಚಾರ ಕಡಿಮೆಯಿದ್ದು, ಕಾಡು ಪ್ರಾಣಿಗಳು ಸೀದಾ ರಸ್ತೆಗಿಳಿದಿವೆ. ಹೀಗಾಗಿ ವಾರಾಂತ್ಯದಲ್ಲಿ ಈ ರಸ್ತೆಯಲ್ಲಿ ಸಂಚರಿಸಿದವರಿಗೆ ವನ್ಯ ಪ್ರಾಣಿಗಳ ದರ್ಶನ ಹತ್ತಿರದಿಂದ ಆಗಿದೆ.

ಇದನ್ನೂ ಓದಿ: ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು; ಕಂಗಾಲಾದ ಮೈಸೂರಿನ ರೈತ

ದಾಂಡೇಲಿಯ ಗ್ರಾಮವೊಂದರಲ್ಲಿ ಮೊಸಳೆ ವಿಹಾರ.. ಭಯಭೀತರಾದ ಗ್ರಾಮಸ್ಥರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada