ಬೆಂಗಳೂರು: ಎಸಿಬಿ ರಚನೆ ಮಾಡಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರ. ಇದರಿಂದ ಬಿಜೆಪಿ ಸರ್ಕಾರಕ್ಕೆ ಹಿನ್ನಡೆ ಆಗಿಲ್ಲ ಎಂದು ನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು. ಸಿದ್ದರಾಮಯ್ಯ ಅವರು ಹಿಂದೆ ಎಸಿಬಿ ಜಾರಿಗೆ ತಂದವರು. ಏನಾದ್ರೂ ಹಿನ್ನೆಡೆ ಆಗಿದ್ರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಹೇಳಿದರು. ಮುಖ್ಯಮಂತ್ರಿ ಬದಲಾವಣೆ ಆಗ್ತಾರೆ ಅಂತಾ ನಾನು ಹೇಳಿಲ್ಲ ಎಂದು ನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಇಲ್ಲಿಯವರೆಗೆ ಬದಲಾವಣೆ ಮಾಡಿಲ್ಲ, ಇನ್ನೇನು ಮಾಡುತ್ತಾರೆ. ಅವರೆಲ್ಲಾ ಆರ್ಎಸ್ಎಸ್ ಕೈಗೊಂಬೆ ಅವರೇನು ಹೇಳುತ್ತಾರೆ ಎಂದು ಹೇಳಿಕೆ ನೀಡಿದರು.
ಇದನ್ನೂ ಓದಿ: ಸನಾತನ ಸಂಸ್ಥೆಯ ಮಹಿಳಾ ಸದಸ್ಯರು ಮುಖ್ಯಮಂತ್ರಿ ಬೊಮ್ಮಾಯಿ ಅವರ ಕೈಗೆ ರಾಖಿ ಕಟ್ಟಿದರು
3 ವರ್ಷ ಎಸಿಬಿ ಬೇಕಿತ್ತಾ? ಎಂ.ಬಿ.ಪಾಟೀಲ್
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಈ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದು, ಹೈಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಮುಂದಿನ ನಮ್ಮ ನಿಲುವಿನ ಬಗ್ಗೆ ಚರ್ಚೆ ಮಾಡ್ತೀವಿ. ಪಕ್ಷದ ಹಿರಿಯ ನಾಯಕರ ಜೊತೆ ಚರ್ಚೆ ಮಾಡುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಆಗಿದೆ. ಹಾಗಾದ್ರೆ 3 ವರ್ಷ ಎಸಿಬಿ ಬೇಕಿತ್ತಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಡಬಲ್ ಡೋರ್ ಬಸ್ ಎಂಬ ಸಚಿವ ಸುಧಾಕರ್ ಹೇಳಿಕೆಗೆ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದು, ಎಲ್ಲಿ ಹತ್ತಿದ್ರು, ಎಲ್ಲಿ ಇಳಿದ್ರು, ಎಷ್ಟು ಬಸ್ ಚೇಂಜ್ ಮಾಡಿದ್ರು, ಇದನ್ನೆಲ್ಲಾ ಸಚಿವ ಸುಧಾಕರ್ ಅವರನ್ನೇ ಕೇಳಬೇಕಾಗಿದೆ. ಸುಧಾಕರ್ ಮತ್ತೆ ಬಂದರೆ ಬಸ್ ಹತ್ತಿಸುತ್ತೀರಾ ಎಂಬ ಪ್ರಶ್ನೆ ಉಂಟಾಗಿದೆ. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಬಿಜೆಪಿಯಿಂದ ಅನೇಕರು ಕಾಂಗ್ರೆಸ್ಗೆ ಬರಲು ಸಿದ್ಧರಿದ್ದಾರೆ:
ಬಿಜೆಪಿಯಿಂದ ಅನೇಕರು ಕಾಂಗ್ರೆಸ್ಗೆ ಬರಲು ಸಿದ್ಧರಿದ್ದಾರೆ. ಈಗಾಗಲೇ ಆನೇಕ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಸಿದ್ದರಾಮೋತ್ಸವ ಬಳಿಕ ಕಾಂಗ್ರೆಸ್ ಬಗ್ಗೆ ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್ನಿಂದ ಬೇರೆ ಪಕ್ಷಕ್ಕೆ ಯಾರೂ ಹೋಗುವುದಿಲ್ಲ. ಈಗೇನಿದ್ದರು ಕಾಂಗ್ರೆಸ್ ಸೇರುವವರ ಪ್ರವಾಹ ಶುರುವಾಗಿದೆ. ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತ. ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆಗೆ ಹೋಗ್ತೀವಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಬಿಜೆಪಿಯಲ್ಲಿ ಯಡಿಯೂರಪ್ಪ ಅವರದ್ದು ಮುಗಿದ ಅಧ್ಯಾಯ
ಸಿಎಂ ಬದಲಾವಣೆ ಎಂದು ಕಾಂಗ್ರೆಸ್ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಗೊಂದಲ ಸೃಷ್ಟಿಸಿದ್ದು ಬಿಜೆಪಿಯ ಮಾಜಿ ಶಾಸಕರು. ಯಾರು ಗೊಂದಲ ಸೃಷ್ಟಿಸಿದ್ದಾರೋ ಅವರ ವಿರುದ್ಧ ಕ್ರಮಕೈಗೊಳ್ಳಲಿ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರದ್ದು ಮುಗಿದ ಅಧ್ಯಾಯ. ಬಿಎಸ್ವೈಗೆ 2 ಬಾರಿ ಪೂರ್ಣ ಅಧಿಕಾರ ಪೂರೈಸಲು ಬಿಡಲಿಲ್ಲ. ಯಡಿಯೂರಪ್ಪರಿಗೆ ಆಪರೇಷನ್ ಕಮಲ ಮಾಡಲು ಬಿಟ್ರಿ. ಅದಕ್ಕಾಗಿ ಯಡಿಯೂರಪ್ಪ ಕೋಟ್ಯಂತರ ಹಣ ಸುರಿದರು ಎಂದು ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:48 pm, Fri, 12 August 22