AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Har Ghar Tiranga: ರಾಜ್ಯದಲ್ಲಿ ಶುರುವಾಯ್ತು ಹರ್ ಘರ್ ತಿರಂಗಾ ಹವಾ – ಡೋಲು ಬಾರಿಸಿ ತಿರಂಗಾ ನಡೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Pralhad Joshi: ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ, ಪ್ರತಿ ಮನೆಯ ಮೇಲೆ ನಮ್ಮ ರಾಷ್ಟ್ರಧ್ವಜವನ್ನು ಹಾರಿಸಿ ದೇಶದೊಂದಿಗೆ ನಮ್ಮ ರಾಷ್ಟ್ರ ಭಕ್ತಿಯನ್ನು ವ್ಯಕ್ತಪಡಿಸಬೇಕು. ಈ ಅಭಿಯಾನವನ್ನ ಎಲ್ಲರು ಸೇರಿ ಯಶಸ್ವಿಗೊಳಿಸೊಣ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯದ ಜನರಿಗೆ ಕರೆ ನೀಡಿದ್ದಾರೆ.

Har Ghar Tiranga: ರಾಜ್ಯದಲ್ಲಿ ಶುರುವಾಯ್ತು ಹರ್ ಘರ್ ತಿರಂಗಾ ಹವಾ - ಡೋಲು ಬಾರಿಸಿ ತಿರಂಗಾ ನಡೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ರಾಜ್ಯದಲ್ಲಿ ಶುರುವಾಯ್ತು ಹರ್ ಘರ್ ತಿರಂಗಾ ಹವಾ - ಡೋಲು ಬಾರಿಸಿ ತಿರಂಗಾ ನಡೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
TV9 Web
| Edited By: |

Updated on: Aug 12, 2022 | 2:25 PM

Share

ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ (Azadi Ka Amrit Mahotsav) ಅಂಗವಾಗಿ ಹರ್ ಘರ್ ತಿರಂಗಾ (Har Ghar Tiranga) ಅಭಿಯಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕರೆ ನೀಡಿದ್ದಾರೆ. ನಾಳೆಯಿಂದ ಆರಂಭವಾಗಲಿರುವ ಹರ್ ಘರ್ ತಿರಂಗಾ ಅಭಿಯಾನದ ಮುನ್ನಾ ದಿನವೇ ರಾಜ್ಯದಲ್ಲಿ ಹರ್ ಘರ್ ತಿರಂಗಾ ಹವಾ ಆರಂಭವಾಗಿದೆ. ಮನೆ ಮನೆಗಳಲ್ಲೂ ತ್ರಿವರ್ಣ ಧ್ವಜ ಹಾರಾಡಬೇಕು (Independence Day). ಈ ನಿಟ್ಟಿನಲ್ಲಿ ಅಭಿಯಾನದ ಮುನ್ನಾ ದಿನವೇ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿರಂಗಾ ನಡೆ ಯಾತ್ರೆಗೆ ಚಾಲನೆ ನೀಡಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಇಂದು ತಿರಂಗಾ ನಡೆ ಆಯೋಜಿಸಲಾಗಿತ್ತು. ತಿರಂಗಾ ನಡೆ ಯಾತ್ರೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟಿಸುವ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಾಥ್ ನೀಡಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ವಿಶೇಷವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಈ ಯಾತ್ರೆಯಲ್ಲಿ ಡೋಲು ಹಾಗೂ ವೀರಗಾಸೆ ವಾದ್ಯಗಳನ್ನ ಬಾರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಜನರಲ್ಲಿ ಹುರುಪು ತುಂಬಿದರು. ಹುಬ್ಬಳ್ಳಿಯ ಉಣಕಲ್ ಸಾಯಿನಗರದಲ್ಲಿ ನಡೆದ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಪಾದಯಾತ್ರೆಯಲ್ಲಿ ಭಾಗವಹಿಸಿದರು.

ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ, ಪ್ರತಿ ಮನೆಯ ಮೇಲೆ ನಮ್ಮ ರಾಷ್ಟ್ರಧ್ವಜವನ್ನು ಹಾರಿಸಿ ದೇಶದೊಂದಿಗೆ ನಮ್ಮ ರಾಷ್ಟ್ರ ಭಕ್ತಿಯನ್ನು ವ್ಯಕ್ತಪಡಿಸಬೇಕು. ಈ ಅಭಿಯಾನವನ್ನ ಎಲ್ಲರು ಸೇರಿ ಯಶಸ್ವಿಗೊಳಿಸೊಣ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯದ ಜನರಿಗೆ ಕರೆ ನೀಡಿದ್ದಾರೆ.