ಊಟ ಸರಿಯಿಲ್ಲವೆಂದರೆ ರೌಡಿಗಳನ್ನು ಕರೆಸಿ ಬೆದರಿಕೆ: ಹಾಸ್ಟೆಲ್ ವಾರ್ಡನ್​ ವಿರುದ್ಧ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ

ಗುಣಮಟ್ಟದ ಊಟ, ಉಪಾಹಾರ ನೀಡುವುದಿಲ್ಲವೆಂದು ಆರೋಪಿಸಿ ಹಾಸ್ಟೆಲ್ ವಾರ್ಡನ್​ ವಿರುದ್ಧ ಜಿಲ್ಲೆಯ ಸರಸ್ವತಿನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಪದವಿ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವಂತಹ ಘಟನೆ ನಡೆದಿದೆ.

ಊಟ ಸರಿಯಿಲ್ಲವೆಂದರೆ ರೌಡಿಗಳನ್ನು ಕರೆಸಿ ಬೆದರಿಕೆ: ಹಾಸ್ಟೆಲ್ ವಾರ್ಡನ್​ ವಿರುದ್ಧ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 12, 2022 | 1:34 PM

ದಾವಣಗೆರೆ: ಗುಣಮಟ್ಟದ ಊಟ, ಉಪಾಹಾರ ನೀಡುವುದಿಲ್ಲವೆಂದು ಆರೋಪಿಸಿ ಹಾಸ್ಟೆಲ್ (Hostel)  ವಾರ್ಡನ್​ ವಿರುದ್ಧ ಜಿಲ್ಲೆಯ ಸರಸ್ವತಿನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಪದವಿ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವಂತಹ ಘಟನೆ ನಡೆದಿದೆ. ಊಟ ಸರಿಯಿಲ್ಲವೆಂದರೆ ರೌಡಿಗಳನ್ನು ಕರೆಸಿ ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ಹಾಸ್ಟೆಲ್ ವಾರ್ಡನ್​ ವಿರುದ್ಧ ಆರೋಪಿಸಿ ಪದವಿ ವಿದ್ಯಾರ್ಥಿಗಳು ಹಾಸ್ಟೆಲ್​ ಹೊರಗೆ ರಾತ್ರಿ ವೇಳೆ ಧರಣಿ ಮಾಡಿದ್ದಾರೆ. ವಾರ್ಡನ್​ ವಿರುದ್ಧ ಧಿಕ್ಕಾರ ಕೂಗಿ  ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಭೇಟಿ ನೀಡಿದ್ದು, ಹಾಸ್ಟೆಲ್​ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವುದಾಗಿ ಡಿಎಸ್​ಒ ಭರವಸೆ ನೀಡಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಭರವಸೆ ಹಿನ್ನೆಲೆ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದಿದ್ದು, ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ಇದನ್ನೂ ಓದಿ: ಎಸಿಬಿ ರದ್ದತಿಯಿಂದ ಬಿಜೆಪಿಗೆ ಹಿನ್ನಡೆ ಆಗಿಲ್ಲ, ಕಾಂಗ್ರೆಸ್​ಗೆ ಆಗಿರಬೇಕು: ಸಿಎಂ ಬೊಮ್ಮಾಯಿ

ಈ ವಿಚಾರವಾಗಿ ಹಾಸ್ಟೆಲ್‌ ವಾರ್ಡನ್ ಮೋಹನ್​ ಮಾತನಾಡಿದ್ದು, ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದರು. ಕೆಲವು ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಸೇರದ ವಿದ್ಯಾರ್ಥಿಗಳನ್ನು ಕರೆತಂದು ನಮ್ಮ ಕೊಠಡಿಯಲ್ಲಿ ಆಶ್ರಯ ನೀಡುತ್ತಿದ್ದಾರೆ. ಅಲ್ಲದೇ 5-6 ಹೊರಗಿನ ವಿದ್ಯಾರ್ಥಿಗಳಿಗೆ ಊಟ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಊಟ ನೀಡಬಹುದು, ಆದರೆ ಹೊರಗಿನವರಿಗೆ ಹೇಗೆ ನೀಡುವುದು. ಇದನ್ನು ಹೇಳಿದರೆ ನನ್ನ ಮೇಲೆಯೇ ಹರಿಹಾಯುತ್ತಾರೆ. ಊಟ ಸರಿ ಇಲ್ಲ ಎಂಬ ನೆಪ ಮಾಡಿ ಪ್ರತಿಭಟನೆ ನಡೆಸುತ್ತಾರೆ. ವಿದ್ಯಾರ್ಥಿಯೊಬ್ಬ ನೀವು ಇಲ್ಲಿರಲು ಮಾಮೂಲಿ ನೀಡಬೇಕು ಎಂದು ಬೆದರಿಕೆ ಹಾಕುತ್ತಾನೆ ಎಂದು ಹಾಸ್ಟೆಲ್ ವಾರ್ಡನ್ ಹೇಳಿದರು.

ಮಕ್ಕಳ ಕೈಯ್ಯಲ್ಲಿದ್ದ ರಕ್ಷಾ ಬಂಧನದ ರಾಖಿ ಕಿತ್ತೆಸೆದಿದ್ದಕ್ಕೆ ಪೋಷಕರ ಕಿಡಿ

ಮಂಗಳೂರು: ಮಕ್ಕಳ ಕೈಯ್ಯಲ್ಲಿದ್ದ ರಕ್ಷಾ ಬಂಧನದ ರಾಖಿ ಕಿತ್ತೆಸೆದ ಆರೋಪ ಮಾಡಿದ್ದು, ಪೋಷಕರು‌ ಮತ್ತು ಬಿಜೆಪಿ ಕಾರ್ಯಕರ್ತರಿಂದ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿರುವಂತಹ ಘಟನೆ ಮಂಗಳೂರು ಹೊರವಲಯದ ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ. ನಿನ್ನೆ ‌ರಕ್ಷಾಬಂಧನ ಹಿನ್ನೆಲೆ ಮಕ್ಕಳು ಕೈಗೆ ರಾಖಿ ಕಟ್ಟಿಕೊಂಡು ಬಂದಿದ್ದರು. ಆದರೆ ರಾಖಿ ತೆಗೆಸಿ ಕೆಲ ಶಿಕ್ಷಕರು ಕಸದ ಬುಟ್ಟಿಗೆ ಎಸೆದ ಆರೋಪ ಮಾಡಿದ್ದು, ಶಾಲೆಗೆ ಆಗಮಿಸಿ ಮುಖ್ಯಶಿಕ್ಷಕ ಮತ್ತು ಶಿಕ್ಷಕರಿಗೆ ಪೋಷಕರು ತರಾಟೆ ತೆಗೆದುಕೊಂಡರು.

ಇದನ್ನೂ ಓದಿ: ಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್‌

ಬಿಜೆಪಿ ಯುವಮೋರ್ಛಾ ಕಾರ್ಯಕರ್ತರಿಂದಲೂ ಶಾಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು, ಪೋಷಕರು ‌ಮತ್ತು ಶಿಕ್ಷಕರ ವಾಗ್ವಾದದ ಹಿನ್ನೆಲೆ ಸುರತ್ಕಲ್ ಪೊಲೀಸರು ಮಧ್ಯಪ್ರವೇಶಿಸಿದರು. ಫ್ರೆಂಡ್ ಶಿಪ್ ಬ್ಯಾಂಡ್ ಅಂದುಕೊಂಡು ತೆಗೆಸಿದ್ದಾಗಿ ಶಿಕ್ಷಕರು ಸಮಜಾಯಿಷಿ ನೀಡಿದ್ದು, ರಕ್ಷಾ ಬಂಧನ ಯಾವುದೇ ಕಾರಣಕ್ಕೂ ತೆಗೆಸಲ್ಲ ಅಂತ ಶಾಲಾ ಮುಖ್ಯಶಿಕ್ಷಕ ವಿಷಾಧ ವ್ಯಕ್ತಪಡಿಸಿದರು. ಶಿಕ್ಷಕರೇ ಮತ್ತೆ ಮಕ್ಕಳ ಕೈಗೆ ರಕ್ಷೆ ಕಟ್ಟುವಂತೆ ಪೋಷಕರ ಪಟ್ಟು ಹಿಡಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:09 pm, Fri, 12 August 22