ನಾಳೆ ಬೆಂಗಳೂರಿಗೆ ಮೋದಿ: ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ

ನರೇಂದ್ರ ಮೋದಿ ಅವರು ನಾಳೆ (ಶನಿವಾರ) ವೈಟ್ ಫೀಲ್ಡ್ ಮೆಟ್ರೋ ಉದ್ಘಾಟನೆಗೆ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿವೈಟ್ ಫೀಲ್ಡ್ ಸುತ್ತಮುತ್ತ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಯಾವ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ? ಪರ್ಯಾಯ ಮಾರ್ಗ ವಿವರ ಇಲ್ಲಿದೆ.

ನಾಳೆ ಬೆಂಗಳೂರಿಗೆ ಮೋದಿ: ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ
ನರೇಂದ್ರ ಮೋದಿ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 24, 2023 | 4:03 PM

ಬೆಂಗಳೂರು (ಮಾ.24): ಪ್ರಧಾನಿ ನರೇಂದ್ರ ಮೋದಿ(Narendra modi) ಅವರು ನಾಳೆ (ಮಾರ್ಚ್ 24) ವೈಟ್ ಫಿಲ್ಡ್ – ಕೆ. ಆರ್​ ಪುರ ನಡುವಿನ ಮೆಟ್ರೋಗೆ ಹಸಿರು ನಿಶಾನೆ ತೋರಲಿದ್ದಾರೆ(Whitefield Metro Inauguration). ಮೆಟ್ರೋ ಲೋಕಾರ್ಪಣೆ ಹಿನ್ನೆಲೆಯಲ್ಲಿ ನವ ವಧುವಿನಂತೆ ವೈಟ್ ಫಿಲ್ಡ್ ಮೆಟ್ರೋ ನಿಲ್ದಾಣವನ್ನು (Namma Metro) ಸಿಂಗಾರ ಮಾಡಲಾಗಿದೆ. ವೈಟ್ ಫೀಲ್ಡ್ ಮೆಟ್ರೋ ಹೊಸ ಮಾರ್ಗ ಉದ್ಘಾಟನೆಯ ನಂತರ ಪ್ರಧಾನಿ ಮೋದಿ ಅವರು ವೈಟ್ ಫೀಲ್ಡ್ ನಲ್ಲಿ ಸಮೀಪ ಮಹದೇವಪುರ ಕ್ಷೇತ್ರದ ಸತ್ಯ ಸಾಯಿ ಆಶ್ರಮದಿಂದ ವೈಟ್ ಫೀಲ್ಡ್ ಮೆಟ್ರೋ ಸ್ಟೇಷನ್ ವರೆಗೂ ಸುಮಾರು 1 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ಇನ್ನು ಮೆಟ್ರೋ ಸುತ್ತಮುತ್ತ 5 ರಸ್ತೆಗಳಲ್ಲಿ ಸಂಚಾರ ನಿರ್ಬಂಧಗೊಳಿಸಲಾಗಿದೆ. ಮಾ.24ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30 ರವರೆಗೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಪೊಲೀಸ್ ಸಿಬ್ಬಂದಿಯಿಂದ ಪ್ರತಿ ಹಂತದಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಗಳಿಂದ ತಪಾಸಣೆ ಮಾಡಲಾಗುತ್ತಿದೆ. ಪ್ರಧಾನಿಗಳಿಂದ ರೋಡ್ ಶೋ ಸಾಧ್ಯತೆ ಹಿನ್ನೆಲೆ ರಸ್ತೆಯುದ್ಧಕ್ಕೂ ಬ್ಯಾರಿಕೇಡ್ ಹಾಕಿ ತಯಾರಿ ನಡೆದಿದೆ. ದಿಣ್ಣೂರ್ ಕ್ರಾಸ್ ನಿಂದ ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣದವರೆಗೂ ರಸ್ತೆಯ ಎರಡು ಬದಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರಿಗೆ ಮೋದಿ ಸ್ವಾಗತಕ್ಕೆ ಅವಕಾಶ ನೀಡಲಾಗಿದೆ. ರಸ್ತೆಯುದ್ದಕ್ಕೂ ಬಿಜೆಪಿ ಬಾವುಟ ಬ್ಯಾನರ್ ಗಳು ರಾರಾಜಿಸುತ್ತಿವೆ.

ಸಂಚಾರಕ್ಕೆ ತಡೆ, ಪರ್ಯಾಯ ಮಾರ್ಗ

ನಾಳೆ ಪ್ರಧಾನಮಂತ್ರಿ ಮೋದಿ ಬೆಂಗಳೂರು ಪ್ರವಾಸ ಜೊತೆಗೆ ವೈಟ್ ಫೀಲ್ಡ್ – ಕೆ ಆರ್ ಪುರ ನಡುವಿನ ಮೆಟ್ರೋ ರೈಲಿಗೆ ಚಾಲನೆ ನೀಡಲಿರುವ ಹಿನ್ನಲೆಯಲ್ಲಿ ವೈಟ್ ಫೀಲ್ಡ್ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30 ರವರೆಗೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ತಡೆಹಿಡಿಯಲಾಗಿದೆ. ಹಾಗೂ ಕೆಲವು ಮಾರ್ಗಗಳ ಸಂಚಾರವನ್ನು ಪೊಲೀಸರು ಬದಲಾವಣೆ ಮಾಡಿದ್ದಾರೆ.

ಯಾವ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ?

  • ವರ್ತೂರು ಕೋಡಿಯಿಂದ ಹೋಫ್ ಫಾರಂ ಜಂಕ್ಷನ್ ಮೂಲಕ ಕನ್ನಮಂಗಲ ಗೇಟ್ ವರೆಗೆ
  • ಚನ್ನಸಂದ್ರದಿಂದ ಹೋಫ್ ಫಾರಂ ಮೂಲಕ ಹೂಡಿ ಸರ್ಕಲ್ ವರೆಗೆ
  • ಕುಂದಲಹಳ್ಳಿ ರಸ್ತೆಯಿಂದ ವೈದೇಹಿ ಅಸ್ಪತ್ರೆ ಮೂಲಕ ಹೋಫ್ ಫಾರಂ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧ

ಸಂಚಾರ ಮಾರ್ಪಾಡು ಮಾಡಿದ ರಸ್ತೆಗಳು:

  • ವರ್ತೂರುಕೋಡಿಯಿಂದ ಕುಂದಲಹಳ್ಳಿ ಬ್ರಿಡ್ಜ್ ಮೂಲಕ ಹಳೇ ಏರ್ಪೋರ್ಟ್ ರಸ್ತೆ ತಲುಪುವುದು
  • ಚನ್ನಸಂದ್ರ ಸರ್ಕಲ್ ನಿಂದ ನಾಗೊಂಡನಹಳ್ಳಿ, ಇಮ್ಮಡಿಹಳ್ಳಿ ಹಗದೂರು ಮೂಲಕ ವರ್ತೂರು ಕೋಡಿ ತಲುಪುವುದು
  • ಕಾಟಂನಲ್ಲೂರು ಕ್ರಾಸ್ ನಿಂದ ಶೀಗೆಹಳ್ಳಿ ಗೇಟ್, ಕಾಡುಗೋಡಿ ನಾಲಾರಸ್ತೆ ಮೂಲಕ ಚನ್ನಸಂದ್ರ
  • ಹೂಡಿ ಸರ್ಕಲ್ ನಿಂದ ಗ್ರಾಫೈಟ್ ರಸ್ತೆ ಮೂಲಕ ಕುಂದಲಹಳ್ಳಿ ತಲುಪುವುದು
  • ಹೂಡಿ ಸರ್ಕಲ್ ನಿಂದ ಅಯ್ಯಪ್ಪನಗರ, ಭಟ್ಟರಹಳ್ಳಿ-ಮೇಡಹಳ್ಳಿ ಮೂಲಕ ಕಾಟಂನಲ್ಲೂರು ಕ್ರಾಸ್ ತಲುಪುವುದು.

ಐದು ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರ ಕೂಡ ನಿರ್ಬಂಧ

  • ಕಾಟಂನಲ್ಲೂರು ಕ್ರಾಸ್ ನಿಂದ ಕಾಡುಗೋಡಿ, ಹೋಫ್ ಫಾರಂ ಜಂಕ್ಷನ್- ವರ್ತೂರು ಕೋಡಿವರೆಗೆ
  • ಗುಂಜೂರುನಿಂದ ವರ್ತೂರು, ವೈಟ್ ಫೀಲ್ಡ್, ಕಾಡುಗೋಡಿ, ಕಾಟಂನಲ್ಲೂರು ಕ್ರಾಸ್ ವರೆಗೆ.
  • ತಿರುಮಲಶೆಟ್ಟಿಹಳ್ಳಿ ಕ್ರಾಸ್ ನಿಂದ ಚನ್ನಸಂದ್ರ, ಹೋಫ್ ಫಾರಂ ಜಂಕ್ಷನ್ ವರೆಗೆ
  • ಟಿನ್ ಪ್ಯಾಕ್ಟರಿಯಿಂದ ಹೂಡಿ, ಐಟಿಪಿಎಲ್, ಹೋಫ್ ಫಾರಂ ಜಂಕ್ಷನ್ ವರೆಗೆ.
  • ಮಾರತ್ತಹಳ್ಳಿ ಬ್ರಿಡ್ಜ್ ನಿಂದ ಕುಂದಲಹಳ್ಳಿ, ವರ್ತೂರು ಕೋಡಿ, ವೈಟ್ ಫೀಲ್ಡ್ ವರೆಗೆ ಭಾರಿ ವಾಹನಗಳ ಸಂಚಾರ ನಿರ್ಬಂಧ.

ಭಾರಿ ವಾಹನಗಳ ಸಂಚಾರ ಮಾರ್ಪಾಡು

  • ಹೊಸಕೋಟೆಯಿಂದ ದೊಡ್ಡಗಟ್ಟಿಗನಬ್ಬೆ, ತಿರುಮಲಶೆಟ್ಟಿಹಳ್ಳಿ, ಚಿಕ್ಕತಿರುಪತಿ ಮೂಲಕ ಸರ್ಜಾಪುರ ತಲುಪುವುದು
  • ಸರ್ಜಾಪುರದಿಂದ ಗುಂಜೂರು, ನೆರಿಗೆರಸ್ತೆ, ತಿರುಮಲಶೆಟ್ಟಿಹಳ್ಳಿ ಮೂಲಕ ಹೊಸಕೋಟೆ
  • ಟಿನ್ ಫ್ಯಾಕ್ಟರಿಯಿಂದ ಕೆ ಆರ್ ಪುರ, ಭಟ್ಟರಹಳ್ಳಿ ಮೂಲಕ ಹೊಸಕೋಟೆ.
  • ಮಾರತ್ತಹಳ್ಳಿಯಿಂದ ದೊಡ್ಡನೆಕ್ಕುಂದಿ ಮಹದೇವಪುರ ಟಿನ್ ಫ್ಯಾಕ್ಟರಿ ಮೂಲಕ ಭಟ್ಟರಹಳ್ಳಿ

Published On - 3:09 pm, Fri, 24 March 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ