Tipu Jayanti: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಮರುಕಳಿಸಲಿದೆಯಾ? ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಉತ್ತರ ಹೀಗಿದೆ

Siddaramaiah: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಟಿಪ್ಪು ಜಯಂತಿ ಪುನರಾವರ್ತನೆಯಾಗಲಿದೆಯೇ ಎಂಬ ಪ್ರಶ್ನೆಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ತಾವು ಹಿಂದುತ್ವವನ್ನು ಏಕೆ ವಿರೋಧಿಸುತ್ತಿರುವುದು ಎಂಬುದನ್ನೂ ಅವರು ವಿವರಿಸಿದರು.

Tipu Jayanti: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಮರುಕಳಿಸಲಿದೆಯಾ? ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಉತ್ತರ ಹೀಗಿದೆ
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಮರುಕಳಿಸಲಿದೆಯೇ?
Follow us
ಸಾಧು ಶ್ರೀನಾಥ್​
|

Updated on: Apr 22, 2023 | 5:57 PM

ಟಿಪ್ಪು ಜಯಂತಿ (Tipu Jayanti) ಕರ್ನಾಟಕದಲ್ಲಿ ಮರುಕಳಿಸಲಿದೆಯೇ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಟಿಪ್ಪು ಜಯಂತಿ ಪುನರಾವರ್ತನೆಯಾಗಲಿದೆಯೇ ಎಂಬ ಪ್ರಶ್ನೆಗೆ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ತಾವು ಹಿಂದುತ್ವವನ್ನು ಏಕೆ ವಿರೋಧಿಸುತ್ತಿರುವುದು ಎಂಬುದನ್ನೂ ಅವರು ವಿವರಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಟಿಪ್ಪು ಜಯಂತಿ ಪುನರಾವರ್ತನೆಯಾಗಲಿದೆಯೇ ಎಂಬುದರ ಕುರಿತು ಹೊಸ ಸರ್ಕಾರವು (Karnataka assembly elections 2023) ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕರ್ನಾಟಕ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ (Congress veteran Siddaramaiah) ಅವರು ಶನಿವಾರ ಹೇಳಿದ್ದಾರೆ. ಅವರು ಬೆಂಗಳೂರಿನ ರಿಟ್ಜ್-ಕಾರ್ಲ್ಟನ್‌ನಲ್ಲಿ ಕರ್ನಾಟಕ-ದುಂಡುಮೇಜಿನ ಕಾರ್ಯಕ್ರಮದಲ್ಲಿ ಮಾತನಾಡಿದರು (Karnataka roundtable 2023 at the Ritz-Carlton in Bangalore). “ನಾನು ಹೇಳಲಾರೆ. ನಾನು ಸರ್ವಾಧಿಕಾರಿ ಅಲ್ಲ. ನಾನು ಪ್ರಜಾಪ್ರಭುತ್ವವಾದಿ. ನಾವು ಎಲ್ಲಾ ಸಚಿವರ ಅಭಿಪ್ರಾಯವನ್ನು ತೆಗೆದುಕೊಂಡು ನಂತರ ಸಂಪುಟದಲ್ಲಿ ನಿರ್ಧರಿಸುತ್ತೇವೆ” ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರವು 2015 ರಿಂದ 2019 ರವರೆಗೂ (ಬಿಜೆಪಿ ಸರ್ಕಾರವು ಅದನ್ನು ರದ್ದುಗೊಳಿಸುವವರೆಗೆ) ಟಿಪ್ಪು ಜಯಂತಿಯನ್ನು ಆಚರಿಸಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸಲು ನಿರ್ಧರಿಸಿದಾಗ, ಅದನ್ನು ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ತೀವ್ರವಾಗಿ ವಿರೋಧಿಸಿದವು ಎಂಬುದು ಗಮನಾರ್ಹ.

ಟಿಪ್ಪು ಹಿಂದಿನ ಮೈಸೂರು ಸಾಮ್ರಾಜ್ಯದ ಆಡಳಿತಗಾರನಾಗಿದ್ದ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಶತ್ರು ಎಂದು ಪರಿಗಣಿಸಲ್ಪಟ್ಟಿದ್ದ. ಮೇ 1799 ರಲ್ಲಿ ಶ್ರೀರಂಗಪಟ್ಟಣದ ತನ್ನ ಕೋಟೆಯನ್ನು ಬ್ರಿಟಿಷ್ ಪಡೆಗಳಿಂದ ರಕ್ಷಿಸುತ್ತಿದ್ದಾಗ ಕೊಲ್ಲಲ್ಪಟ್ಟನು. ಬಿಜೆಪಿ ಮತ್ತು ಕೆಲವು ಹಿಂದೂ ಸಂಘಟನೆಗಳು ಟಿಪ್ಪುವನ್ನು “ಧಾರ್ಮಿಕ ಮತಾಂಧ” ಮತ್ತು “ಕ್ರೂರ ಕೊಲೆಗಾರ” ಎಂದು ಸಾರುತ್ತಿದ್ದರೆ, ಕೆಲವು ಕನ್ನಡ ಸಂಘಟನೆಗಳು ಅವನನ್ನು “ಕನ್ನಡ ವಿರೋಧಿ” ಎಂದು ಕರೆಯುತ್ತವೆ. ಆತ ಸ್ಥಳೀಯ ಭಾಷೆಯನ್ನು ಕಡೆಗಣಿಸಿ, ಪರ್ಷಿಯನ್ ಅನ್ನು ಪ್ರಚಾರ ಮಾಡಿದ ಎಂದು ಉಲ್ಲೇಖಿಸಲಾಗಿದೆ.

ಇದೇ ವೇಳೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್ ನನ್ನು ಸಮರ್ಥಿಸಿಕೊಂಡರು ಮತ್ತು ಐತಿಹಾಸಿಕ ನಾಯಕ ಹಿಂದೂ ವಿರೋಧಿ ಎಂಬುದು ಬಿಜೆಪಿಯ “ರಾಜಕೀಯ ಆರೋಪ” ಎಂದು ಹೇಳಿದರು. “ಅವರು ಬ್ರಿಟಿಷರ ವಿರುದ್ಧ ಹೋರಾಡಲಿಲ್ಲವೇ? ಹಲವಾರು ಮೈಸೂರು ಯುದ್ಧಗಳು ನಡೆದವು ಮತ್ತು ಅವರು ಬ್ರಿಟಿಷರೊಂದಿಗೆ ಹೋರಾಡಿದರು” ಎಂದು ಸಿದ್ದರಾಮಯ್ಯ ಹೇಳಿದರು.

ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ ಎಂಬುದರ ಬಗ್ಗೆ ಸಿದ್ದರಾಮಯ್ಯ ಏನು ಹೇಳಿದರು?

ಅವರ ಹಿಂದುತ್ವ ವಿರೋಧಿ ನಿಲುವಿನ ಬಗ್ಗೆ ಕಾಂಗ್ರೆಸ್ ನಾಯಕ ಏನು ಹೇಳಿದರು ಅಂದರೆ “ಹಿಂದೂತ್ವದಲ್ಲಿ ಮನುಷ್ಯರ ಮಧ್ಯೆ ತಾರತಮ್ಯ ಮಾಡಲಾಗಿದೆ. ಅದಕ್ಕೇ ನಾನು ಹಿಂದೂತ್ವವನ್ನು ವಿರೋಧಿಸುತ್ತೇನೆ. ನಾನು ಹಿಂದೂ ಧರ್ಮದ ವಿರೋಧಿಯಲ್ಲ. ಹಿಂದೂ ಧರ್ಮ ಮತ್ತು ಹಿಂದುತ್ವ ಬೇರೆ ಬೇರೆ” ಎಂದು ಅವರು ವ್ಯಾಖ್ಯಾನಿಸಿದರು ಸಿದ್ದರಾಮಯ್ಯ ಹಿಂದೂ ವಿರೋಧಿ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಭಾರೀ ಕಾಂಗ್ರೆಸ್ ನಾಯಕ, ಇದೊಂದು ರಾಜಕೀಯ ಆರೋಪ.

ಟಿಪ್ಪು ಸುಲ್ತಾನ್ ದೇವಸ್ಥಾನಗಳನ್ನು ಧ್ವಂಸ ಮಾಡಿದರು ಮತ್ತು ಹಿಂದೂಗಳನ್ನು ಕೊಂದರು ಎಂಬ ಬಿಜೆಪಿ ಹೇಳಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಕರ್ನಾಟಕ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. “ಇದು ನಿಜವಲ್ಲ. ಇದು ಟಿಪ್ಪು ಸುಲ್ತಾನ್ ಮತ್ತು ಅವರ ತಂದೆ ಹೈದರ್ ಅಲಿ ವಿರುದ್ಧ ಮಾಡಲಾದ ರಾಜಕೀಯ ಆರೋಪವಾಗಿದೆ.” ಎಂದರು.

ಹಿಜಾಬ್, ಹಲಾಲ್ ಮತ್ತು ಅಜಾನ್ ಬಗ್ಗೆ ಸಿದ್ದರಾಮಯ್ಯ ನಿಲುವೇನು?

ಹಿಜಾಬ್, ಹಲಾಲ್ ಮತ್ತು ಆಜಾನ್ ವಿಷಯಗಳ ಬಗ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದಾರೆ: “ಇವುಗಳಲ್ಲೆ ಮಾತನಾಡುವ ವಿಷಯಗಳಲ್ಲ. ಅವು ವಾಡಿಕೆಗಳು, ಆಚಾರಗಳು, ಸಂಪ್ರದಾಯಗಳು. ನಾನು ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ನನ್ನ ಆಚಾರದಲ್ಲಿ ಹಸ್ತಕ್ಷೇಪ ಮಾಡಲು ನೀವು ಯಾರು? ಅದನ್ನೇ ನಾವು ಹೇಳಿದ್ದು. ನಾನು ಭ್ರಮೆಯಲ್ಲಿ ಇಲ್ಲ, ನಾನು ಹಿಂದೂ ಮತ್ತು ನಾನು ಎಲ್ಲರನ್ನೂ ಪ್ರೀತಿಸುತ್ತೇನೆ”.

2022 ರಲ್ಲಿ ಕರಾವಳಿ ಕರ್ನಾಟಕದಲ್ಲಿ ಮುಸ್ಲಿಂ ಹುಡುಗಿಯರು ಧರಿಸುವ ಹಿಜಾಬ್‌ನ ವಿವಾದವು ಭುಗಿಲೆದ್ದಿತು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಶಾಲಾ-ಕಾಲೇಜುಗಳನ್ನು ಮುಚ್ಚಲು ಆದೇಶಿಸಬೇಕಾಯಿತು ಮತ್ತು ಹಿಜಾಬ್ ಬೆಂಬಲಿಗರು ಮತ್ತು ಬಲಪಂಥೀಯರ ನಡುವೆ ಘರ್ಷಣೆಯಾಗಿ ಕೆಲವು ದಿನಗಳ ಕಾಲ ಕರ್ಫ್ಯೂ ವಿಧಿಸಿತು.

ನಂತರ ವಿಷಯವು ಸುಪ್ರೀಂ ಕೋರ್ಟ್​​ಗೆ ಹೋಯಿತು. ಅಲ್ಲಿ ಅರ್ಜಿದಾರರು ಹಿಜಾಬ್ ಧರಿಸುವುದು ಅಗತ್ಯವಾದ ಧಾರ್ಮಿಕ ಆಚರಣೆಯಾಗಿದೆ ಮತ್ತು ರಾಜ್ಯ ಸರ್ಕಾರದ ಕ್ರಮವು ಧರ್ಮದ ಆಧಾರದ ಮೇಲೆ ಪ್ರತಿಕೂಲವಾದ ತಾರತಮ್ಯವಾಗಿದೆ ಎಂದು ವಾದಿಸಿದರು. ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇಸ್ಲಾಂನಲ್ಲಿ ತಲೆಗೆ ಸ್ಕಾರ್ಫ್ ಧರಿಸುವುದು ‘ಅಗತ್ಯ ಧಾರ್ಮಿಕ ಆಚರಣೆ’ ಅಂಶವನ್ನು ಹೊಂದಿಲ್ಲ ಎಂದು ಕೋರ್ಟ್​ ತೀರ್ಪು ನೀಡಿದೆ.

ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಕುರಿತು ಸುಪ್ರೀಂ ಕೋರ್ಟ್ ವಿಭಜಿತ ತೀರ್ಪು ನೀಡಿದೆ ಎಂಬುದು ಗಮನಾರ್ಹ – ಒಬ್ಬ ನ್ಯಾಯಾಧೀಶರು ರಾಜ್ಯ ಸರ್ಕಾರವು ಶಾಲೆಗಳಲ್ಲಿ ಸಮವಸ್ತ್ರವನ್ನು ಜಾರಿಗೊಳಿಸಲು ಅಧಿಕಾರ ಹೊಂದಿದೆ ಎಂದು ದೃಢವಾಗಿ ಹೇಳಿದರೆ ಮತ್ತೊಬ್ಬ ನ್ಯಾಯಾಧೀಶರು ಹಿಜಾಬ್ ಅವರವರ ವೈಯಕ್ತಿಕ ಆಯ್ಕೆಯ ವಿಷಯವೆಂದು ಸಾರಿದರು.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್