Golden Hour ಎಂಬ ಅಮೂಲ್ಯ ಕ್ಷಣವೂ ಇಲ್ಲದಂತೆ ಹಾರಿಹೋದ ಪ್ರಾಣಪಕ್ಷಿ! ಬೈಯಪ್ಪನಹಳ್ಳಿ ಜಿಮ್‌ನಲ್ಲಿ ಕುಸಿದುಬಿದ್ದು ಮಹಿಳೆ ಸಾವು

ಜಿಮ್ ವರ್ಕೌಟ್ ಮಾಡುವಾಗ ಕುಸಿದು ಬಿದ್ದಿದ್ದ ವಿನಯ ಕುಮಾರಿ ಎಂಬ 44 ವರ್ಷದ ಮಹಿಳೆ ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Golden Hour ಎಂಬ ಅಮೂಲ್ಯ ಕ್ಷಣವೂ ಇಲ್ಲದಂತೆ ಹಾರಿಹೋದ ಪ್ರಾಣಪಕ್ಷಿ! ಬೈಯಪ್ಪನಹಳ್ಳಿ ಜಿಮ್‌ನಲ್ಲಿ ಕುಸಿದುಬಿದ್ದು ಮಹಿಳೆ ಸಾವು
ಜಿಮ್‌ನಲ್ಲಿ ವರ್ಕೌಟ್ ವೇಳೆ ಕುಸಿದುಬಿದ್ದು ಮಹಿಳೆ ಸಾವು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 26, 2022 | 4:20 PM

ಬೆಂಗಳೂರು: ಜಿಮ್‌ನಲ್ಲಿ ಕಸರತ್ತು ಮಾಡುವ ವೇಳೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕುಸಿದುಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಆತಂಕಕಾರಿ ಘಟನೆ ಬೆಂಗಳೂರಿನ ಮಲ್ಲೇಶಪಾಳ್ಯದ ಜಿಮ್‌ನಲ್ಲಿ ನಡೆದಿದೆ. ಜಿಮ್ ವರ್ಕೌಟ್ ಮಾಡುವಾಗ (Gym workout) ಕುಸಿದು ಬಿದ್ದಿದ್ದ ವಿನಯ ಕುಮಾರಿ ಎಂಬ 35 ವರ್ಷದ ಮಹಿಳೆ ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ (Baiyappanahalli).

Golden Hour ಎಂಬ ಅಮೂಲ್ಯ ಕ್ಷಣವೂ ಇಲ್ಲದಂತೆ ಹಾರಿಹೋದ ಪ್ರಾಣಪಕ್ಷಿ! ವಿನಯಕುಮಾರಿ ಅವಿವಾಹಿತರು. ಜಿಮ್ ಮತ್ತು ಡ್ಯಾನ್ಸ್ ಹವ್ಯಾಸವಾಗಿ ಮಾಡ್ಕೊಂಡಿದ್ದರು. ವಿನಯಕುಮಾರಿ ಅವರ ಮೃತದೇಹ ಸಿ.ವಿ. ರಾಮನ್ ನಗರ ಆಸ್ಪತ್ರೆಯಲ್ಲಿದೆ. ಘಟನೆಯ ಸಿಸಿಟಿವಿ ದೃಶ್ಯ ಟಿವಿ9 ಗೆ ಲಭ್ಯವಾಗಿದ್ದು, ಅದರಲ್ಲಿ ವಿನಯ ಕುಮಾರಿ ಬಾರ್​ ಮಾಡುತ್ತ ಮಾಡುತ್ತಲೇ ಕುಸಿದುಬೀಳುವ ಆಘಾತಕಾರಿ ದೃಶ್ಯ ಸಾದ್ಯಂತವಾಗಿ ಸೆರೆಯಾಗಿದೆ.

ಆಘಾತಕಾರಿಯೆಂದರೆ ವಿನಯ ಕುಮಾರಿ ಎಂದಿನಂತೆ ಸಾಮಾನ್ಯವಾಗಿ ಜಿಮ್​ ಬಾರ್​ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅವರ ಅರಿವಿಗೂ ಬಾರದಂತೆ ಹಿಂದಕ್ಕೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಜಿಮ್​ನಲ್ಲಿದ್ದವರೆಲ್ಲಾ ಬಂದು ಅವರಿಗೆ ಆರೈಕೆ ಮಾಡಿದ್ದಾರೆ. ಮತ್ತು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಲ್ಲಿ ಗೋಲಗ್ಡನ್​ ಅವರ್​ ಎಂಬ ಅಮೂಲ್ಯ ಕ್ಷಣವೂ ಇಲ್ಲದಂತೆ ಆಕೆಯ ಪ್ರಾಣಪಕ್ಷಿ ಹಾರಿಹೋಗಿದೆ.

ಮೃತ ಯುವತಿ ಮೂಲತಃ ಮಂಗಳೂರು ನಿವಾಸಿ: ಮೃತ ಯುವತಿ ಮೂಲತಃ ಮಂಗಳೂರು ನಿವಾಸಿ. ಖಾಸಗಿ ಕಂಪೆನಿಯಲ್ಲಿ ಬ್ಯಾಕ್​​ ಗ್ರೌಂಡ್ ವೆರಿಫಿಕೇಷನ್ ಅಫೀಸರ್ ಆಗಿ ಕೆಲಸ ಮಾಡ್ತಿದ್ದರು. 35 ವರ್ಷದ ಅವಿವಾಹಿತ ವಿನಯ ಕುಮಾರಿ ಮಲ್ಲೇಶಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಕಳೆದು ಎರಡು ವರ್ಷಗಳಿಂದ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಿದ್ದ ವಿನಯ ಕುಮಾರಿ ಬೆಳಗ್ಗೆ ವೇಳೆ ಜಿಮ್ ನಲ್ಲಿ ವರ್ಕ್ ಔಟ್ ಮಾಡಿ, ಕೆಲಸಕ್ಕೆ ತೆರಳುತ್ತಿದ್ದರು.

ವರ್ಕೌಟ್ ಮಾಡುವಾಗ ಕುಸಿದು ಬಿದ್ದಿದ್ದ ವಿನಯ ಕುಮಾರಿ ಸಾವು

Published On - 3:09 pm, Sat, 26 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ