AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸ ಮಾಡುತ್ತಿದ್ದ ಕಟ್ಟಡದಲ್ಲೇ ಪತಿ-ಪತ್ನಿ ಅನುಮಾನಸ್ಪದ ಸಾವು: ದೂರದ ಊರಿನಿಂದ ಬಂದವರು ಹೆಣವಾದರು

ದೂರದ ಊರಿನಿಂದ ಬಂದಿದ್ದ ದಂಪತಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬದಕು ಕಟ್ಟಿಕೊಂಡಿದ್ದರು. ಮಾಡುವ ಕೆಲಸದಿಂದ ಕುಟುಂಬದ ನಿರ್ವಾಹಣೆಯ ಜೊತೆಗೆ ಜೀವನ ಕೂಡ ಹಸನಾಗಿತ್ತು. ವರ್ಷಕ್ಕೊಮ್ಮೆ ಬರುವ ಹಬ್ಬವನ್ನ ಕಟುಂಬ ಸಮೇತ ಆಚರಣೆ ಮಾಡಿ ಹುಟ್ಟೂರಿನಿಂದ ನಗರಕ್ಕೆ ವಾಪಸ್ ಆಗಿದ್ದರು. ಆದ್ರೆ ಆ ಹಬ್ಬದ ಖುಷಿ ಮಾಸುವ ಮೊದಲೇ ದಂಪತಿ ಹೆಣವಾಗಿದ್ದಾರೆ. ಈ ದಂಪತಿ ಸಾವಿನ ಹಿಂದೆ ಹಲವು ರೀತಿಯ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಕೆಲಸ ಮಾಡುತ್ತಿದ್ದ ಕಟ್ಟಡದಲ್ಲೇ ಪತಿ-ಪತ್ನಿ ಅನುಮಾನಸ್ಪದ ಸಾವು: ದೂರದ ಊರಿನಿಂದ ಬಂದವರು ಹೆಣವಾದರು
Mahebub And Farveen
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Apr 17, 2025 | 6:56 PM

Share

ಬೆಂಗಳೂರು, (ಏಪ್ರಿಲ್ 17): ಫೋಟೊದಲ್ಲಿ ಕಾಣುತ್ತಿರುವ ದಂಪತಿ ಹೆಸರು ಮೆಹಬೂಬ್ ಮತ್ತು ಪರವೀನ್. ಮೂಲತಃ ಯಾದಗಿರಿ (Yadagir) ಜಿಲ್ಲೆಯ ನಿವಾಸಿಗಳು. ವೃತ್ತಿಯಲ್ಲಿ ಮೆಹಬೂಬ್ ಕಟ್ಟಡ ನಿರ್ಮಾಣದ ಕೆಲಸ ಹಾಗೂ ಕೂಲಿ ಕಾರ್ಮಿಕರಿಗೆ ಮೇಸ್ತ್ರಿಯಾಗಿ ಬೆಂಗಳೂರಿನಲ್ಲಿ (Bengaluru) ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ರಂಜಾನ್ ಹಬ್ಬದ ಹಿನ್ನಲೆ ದಂಪತಿ ಯಾದಗಿರಿಗೆ ಹೋಗಿ ಕಟುಂಬ ಸಮೇತರಾಗಿ ಅದ್ದೂರಿಯಾಗಿ ರಂಜಾನ್ ಆಚರಣೆ ಮಾಡಿದ್ರು. ವರ್ಷಪೂರ್ತಿ ಕೆಲಸದ ಒತ್ತಡದಲ್ಲೇ ಇರುತ್ತಿದ್ದ ದಂಪತಿ ಹಬ್ಬದಂದು ಕಟುಂಬಸ್ಥರು, ಗ್ರಾಮಸ್ಥರು, ಗೆಳೆಯರ ಜೊತೆ ಸಮಯ ಕಳೆದಿದ್ದರು. ರಂಜಾನ್ ಮುಗಿದು ಕೆಲ ದಿನಗಳ ಕಾಲ ಯಾದಗಿರಿಯಲ್ಲೇ ಕಳೆದಿದ್ದ ದಂಪತಿ ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿಗೆ ವಾಪಸ್ ಆಗಿದ್ದರು. ಆದ್ರೆ ಅದೇನು ಅಯ್ತೋ ಏನೋ ಇದೀಗ ಇಬ್ಬರು ಹೆಣವಾಗಿ ಪತ್ತೆಯಾಗಿದ್ದಾರೆ. ಹೌದು..ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮೆಹೆಬೂಬ್ (45) ಹಾಗೂ ಹೆಂಡ್ತಿ ಪರ್ವೀನ್ (35) ಮೃತ ದೇಹಗಳು ಪತ್ತೆಯಾಗಿದ್ದು, ಸಾಕಷ್ಟು ಸಂಶಯ ಮೂಡಿಸಿದೆ.

ರಂಜಾನ್ ಹಬ್ಬ ಮುಗಿಸಿದ ಮೆಹಬೂಬ್, ಪರ್ವಿನ್ ಕಟುಂಬಸ್ಥರಿಗೆ ಹೇಳಿ ಬೆಂಗಳೂರಿಗೆ ವಾಪಸ್ ಆಗಿದ್ರು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಧಾರವಾಡ ಮೂಲದ ವೈದ್ಯರೋಬ್ಬರಿಗೆ ಸೇರಿದ ಕಟ್ಟದ ಕೆಲಸವನ್ನ ಮೆಹಬೂಬ್ ಕಳೆದ ಒಂದು ವರ್ಷದಿಂದ ಮಾಡ್ತಿದ್ರು. ಇನ್ನೇನು ಆ ಕಟ್ಟದ ಕೆಲಸ ಮುಗಿದು, ಇಂಟಿರಿಯರ್ ಕೆಲಸಗಳನ್ನ ಮಾಡಬೇಕಿತ್ತು. ಈ ಬಗ್ಗೆ ಕಟ್ಟಡ ಮಾಲೀಕನ ಜೊತೆ ಮಾತುಕತೆ ಮಾಡಿದ್ದ ಮೆಹಬೂಬ್ ರಂಜಾನ್ ಹಬ್ಬ ಮುಗಿದ ಕೂಡಲೇ ಮಾಡುವುದಾಗಿ ಹೇಳಿ ಹೋಗಿದ್ರು. ಒಪ್ಪಿಕೊಂಡ ಕೆಲಸ ಸಮಯಕ್ಕೆ ಸರಿಯಾಗಿ ಮುಗಿಸಬೇಕು ಎಂದು ಯಾದಗಿರಿಯಿಂದ ವಾಪಸ್ ಆಗಿದ್ರು. ಆದ್ರೆ ಹಾಗೆ ವಾಪಸ್ ಆಗಿ ಬಂದಿದ್ದ ದಂಪತಿ ಕೆಲಸ ಮಾಡುತ್ತಿದ್ದ ಕಟ್ಟಡದಲ್ಲೇ ಅನುಮಾನಸ್ಪದವಾಗಿ ಹೆಣವಾಗಿದ್ದಾರೆ.

ಇದನ್ನೂ ಓದಿ: ಮೆಟ್ರೋ ವಯಾಡೆಕ್ಟ್​ ಬಿದ್ದು ಆಟೋ ಚಾಲಕ ಸಾವು ಕೇಸ್​: ಮೂವರ ವಿರುದ್ಧ ಎಫ್​​ಐಆರ್​​ ದಾಖಲು

ಪರ್ವಿನ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ್ರೆ, ಮಹೆಬೂಬ್ ಪತ್ನಿಯ ಪಕ್ಕದಲ್ಲೇ ನೆಲದ ಮೇಲೆ ಉಸಿರು ಚೆಲ್ಲಿದ್ದಾನೆ. ಆದ್ರೆ ಮೆಹಬೂಬ್ ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿರುವುದು ಅನುಮಾನಸ್ಪದ ಮೂಡಿಸಿದೆ. ಇನ್ನು ನಿರ್ಮಾಣ ಹಂತದ ಕಟ್ಟಡದಿಂದ ಬರುತ್ತಿದ್ದ ದುರ್ವಾಸನೆಯಿಂದ ಬೆಸತ್ತ ಸ್ಥಳೀಯರು ಅನುಮಾನದ ಮೇಲೆ ಸಂಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಕೊಳೆತ ಸ್ಥಿತಿಯಲ್ಲಿದ ಮೃತದೇಹಗಳನ್ನ ನೋಡಿ ಶಾಕ್ ಆಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ
Image
ಮೆಟ್ರೋ ಕಾಮಗಾರಿ ವೇಳೆ ದುರಂತ:ಹೊಸದಾಗಿ ಖರೀದಿಸಿದ್ದ ಆಟೋ ಜಖಂ, ಚಾಲಕನೂ ಸಾವು
Image
ಮೆಟ್ರೋ ನಿಲ್ದಾಣದಲ್ಲಿ ಜೋಡಿ ರೋಮ್ಯಾನ್ಸ್ ವಿಡಿಯೋ ವೈರಲ್
Image
ವಾಹನ ಪಾರ್ಕ್ ಮಾಡಿ ಮೆಟ್ರೋದಲ್ಲಿ ಸಂಚರಿಸುವವರಿಗೆ ಸಿಗಲಿದೆ ಡಿಸ್ಕೌಂಟ್
Image
ರಜೆಯೆಂದು ಮನೆಗೆ ಬೀಗ ಹಾಕಿ ಊರು, ಪ್ರವಾಸ ಹೋಗೋ ಮುನ್ನ ಪೊಲೀಸರ ಸಲಹೆ ಗಮನಿಸಿ

ಸದ್ಯ ಘಟನೆಯ ಸಂಬಂಧ ಸ್ಥಳ ಪರಿಶೀಲನೆ ನಡೆಸಿರುವ ಖಾಕಿ ಪ್ರಕರಣ ದಾಖಲಿಸಿ ಕಟುಂಬಸ್ಥರಿಗೆ ಮಾಹಿತಿ ನೀಡಿದೆ. ಮತ್ತೊಂದು ಕಡೆ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಪ್ರಾಥಮಿಕವಾಗಿ ಪೊಲೀಸರ ಪರಿಶೀಲನೆ ವೇಳೆ ದಂಪತಿ ಗಲಾಟೆ ಮಾಡಿಕೊಂಡು ಪತಿ ಕೊಲೆಮಾಡಿ ನಂತರ ಆಕೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದ್ದು, ಈ ಬಗ್ಗೆ ಸಂಜಯನಗರ ಪೊಲೀಸರು ಎಲ್ಲಾ ಆಯಾಮಾಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:55 pm, Thu, 17 April 25

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್