ವೃದ್ಧೆಯ ಅತ್ಯಾಚಾರ ಮಾಡಿದ ಯುವಕ ಅಂದರ್
ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರವೆಸಗಿದ ಜ್ಯೂಲಿರೋಸ್ (31) ಎಂಬಾತ ಸಂತ್ರಸ್ತೆಯ ಮನೆಯಲ್ಲಿ ಕೆಲ ಸಮಯದಿಂದ ಬಾಡಿಗೆಗೆ ಇದ್ದ.

ಸಾಂದರ್ಭಿಕ ಚಿತ್ರ
ಬೆಂಗಳೂರು: 71 ವರ್ಷದ ವೃದ್ಧೆಯ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರವೆಸಗಿದ ಜ್ಯೂಲಿರೋಸ್ (31) ಎಂಬಾತ ಸಂತ್ರಸ್ತೆಯ ಮನೆಯಲ್ಲಿ ಕೆಲ ಸಮಯದಿಂದ ಬಾಡಿಗೆಗೆ ಇದ್ದ. ಅಲ್ಲದೇ ಒಬ್ಬಂಟಿಯಾಗಿದ್ದ ವೃದ್ಧೆಗೆ ಚಿಕ್ಕ ಪುಟ್ಟ ಸಹಾಯ ಮಾಡಿ ನಂಬಿಕೆ ಗಿಟ್ಟಿಸಿಕೊಂಡಿದ್ದ.
ಆದರೆ ಜನವರಿ 2 ರಂದು ಮುಖ್ಯ ದ್ವಾರದ ಗ್ಲಾಸ್ ಒಡೆದು ಒಳಗೆ ನುಗ್ಗಿ, ಕೊಠಡಿಯಲ್ಲಿ ಮಲಗಿದ್ದ ವೃದ್ಧೆಯನ್ನು ಅತ್ಯಾಚಾರ ಮಾಡಿ ಪರಾರಿಯಾಗಿದ್ದ. ಘಟನೆ ಬಳಿಕ ವೃದ್ಧೆ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ನಕಲಿ ಐಡಿ ಕಾರ್ಡ್ಗಳ ತಯಾರಿಸಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದವ CCB ಬಲೆಗೆ