ಸದಾನಂದ ಗೌಡರಿಗೆ ಪ್ರಧಾನಿ ಕರೆ; ಆರು ತಿಂಗಳು ಕಡಿಮೆ ಕೆಲಸ, ಆಮೇಲೆ ದುಪ್ಪಟ್ಟು ಮಾಡಿ
ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ ದೂರವಾಣಿ ಮೂಲಕ ಮಾತನಾಡಿ ಅವರ ಸಂಪುಟದಲ್ಲಿ ಹಿರಿಯ ಸಚಿವರಾಗಿರುವ ಡಿ.ವಿ. ಸದಾನಂದ ಗೌಡರ ಆರೋಗ್ಯ ವಿಚಾರಿಸಿ, ಒಂದಿಷ್ಟು tips ಕೊಟ್ಟರು. ಪ್ರಧಾನಿ ಗೌಡರನ್ನು ನಗಿಸಿ ಹಗುರಾಗಿಸಿ ಫೋನ್ ಇಟ್ಟರು.

ಬೆಂಗಳೂರು: ನಗರದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮಾಡಿ ಆರೋಗ್ಯ ವಿಚಾರಿಸಿದರು. ಇಂದು ಮಧ್ಯಾಹ್ನ ಸುಮಾರು 1.30ರ ವೇಳೆಗೆ ದೂರವಾಣಿ ಮಾಡಿದ್ದ ಪ್ರಧಾನಿ, ಗೌಡರ ಆರೋಗ್ಯ ವಿಚಾರಿಸಿದ್ದಷ್ಟೇ ಅಲ್ಲ, health tips ಕೂಡ ಕೊಟ್ಟರು. ಗೌಡರನ್ನು ನಗಿಸಿ ಬೇಗ ಗುಣಮುಖರಾಗಿ ಎಂದು ಹಾರೈಸಿದರು.
ತಾವು ಕೊವಿಡ್ನಿಂದ ಚೇತರಿಸಿಕೊಂಡು ಕೆಲಸ ಪ್ರಾರಂಭಿಸಿದ್ದೀರಿ. ಈಗ ಜಾಸ್ತಿ ಶರೀರಕ್ಕೆ ತ್ರಾಸು ಕೊಡಬೇಡಿ. ನಿಮ್ಮ ಕೆಲಸದಲ್ಲಿ 10 ಪ್ರತಿಶತ ಕಡಿತ ಮಾಡಿ. ಆರು ತಿಂಗಳು ನಿಮ್ಮ ಶರೀರಕ್ಕೆ ವಿರಾಮ ಕೊಡಿ. ಆಮೇಲೆ 20 ಪ್ರತಿಶತ ಜಾಸ್ತಿ ಕೆಲಸ ಮಾಡಿ ಎಂದು ಪ್ರಧಾನಿ ಹೇಳಿದಾಗ ಗೌಡರು ನಕ್ಕು ಹಗುರವಾದರು.
ಗೌಡರಿಗೆ ಸ್ವಸ್ಥ ಆರೋಗ್ಯದ ಅಂಶಗಳನ್ನು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಯಾವುದೇ ಕಾರಣಕ್ಕೂ ಈ ಅಂಶಗಳನ್ನು ಮರೆಯಬೇಡಿ ಎಂದು ನಗುನಗುತ್ತಲೇ ತಾಕೀತು ಮಾಡಿದರು.
ನಿನ್ನೆ ರವಿವಾರ (ಜ.3) ಶಿವಮೊಗ್ಗದಿಂದ ತಿರುಗಿ ಬೆಂಗಳೂರಿಗೆ ಬರುವಾಗ ಚಿತ್ರದುರ್ಗದಲ್ಲಿ ಊಟಕ್ಕೆ ನಿಲ್ಲಿಸಿ ಕಾರು ಇಳಿದು ಹೋಗುತ್ತಿದ್ದಾಗ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಆಗಿ ಕುಸಿದು ಬಿದ್ದಿದ್ದ ಗೌಡರನ್ನು ಪ್ರಾಥಮಿಕ ಚಕಿತ್ಸೆಯ ನಂತರ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಇಂದು ಮುಂಜಾನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಸಂಪುಟದ ಹಲವಾರು ಸಚಿವರು ಸದಾನಂದಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.
ತೀವ್ರ ಕಾರ್ಯಬಾಹುಳ್ಯದ ಮಧ್ಯೆಯೂ ಫೋನ್ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಶ್ರೀ @narendramodi ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡಲು ಅವರು ಮರೆಯಲಿಲ್ಲ. ಸರ್, ತಮ್ಮೆಲ್ಲರ ಶುಭಹಾರೈಕೆಯಿಂದ ನಾನೀಗ ಇನ್ನಷ್ಟು ಗಟ್ಟಿಯಾಗಿದ್ದೇನೆ. @PIBBengaluru @DDChandanaNews
— Sadananda Gowda (@DVSadanandGowda) January 4, 2021
ಜಿರೋ ಟ್ರಾಫಿಕ್ನಲ್ಲಿ ಬೆಂಗಳೂರಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ: ತಿಪ್ಪಾರೆಡ್ಡಿ
Published On - 6:56 pm, Mon, 4 January 21




