ಬೆಂಗಳೂರು, ಫೆ.20: ಕಾಂಗ್ರೆಸ್ ಸರ್ಕಾರ ನುಡಿದಂತೆಯೇ ತನ್ನ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ (Congress Guarantee) ಯೋಜನೆಗಳಿಗೆ ಚಾಲನೆ ನೀಡಿದೆ. ಡಿಗ್ರಿ ಹಾಗೂ ಡಿಪ್ಲೋಮಾ ಕಂಪ್ಲೀಟ್ ಆದ ಯುವಕ, ಯುವತಿಯರಿಗೋಸ್ಕರ ಇದೀಗ 5 ನೇ ಯೋಜನೆಯಾದ ಯುವ ನಿಧಿ ಯೋಜನೆಗೆ (Yuva Nidhi Scheme) ಡಿಸೆಂಬರ್ ತಿಂಗಳ 26 ರಂದು ಚಾಲನೆ ದೊರೆತು ತಿಂಗಳುಗಳೆ ಕಳೆದಿವೆ. ಆದರೆ ಇನ್ನೂ ಕೆಲ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಾರದೇ ಯುವನಿಧಿಯಿಂದ ಕಾದು ಕಾದು ಸುಸ್ತಾದ ಪದವೀಧರರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪೈಕಿ 5 ನೇ ಗ್ಯಾರಂಟಿ ಯೋಜನೆ ಯುವನಿಧಿ. ಕಳೆದ ಡಿಸೆಂಬರ ತಿಂಗಳ 26ರಂದು ಸಿಎಂ ಸಿದ್ಧರಾಮಯ್ಯ ಬೆಂಗಳೂರಿನಲ್ಲಿ ಯುವನಿಧಿಗೆ ಚಾಲನೆ ನೀಡಿದ್ರು. ಜನವರಿ 12ರಂದು ವಿವೇಕಾನಂದ ಜಯಂತಿಯಂದು ಶಿವಮೊಗ್ಗದಲ್ಲಿ ಯುವನಿಧಿ ಹಣ ಖಾತೆಗೆ ವರ್ಗಾವಣೆಗೆ ಚಾಲನೆಯನ್ನ ನೀಡಿದ್ರು, ನಿರುದ್ಯೋಗಿ ಪದವೀಧರರಿಗೆ ರೂ 3,000 ರೂಪಾಯಿ ಮತ್ತು ನಿರುದ್ಯೋಗಿ ಡಿಪ್ಲೋಮಾದಾರರಿಗೆ ರೂ 1,500 ರೂಪಾಯಿ, ಆದರೆ ಯುವನಿಧಿ ನೋಂದಣಿ ಮಾಡಿದ ಕೆಲ ಫಲಾನುಭವಿಗಳಿಗೆ ಹಣ ಸರಿಯಾಗಿ ತಲುಪಿಲ್ಲ. ಜನವರಿ ತಿಂಗಳಲ್ಲಿ ಯುವನಿಧಿ ಫಲಾನುಭವಿಗಳ ಅಕೌಂಟ್‌ಗೆ ಹಣ ಬರಬೇಕಿತ್ತು. ಆದರೆ ಇನ್ನೂ ಕೂಡ ಖಾತೆಗೆ ಬಂದಿಲ್ಲ. ಕೆಲ ಪದವೀಧರರು ಸೇವಾ ಸಿಂಧು ಪೊರ್ಟಲ್ ಗಳಲ್ಲಿ ತಾಂತ್ರಿಕ ದೋಷ ಇದ್ದರು ಅಪ್ಲಿಕೇಷನ್ ಹಾಕಿದ್ದೇವೆ ನಮ್ಮ ಜೊತೆಗೆ ಇರುವ ಎಷ್ಟೋ ಜನರಿಗೆ ಬಂದಿದೆ ನಮಗೆ ಬಂದಿಲ್ಲ. ಸಿಟಿಯಲ್ಲಿರುವ ನಮಗೆ ಇಷ್ಟು ತೊಂದರೆ ಆಗುತ್ತಿದೆ ಹಳ್ಳಿಯಲ್ಲಿರುವ ಯುವಕರಿಗೆ ಎಷ್ಟು ತೊಂದರೆ ಆಗಬಹುದು ಹಾಗಾಗಿ ತಾಂತ್ರಿಕ ದೋಷ ಸರಿಪಡಿಸಿ ನಮಗೆ ಪ್ರಾಮಾಣಿಕವಾಗಿ ಹಣ ಬರುವಂತೆ ಮಾಡಬೇಕು ಅಂತ ಪದವೀಧರ ಯುವಕರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಆಟೋದಲ್ಲೇ ಚಿನ್ನಾಭರಣದ ಬ್ಯಾಗ್ ಬಿಟ್ಟು ಹೋದ ಪ್ರಯಾಣಿಕ; ಆಟೋ ಪತ್ತೆ ಹಚ್ಚಿದ್ದೇ ರೋಚಕ
ಇನ್ನೂ ಯುವನಿಧಿಗೆ ಅಪ್ಲೀಕೇಷನ್ ಹಾಕಿದ ಪದವೀಧರ ಯುವಕರು ಯುನಿವರ್ಸಿಟಿಗಳಿಂದ ಅವರಿಗೆ ಮಾರ್ಕ್ಸ್ ಕಾರ್ಡ್ ಸಿಕ್ಕಿಲ್ಲ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಹೊಸದಾಗಿ ನೋಂದಣಿ ಮಾಡಲು ಪದವೀಧರರು ಮನಸ್ಸು ಮಾಡುತ್ತಿಲ್ಲ. ಈ ಬಗ್ಗೆ ಸಚಿವರನ್ನ ಕೇಳಿದರೆ ಈ ವರೆಗೆ 1 .20 ಲಕ್ಷಕ್ಕೂ ಅಧಿಕ ಫಲಾನುಭವಿಗಳು ನೋಂದಣಿ ಆಗಿದೆ. ಇನ್ನೂ ಎರಡ್ಮೂರು ತಿಂಗಳಲ್ಲಿ 2 ಲಕ್ಷ ವರೆಗೆ ನೋಂದಣಿ ಆಗಬಹುದು. ಡಿಗ್ರಿ ಪಾಸಾದ 6 ತಿಂಗಳ ನಂತರ ಅವರ ಅಕೌಂಟ್‌ಗೆ ಹಣ ಹೋಗಲಿದೆ ಎನ್ನುತ್ತಾರೆ. ಇನ್ನೂ ಕೆಲ ಯುವಕರು ಸರ್ಟಿಫಿಕೇಟ್ ಎಲ್‌ಇಡಿಯಲ್ಲಿ ಅಪ್ಲೋಡ್ ಮಾಡದ ಪರಿಣಾಮ ಅವರ ಅಕೌಂಟ್‌ಗೆ ದುಡ್ಡು ಹೋಗುತ್ತಿಲ್ಲ ಎನ್ನುತ್ತಿದ್ದು, ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ಡಿಗ್ರಿ, ಡಿಪ್ಲೋಮಾ ಮುಗಿಸಿ ಉದ್ಯೋಗ ನೀರಿಕ್ಷೆಯಲ್ಲಿರುವ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಸಿಗುವ ವರೆಗೂ ಬರಬೇಕಿದ್ದ ಯುವನಿಧಿ ಹಣ ಬಾರದೇ ಇರುವುದು ನಿರಾಶೆಗೊಳಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ