ಬೆಂಗಳೂರು ಹೊಸ ವರ್ಷಾಚರಣೆ: ಎಂಜಿ, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆಗಿಲ್ಲ ನಿರ್ಬಂಧ, ಪರಮೇಶ್ವರ್
ಬೆಂಗಳೂರಿನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆ ದಿನ ಯಾವುದೇ ಅಹಿತಕರ ಘಟನೆ ಆಗಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಪೊಲೀಸರು ಮತ್ತು ಪಾಲಿಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಸುಗಮ ಆಚರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು, ಡಿಸೆಂಬರ್ 23: ಡಿಸೆಂಬರ್ ಮುಗಿಯುತ್ತ ಬರ್ತಿದ್ದಂತೆ ಇತ್ತ ಕ್ರಿಸ್‌ಮಸ್ ಮತ್ತು ಹೊಸ ವರ್ಷದ (New Year) ತಯಾರಿ ಕೂಡ ಸದ್ದಿಲ್ಲದೇ ಕಾವೇರುತ್ತಿದೆ. ಅತ್ತ ಪೊಲೀಸರು, ಪಾಲಿಕೆ ಕೂಡ ಅಲರ್ಟ್ ಆಗಿದೆ. ಕ್ರಿಸ್‌ಮಸ್ ಮತ್ತು ನ್ಯೂ ಇಯರ್ ಸೆಲೆಬ್ರೇಷನ್ಗೆ ಕೆಲವೊಂದು ರೂಲ್ಸ್ ಗಳನ್ನ ಜಾರಿಗೆ ತರಲು ಸಜ್ಜಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ರೀತಿಯ ಭದ್ರತೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಹೊಸ ವರ್ಷಾಚರಣೆ ದಿನ ಯಾವುದೇ ಅಹಿತಕರ ಘಟನೆ ಆಗಬಾರದು. ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳುವಂತೆ ಸಭೆ ನಡೆಸಲಾಗಿದೆ. ಮಹಿಳಾ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
#WATCH | Bengaluru: Karnataka Home Minister G Parameshwara says, “People celebrate New Year and Christmas in Bengaluru also. Our job and responsibility as the police department is to facilitate them to celebrate New Year and Christmas peacefully. There were instances through… https://t.co/QdbiVOybgA pic.twitter.com/VQfqdp4jk9
— ANI (@ANI) December 23, 2024
ಬೆಂಗಳೂರಲ್ಲಿ 7 ಲಕ್ಷ ಜನ ಮಿಡ್ನೈಟ್ ಸೆಲೆಬ್ರೆಷನ್ನಲ್ಲಿ ಭಾಗಿಯಾಗುತ್ತಾರೆ. ಏನೇ ಅಹಿತಕರ ಘಟನೆ ನಡೆದ್ರೂ ಏರಿಯಾ ಡಿಸಿಪಿ ಹೊಣೆಯಾಗಲಿದ್ದಾರೆ. ಟ್ರಾಫಿಕ್ ನಿರ್ವಹಣೆ ಸಮಸ್ಯೆ ಆಗದಂತೆ ಮೆಟ್ರೋ, ಆಟೋಗಳು, ಬಸ್ಗಳ ಓಡಾಟ ಸೇರಿದಂತೆ ಹಲವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆಗೆ ನಿರ್ಬಂಧ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಹೊಸ ವರ್ಷಾಚರಣೆ: ಪೊಲೀಸ್ ಸಿಬ್ಬಂದಿಗೆ ಆಯುಕ್ತ ದಯಾನಂದ್ ಖಡಕ್ ಸೂಚನೆ
ಸದ್ಯ ಕ್ರಿಸ್‌ಮಸ್, ನ್ಯೂ ಇಯರ್ ಸೆಲೆಬ್ರೆಷನ್ಗೆ ಸಿಟಿಮಂದಿ ಭರ್ಜರಿ ತಯಾರಿ ನಡೆಸಿದ್ದಾರೆ. ಅದೇ ಮತ್ತೊಂದುಕಡೆ ಪಾಲಿಕೆ ಮತ್ತು ಖಾಕಿ ಕೂಡ ಸಜ್ಜಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.