AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಆಲಮಟ್ಟಿ, ಕೆಆರ್‌ಎಸ್, ಹೇಮಾವತಿ ಡ್ಯಾಂ ವಿವರ

ಕರ್ನಾಟಕದ ಜಲಾಶಯಗಳ (ಸೆಪ್ಟೆಂಬರ್ 09) ನೀರಿನ ಮಟ್ಟ: ಬಯಲುಸೀಮೆಯ ಕನಸು ನನಸಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆಯ ನೀರು ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸಿದೆ. ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ತರಳಬಾಲು ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ವಚನ ಗಾಯನದೊಂದಿಗೆ ನೀರಿಗೆ ಬಾಗಿನ ಅರ್ಪಿಸಿದರು. ಇದರೊಂದಿಗೆ ರಾಜ್ಯದ ಕೆಆರ್‌ಎಸ್, ಆಲಮಟ್ಟಿ, ಹೇಮಾವತಿ ಹಾಗೂ ಕಬಿನಿ ಜಲಾಶಯಗಳ ಇಂದಿನ ನೀರಿನ ಮಟ್ಟದ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಆಲಮಟ್ಟಿ, ಕೆಆರ್‌ಎಸ್, ಹೇಮಾವತಿ ಡ್ಯಾಂ ವಿವರ
ಆಲಮಟ್ಟಿ ಜಲಾಶಯ
ಭಾವನಾ ಹೆಗಡೆ
|

Updated on: Sep 09, 2026 | 10:35 AM

Share

ಮುಖ್ಯಾಂಶಗಳು

  • ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ಪ್ರವೇಶ, ಜನರ ಜಲಸಂಭ್ರಮ.
  • ಸಾಣೇಹಳ್ಳಿಯಲ್ಲಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯಿಂದ ಭದ್ರಾ ನೀರಿಗೆ ಬಾಗಿನ.
  • ರಾಜ್ಯದ ಪ್ರಮುಖ ಕೆಆರ್‌ಎಸ್, ಆಲಮಟ್ಟಿ ಡ್ಯಾಂಗಳ ಇಂದಿನ ನೀರಿನ ಮಟ್ಟ.

ಬೆಂಗಳೂರು, ಸೆಪ್ಟೆಂಬರ್ 09: ಬಯಲುಸೀಮೆ ಜನರ ಬಹುಕಾಲದ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಯ ನೀರು ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸಿದ್ದು, ಕೋಟೆನಾಡಿನ ಜನರಲ್ಲಿ ಹರ್ಷ ಮನೆಮಾಡಿದೆ. ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಗ್ರಾಮದಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ವಚನ ಗೀತೆಗಳ ಗಾಯನದೊಂದಿಗೆ ಭದ್ರಾ ನೀರಿಗೆ ಬಾಗಿನ ಅರ್ಪಿಸಿ ಬರಮಾಡಿಕೊಂಡರು. ಪ್ರಾಯೋಗಿಕವಾಗಿ ಕಾಲುವೆಗೆ 3 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದ್ದು, ಈ ನೀರು ಇಂದು ಸಂಜೆ ವೇಳೆಗೆ ಚಿತ್ರದುರ್ಗ ತಾಲೂಕಿನ ಗೋನೂರು ಕೆರೆಯನ್ನು ತಲುಪಲಿದೆ.ರಾಜ್ಯದ ವಿವಿಧ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ.

1. ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 519.54 ಮೀಟರ್
  • ಒಳಹರಿವು: 13,364 ಕ್ಯೂಸೆಕ್
  • ಹೊರಹರಿವು: 17,426 ಕ್ಯೂಸೆಕ್

2. ಹೇಮಾವತಿ ಜಲಾಶಯ

  • ಗರಿಷ್ಠ ಸಾಮರ್ಥ್ಯ: 2922.00 ಅಡಿ (37 TMC)
  • ಇಂದಿನ ಮಟ್ಟ: 2906.77 ಅಡಿ (24.317 TMC)
  • ಒಳಹರಿವು: 2,911 ಕ್ಯೂಸೆಕ್
  • ಹೊರಹರಿವು: ನದಿಗೆ 4,000 ಕ್ಯೂಸೆಕ್
  • ಕಾಲುವೆಗೆ 5,650 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ 2921.82 ಅಡಿ (36.929 TMC) ನೀರಿತ್ತು. ಒಳಹರಿವು 6,954 ಕ್ಯೂಸೆಕ್ ಹಾಗೂ
  • ಹೊರಹರಿವು 7,400 ಕ್ಯೂಸೆಕ್ ಇತ್ತು

3. ಕೆ.ಆರ್.ಎಸ್. ಜಲಾಶಯ

  • ಗರಿಷ್ಠ ಮಟ್ಟ: 124.80 ಅಡಿ (49.452 TMC)
  • ಇಂದಿನ ಮಟ್ಟ: 106.74 ಅಡಿ (28.533 TMC)
  • ಒಳಹರಿವು: 2,912 ಕ್ಯೂಸೆಕ್
  • ಹೊರಹರಿವು: 1,919 ಕ್ಯೂಸೆಕ್

4. ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 84.00 ಅಡಿ
  • ಇಂದಿನ ಮಟ್ಟ: 68.60 ಅಡಿ (ಸಂಗ್ರಹ: 11.01 TMC | ಲೈವ್ ಸ್ಟೋರೇಜ್: 1.20 TMC)
  • ಒಳಹರಿವು: 1,619 ಕ್ಯೂಸೆಕ್
  • ಹೊರಹರಿವು: ನದಿಗೆ 1,200 ಕ್ಯೂಸೆಕ್ (ಕಾಲುವೆಗಳಿಗೆ: 0 ಕ್ಯೂಸೆಕ್)

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’