ರಾಬಕೊವಿ ಹಾಲು ಒಕ್ಕೂಟದ ಚುನಾವಣೆಯಲ್ಲಿ ಗೆಲುವು; ಮತ್ತೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಶುರು ಮಾಡಿದ ಭೀಮಾ ನಾಯ್ಕ್

ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆಎಂಎಫ್ ಮಾಜಿ ಅಧ್ಯಕ್ಷ ಎಲ್​.ಬಿ.ಪಿ. ಭೀಮಾ ನಾಯ್ಕ್ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಮತ್ತೊಮ್ಮೆ ಅವರು ಬಳ್ಳಾರಿಯಿಂದ ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದಿದ್ದಾರೆ. ಈಗಾಗಲೇ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಾಯಕರ ನಡುವೆ ಲಾಬಿ ಜೋರಾಗಿದೆ.

ರಾಬಕೊವಿ ಹಾಲು ಒಕ್ಕೂಟದ ಚುನಾವಣೆಯಲ್ಲಿ ಗೆಲುವು; ಮತ್ತೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಶುರು ಮಾಡಿದ ಭೀಮಾ ನಾಯ್ಕ್
Bhima Naik
Updated By: ಸುಷ್ಮಾ ಚಕ್ರೆ

Updated on: Jul 10, 2025 | 8:59 PM

ಬಳ್ಳಾರಿ, ಜುಲೈ 10: ರಾಬಕೊವಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಚುನಾವಣೆಯ ಮತ ಎಣಿಕೆ ಮುಗಿದಿದೆ. ಈ ಚುನಾವಣೆಯಲ್ಲಿ ಕೆಎಂಎಫ್ ಮಾಜಿ ಅಧ್ಯಕ್ಷ ಭೀಮಾ ನಾಯ್ಕ್ (Bhima Naik) ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಪ್ರತಿಕ್ರಿಯಿಸಿರುವ ಎಲ್​.ಬಿ.ಪಿ. ಭೀಮಾ ನಾಯ್ಕ್ ನಾನು ಮತ್ತೊಮ್ಮೆ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ಆದರೆ, ಕೆಎಂಎಫ್ ಅಧ್ಯಕ್ಷರ ಆಯ್ಕೆ ಸಂಬಂಧ ಹೈಕಮಾಂಡ್ ನಿರ್ಧರಿಸಲಿದೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಸುರೇಶ್ ಸ್ಪರ್ಧೆಯ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಅಧ್ಯಕ್ಷರಾಗಬೇಕೆಂದು ಸಿಎಂ, ಡಿಸಿಎಂ, ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ, ನಾನಂತೂ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಭೀಮಾ ನಾಯ್ಕ್ ಹೇಳಿದ್ದಾರೆ.

ರಾಬಕೊವಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಮತ ಎಣಿಕೆ ಮುಕ್ತಾಯವಾಗಿದೆ. ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸೇರಿ 12 ಜನ ಚುನಾವಣೆಯಲ್ಲಿ ಗೆದ್ದಿದ್ದಾರೆ. 12 ಸ್ಥಾನಗಳಿಗೆ 27 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದರು. ಚುನಾವಣೆಯಲ್ಲಿ ಅತೀ ಹೆಚ್ಚು 183 ಮತಗಳನ್ನು ಪಡೆದು ಭೀಮಾ ನಾಯ್ಕ್ ಗೆಲುವು ಸಾಧಿಸಿದ್ದಾರೆ. ಭೀಮಾ ನಾಯ್ಕ್ ಪರ ಇರುವ 6 ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಉಳಿದ ಮತ್ತೊಂದು ಪ್ಯಾನಲ್ ನ 6 ಅಭ್ಯರ್ಥಿಗಳು ಗೆದ್ದಿದ್ದಾರೆ. ಗೆಲುವಿನ ಬಳಿಕ ಭೀಮಾ ನಾಯ್ಕ್ ಸೇರಿದಂತೆ ಗೆಲುವು ಸಾಧಿಸಿದ ಅಭ್ಯರ್ಥಿಗಳು ಸಂಭ್ರಮಾಚರಣೆ ಮಾಡಿದ್ದಾರೆ.

ಇದನ್ನೂ ಓದಿ: ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ನೀಡಿದ್ರು ಬಿಗ್​ ಅಪ್ಡೇಟ್

ಕೊಪ್ಪಳ:

* ಕೃಷ್ಣರೆಡ್ಡಿ – 106

* ಸತ್ಯನಾರಾಯಣ – 93

* ಮಂಜುನಾಥ್ – 94

* ಕಮಲಮ್ಮ – 92

ರಾಯಚೂರು:

* ಬಿ. ಪ್ರವೀಣಕುಮಾರ – 31

* ಅಮರಗುಂಡಪ್ಪ – 31

* ಭೀಮನ ಗೌಡ – 25

* ಎನ್. ಸೀತಾಲಕ್ಷ್ಮಿ – 28

ಬಳ್ಳಾರಿ:

* ಭೀಮಾ ನಾಯ್ಕ – 183

* ಮರುಳಸಿದ್ದಪ್ಪ – 165

* ಐಗೋಳಚಿನಾದನಂದ – 159

* ರತ್ನಮ್ಮ – 147

ಇದನ್ನೂ ಓದಿ: ಬಮೂಲ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮಾಜಿ ಸಂಸದ ಡಿಕೆ ಸುರೇಶ್ ಸ್ಪರ್ಧೆ

ಈ ಚುನಾವಣೆಯಲ್ಲಿ ಗೆದ್ದ ನಂತರ ಮತ್ತೊಮ್ಮೆ ತಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಭೀಮಾ ನಾಯ್ಕ್ ಹೇಳಿದ್ದಾರೆ. ನಿರ್ದೇಶಕರ ಸ್ಥಾನದಲ್ಲಿ ಗೆಲುವು ಸಾಧಿಸ್ತಿದ್ದಂತೆ ಅವರು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆ ಸುರೇಶ್ ಮತ್ತು ಭೀಮಾ ನಾಯ್ಕ್ ನಡುವೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನೇರ ಪೈಪೋಟಿ ನಡೆಯುವ ಸಾಧ್ಯತೆಯಿದೆ.

ಹಗರಿ ಬೊಮ್ಮನಹಳ್ಳಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಭೀಮಾ ನಾಯ್ಕ್ ರಾಜಕೀಯದಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಒಂದು ವೇಳೆ ಅವರು ಕೆಎಂಎಫ್ ಚುನಾವಣಾ ಕಣಕ್ಕೆ ಇಳಿದಿದ್ದೇ ಆದರೆ ಅದು ಸಿದ್ದರಾಮಯ್ಯ (ಭೀಮಾ ನಾಯ್ಕ್ ಪರ) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (ಡಿಕೆ ಸುರೇಶ್ ಪರ) ನಡುವೆ ಮತ್ತೊಮ್ಮೆ ಅಧಿಕಾರದ ಹಗ್ಗಜಗ್ಗಾಟ ನಡೆಯುವ ಸಾಧ್ಯತೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:56 pm, Thu, 10 July 25