ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಬೀದರ್‌ನ ಅಷ್ಟೂರು ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಶತಮಾನಗಳಿಂದಲೂ ಸೌಹಾರ್ದತೆಯ ಪ್ರತೀಕವಾಗಿದೆ. ಇಲ್ಲಿನ ದರ್ಗಾದಲ್ಲಿ ಮುಸ್ಲಿಮರು ಅಹ್ಮದ್ ಶಾ ಅಲಿ ವಲಿಯವರನ್ನು ಪೂಜಿಸಿದರೆ, ಹಿಂದೂಗಳು ಅಲ್ಲಮಪ್ರಭು ದೇವರನ್ನು ಆರಾಧಿಸುತ್ತಾರೆ. ಒಂದೇ ಸ್ಥಳದಲ್ಲಿ ಎರಡು ಧರ್ಮಗಳ ಈ ವಿಶಿಷ್ಟ ಪೂಜಾ ಪದ್ಧತಿಯು ಸಾಮರಸ್ಯದ ಬದುಕಿಗೆ ನಿದರ್ಶನವಾಗಿದೆ.
ಬೀದರ್, ಸೆಪ್ಟೆಂಬರ್ 09: ‘ದೇವನೂಬ್ಬ ನಾಮ ಹಲವು’ ಎಂಬಂತೆ ಬೀದರ್ ನಗರಕ್ಕೆ ಸಮೀಪದ ಅಷ್ಟೂರ ಗ್ರಾಮದ ಅಹ್ಮದ ಶಾ ಅಲಿ ವಲಿ ಬಹಮನಿ ದರ್ಗಾದ ಗುಂಬಜ್‌ಗಳು ಹಿಂದೂ ಹಾಗೂ ಮುಸ್ಲಿಂ ಸಹೋದರತ್ವ ಸಾರುವ ಪ್ರತೀಕವಾಗಿದೆ. ಬಹಮನಿ ಸುಲ್ತಾನರ ಕಾಲದಿಂದ ನಡೆದುಕೊಂಡು ಬಂದಿರುವ ಈ ಪರಂಪರೆಯಲ್ಲಿ, ಒಂದೇ ಗೋರಿಯನ್ನು ಮುಸ್ಲಿಮರು ‘ಅಹ್ಮದ್ ಅಲ್ ವಲಿ ಶಾ’ ಎಂದು ಪೂಜಿಸಿದರೆ, ಹಿಂದೂಗಳು ‘ಅಲ್ಲಮಪ್ರಭು ದೇವರು’ ಎಂದು ಭಕ್ತಿಯಿಂದ ಆರಾಧಿಸುತ್ತಾರೆ. ಪ್ರತಿವರ್ಷ ಹೋಳಿ ಹಬ್ಬದ ನಂತರ ಐದು ದಿನಗಳ ಕಾಲ ಇಲ್ಲಿ ಅದ್ಧೂರಿ ಜಾತ್ರೆ ನಡೆಯಲಿದ್ದು, ಕಲಬುರಗಿಯ ಮಾಣಿಹಾಳ ಹಾಗೂ ಆಳಂದದಿಂದ ಅಲ್ಲಮಪ್ರಭು ಗುರುಗಳು ಪಾದಯಾತ್ರೆ ನಡೆಸಿ ಬಂದು ಜಾತ್ರೆಗೆ ಚಾಲನೆ ನೀಡುತ್ತಾರೆ. ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಹಿಂದೂ ಮತ್ತು ಮುಸ್ಲಿಂ ಭಕ್ತರು ಒಟ್ಟಾಗಿ ಭಾಗವಹಿಸುವ ಮೂಲಕ ಈ ಗ್ರಾಮವು ಸೌಹಾರ್ದತೆಯ ಪ್ರತೀಕವಾಗಿ ಗಮನ ಸೆಳೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

