Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿಯುವ ನೀರಿಗಾಗಿ ಲಾಧಾ ಗ್ರಾಮಸ್ಥರ ಪರದಾಟ: ಗ್ರಾಮ ಪಂಚಾಯತ್​​ಗೆ ಮುತ್ತಿಗೆ ಹಾಕಿ ಜನರು ಆಕ್ರೋಶ

ಸ್ಥಳೀಯ ನಾಯಕರು ಅಧಿಕಾರಿಗಳು ಚುನಾವಣೆಯ ಕೆಲಸದಲ್ಲಿ ಇದ್ದಾರೆ. ಆದರೆ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಯಾರು ಕೂಡ ಸ್ಫಂದಿಸುತ್ತಿಲ್ಲ. ಕಳೆದೆರಡು ತಿಂಗಳಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಜನರ ಹಾಹಾಕಾರ ಪಡುವಂತಾಗಿದೆ. ಆದರೆ ಪಿಡಿಓ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾತ್ರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಹೀಗೆ ಮುಂದುವರೆದರೇ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಸರಕಾರಕ್ಕೆ ಎಚ್ಚರಿಸಿದ್ದಾರೆ. 

ಕುಡಿಯುವ ನೀರಿಗಾಗಿ ಲಾಧಾ ಗ್ರಾಮಸ್ಥರ ಪರದಾಟ: ಗ್ರಾಮ ಪಂಚಾಯತ್​​ಗೆ ಮುತ್ತಿಗೆ ಹಾಕಿ ಜನರು ಆಕ್ರೋಶ
ನೀರಿಗಾಗಿ ಪರದಾಟ
Follow us
ಸುರೇಶ ನಾಯಕ
| Updated By: ಗಂಗಾಧರ​ ಬ. ಸಾಬೋಜಿ

Updated on: Apr 27, 2024 | 10:11 PM

ಬೀದರ್, ಏಪ್ರಿಲ್​ 27: ಮಾಂಜ್ರಾ ನದಿಯೂ ಪಕ್ಕದಲ್ಲಿಯೇ ಇದ್ದರು ಆ ಗ್ರಾಮದ ಜನ ಕುಡಿಯುವ ನೀರಿನ (Water) ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದೆರಡು ತಿಂಗಳಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹೋರಾಟ ನಡೆಸುತ್ತಿದ್ದರೂ ಪಂಚಾಯತ್ (Panchayat) ನಿಂದಾ ಯಾವುದೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಇಂದು ಗ್ರಾಮಸ್ಥರು ಗ್ರಾಮ ಪಂಚಾಯತ್​​ಗೆ ಮುತ್ತಿಗೆ ಹಾಕುವುದರ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜಿಲ್ಲೆಯ ಔರಾದ್ ತಾಲೂಕಿನ ಲಾಧಾ ಗ್ರಾಮದಲ್ಲಿ ಕಳೆದೊಂದು ತಿಂಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದ್ದು ಗ್ರಾಮ ಪಂಚಾಯತ್ ನ ಪಿಡಿಓ ಅಧ್ಯಕ್ಷರು ಕಂಡು ಕಾಣದಂತೆ ಕುಳಿತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ಈ ಲಾಧಾ ಗ್ರಾಮದಲ್ಲಿ ಕಳೆದೆರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉದ್ಘವಿಸಿದೆ. ನಮ್ಮ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನ ಬಗೆ ಹರಿಸಿ ಎಂದು ಹತ್ತಾರು ಸಲ ಪಂಚಾಯತ್ ಅಧಿಕಾರಿಗಳಿಗೆ, ಮನವಿ ಮಾಡಿದ್ದಾರೆ. ಸ್ಥಳೀಯ ಶಾಸಕರಿಗೆ ಕೂಡ ನಮ್ಮ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಯಾರು ಕೂಡ ಗ್ರಾಮದ ಜನರ ಕುಡಿಯುವ ನೀರಿನ ದಾಹ ಇಂಗಿಸುವ ಕೆಲಸವನ್ನ ಮಾಡಿಲ್ಲ. ಹೀಗಾಗಿ ಕುಡಿಯುವ ನೀರನ್ನ ಕೊಡಿ ಎಂದು ಗ್ರಾಮಸ್ಥರು ಇಂದು ಗ್ರಾಮ ಪಂಚಾಯತ್​ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತ ಪಡಿಸಿದರು.

ಇದನ್ನೂ ಓದಿ: ರಾಜ್ಯದೆಲ್ಲೆಡೆ ಬರವಿದ್ದರೂ ಗದಗ ಲಕ್ಕುಂಡಿಯಲ್ಲಿ ಜಲ ಸಮೃದ್ಧಿ! ಬಿರು ಬೇಸಿಗೆಯಲ್ಲೂ ಇಲ್ಲಿದೆ ಹಚ್ಚಹಸಿರ ನೋಟ

ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವ ಕಾರಣ ಗ್ರಾಮಸ್ಥರು ಕಳೆದೆರಡು ತಿಂಗಳಿಂದ ಅಕ್ಕಪಕ್ಕದಲ್ಲಿರುವ ರೈತರ ಹೊಲಗಳಿಗೆ ಹೋಗಿ ಕುಡಿಯುವ ನೀರು ತರುವಂತಾ ಸ್ಥಿತಿಯಿಲ್ಲಿ ನಿರ್ಮಾಣವಾಗಿದೆ ಎಂದು ಇಲ್ಲಿನ ಮಹಿಳೆಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ನೀರಿನ ಸಮಸ್ಯೆಯ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ ಅವರು ಹತ್ತಾರು ಸುಳ್ಳಿನ ಆಶ್ವಾಸನೆಯನ್ನ ಕೊಟ್ಟು ಗ್ರಾಮಸ್ಥರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಜನರ ಕುಡಿತಯುವ ನೀರಿನ ಸಮಸ್ಯೆ ಮಾತ್ರ ಬಗೆ ಹರಿದಿಲ್ಲ. ನೀರಿನ ಸಮಸ್ಯೆ ಹೆಚ್ಚಿರುವ ಕಾರಣ ಜನರು ಕುಡಿಯುವ ನೀರಿಗಾಗಿ ಪ್ರತಿನಿತ್ಯ ಜಗಳವಾಡುವುದು ತಪ್ಪುತ್ತಿಲ್ಲ. ಜೊತೆಗೆ ಕುಡಿಯುವ ನೀರಿಗೆ ಪರದಾಡುವುದು ಮಾತ್ರ ತಪ್ಪಿಲ್ಲ. ಕುಡಿಯುವ ನೀರು ನಲ್ಲಿಯಲ್ಲಿ ಬಾರದೇ ಇರೋದ್ರಿಂದ ಜನತೆ ಕಂಗೆಟ್ಟಿದ್ದಾರೆ.

ಪ್ರತಿನಿತ್ಯ ಕುಡಿಯುವ ನೀರಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಗ್ರಾಮದಲ್ಲಿ ಇರೋ ಒಂದೆರಡು ಬೋರ್ ವೆಲ್ ಗಳು ಕೂಡ ಹಾಳಾಗಿವೆ. ಅದನ್ನ ರೀಪೇರಿ ಮಾಡುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಹೀಗಾಗಿ ಜನರು ಕೂಡ ಕುಡಿಯುವ ನೀರಿಗೆ ಪರದಾಡುತ್ತಿದ್ದು ನೀರಿಗಾಗಿ ಜಗಳ ಮಾಡಿಕೊಂಡು ಪೊಲೀಸ ಠಾಣೆಯ ಮೆಟ್ಟಿಲು ತುಳಿಯುವಂತಾ ಸ್ಥಿತಿ ಇಲ್ಲಿದೆ. ಕೂಡಲೇ ಜಿಲ್ಲಾಡಳಿತ ಕುಡಿಯುವ ನೀರಿನ ವ್ಯವಸ್ಥೆಯನ್ನ ಕಲ್ಪಿಸಬೇಕೆಂದು ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಬೀದರ್​: ಅಕಾಲಿಕ ಮಳೆಗೆ ಉದುರಿದ ಮಾವು; ರೈತ ಕಂಗಾಲು

ಗ್ರಾಮಸ್ಥರು ಕುಡಿಯುವ ನೀರಿನ ದಾಹ ಇಂಗಿಸುವ ಉದ್ದೇಶದಿಂದ ಈ ಗ್ರಾಮದಲ್ಲಿಯೇ ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಿ ಜಲ ಜೀವನ್ ಮೀಷನ್ ಯೋಜನೆ ಕಾಮಗಾರಿ ಮಾಡಲಾಗಿದೆ. ಈ ಕಾಮಗಾರಿ ಕಳಪೆಗುಣಮಟ್ಟದಿಂದಾ ಕೂಡಿದ್ದೂ ಗ್ರಾಮದ ಜನರಿಗೆ ಈ ಯೋಜನೆಯಿಂದ ಒಂದು ಹಣ ನೀರು ಕೂಡ ಬರುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಸ್ಥಳೀಯ ನಾಯಕರು ಅಧಿಕಾರಿಗಳು ಚುನಾವಣೆಯ ಕೆಲಸದಲ್ಲಿ ಇದ್ದಾರೆ. ಆದರೆ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಯಾರು ಕೂಡ ಸ್ಫಂದಿಸುತ್ತಿಲ್ಲ. ಕಳೆದೆರಡು ತಿಂಗಳಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಜನರ ಹಾಹಾಕಾರ ಪಡುವಂತಾಗಿದೆ. ಆದರೆ ಪಿಡಿಓ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾತ್ರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಹೀಗೆ ಮುಂದುವರೆದರೇ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಸರಕಾರಕ್ಕೆ ಎಚ್ಚರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.