AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರ ಕಲ್ಯಾಣ ಕರ್ನಾಟಕ ಭಾಗದ 16,000 ಹುದ್ದೆ ಭರ್ತಿ, ಮುಂದೆ ಹೆಣ್ಣು ಮಕ್ಕಳ ಅಭಿವೃದ್ಧಿಗೆ ವಿಶೇಷ ಯೋಜನೆ: ಸಿಎಂ ಘೋಷಣೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೀಘ್ರ 16000 ಸಾವಿರ ಹುದ್ದೆ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಹೆಣ್ಣು ಮಕ್ಕಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವುದಾಗಿ ಅವರು ತಿಳಿಸಿದ್ದಾರೆ.

ಶೀಘ್ರ ಕಲ್ಯಾಣ ಕರ್ನಾಟಕ ಭಾಗದ 16,000 ಹುದ್ದೆ ಭರ್ತಿ, ಮುಂದೆ ಹೆಣ್ಣು ಮಕ್ಕಳ ಅಭಿವೃದ್ಧಿಗೆ ವಿಶೇಷ ಯೋಜನೆ: ಸಿಎಂ ಘೋಷಣೆ
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
TV9 Web
| Edited By: |

Updated on:Dec 05, 2021 | 10:00 PM

Share

ಬೀದರ್: ಶೀಘ್ರ ಕಲ್ಯಾಣ ಕರ್ನಾಟಕ ಭಾಗದ 16 ಸಾವಿರ ಹುದ್ದೆ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಪರ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು. ಈಗಾಗಲೇ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಕೂಡಾ ಸಿಕ್ಕಿದೆ. ಸಿಎಂ ಆದ 1 ಗಂಟೆಯಲ್ಲೇ ರೈತರ ಮಕ್ಕಳಿಗೆ ಯೋಜನೆ ಜಾರಿ ಮಾಡಲಾಯಿತು. ಹಿಂದಿನ‌ ಕಾಂಗ್ರೆಸ್ ಸರ್ಕಾರಕ್ಕೆ ಏಕೆ ಇದು‌ ಸಾಧ್ಯವಾಗಿರಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಮಾರ್ಚ್ 31ರೊಳಗೆ ಎಲ್ಲರಿಗೂ ಸೂರು ಕಲ್ಪಿಸುತ್ತೇವೆ ಎಂದು ಇದೇ ವೇಳೆ ಸಿಎಂ ನುಡಿದಿದ್ದಾರೆ. ಮುಂಬರುವ ದಿನದಲ್ಲಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿಲಾಗುವುದು ಎಂದೂ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಬೀದರ್ ಜಿಲ್ಲೆಗೆ ಅಧಿವೇಶನ ಮುಗಿದ ಬಳಿಕ ಹತ್ತಾರು ಯೋಜನೆ ಭೂಮಿ ಪೂಜೆ ಮಾಡುವುದಾಗಿಯೂ ಬೊಮ್ಮಾಯಿ ಭರವಸೆ ನೀಡಿದ್ದಾರೆ.

‘‘ಬೀದರ್ ಜಿಲ್ಲೆ ಕರ್ನಾಟಕ ರಾಜ್ಯದ ಕಿರಿಟ. ಕನ್ನಡಾಂಬೆಯ ಕಿರಿಟ ಕೂಡಾ ಹೌದು. ಬೀದರ್ ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಾನು ಇಲ್ಲಿಗೆ ಬಂದಿರುವೆ. ನಮ್ಮ ಸರಕಾರದ ಕಾರ್ಯಕ್ರಮಗಳು ಗ್ರಾಮದಿಂದ ಆರಂಭವಾಗುತ್ತವೆ. ನಾನು ಮುಖ್ಯಮಂತ್ರಿಯಾದ ಒಂದೇ ಗಂಟೆಯಲ್ಲಿ ರೈತ‌ ಮಕ್ಕಳ ಅಭಿವೃದ್ಧಿ ಗೆ ಒಂದು‌‌ಸಾವಿರ ಕೋಟಿ ಕೊಟ್ಟೆ. ಹಿಂದಿನ‌ ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಇದು‌ ಸಾಧ್ಯವಾಗಲಿಲ್ಲ’’ ಎಂದು ಸಿಎಂ ಕೇಳಿದ್ದಾರೆ. ‘‘ಕಾರ್ಮಿಕರ ಶ್ರಮದಲ್ಲಿ, ರೈತರ ಬೆವರಿನಲ್ಲಿ ದೇವರಿದ್ದಾನೆ. ಮಾರ್ಚ್ 31 ರೊಳಗೆ ಎಲ್ಲರಿಗೂ ಸೂರು ಕಲ್ಪಿಸಿಕೊಡಲಾಗುವುದು. ನಮ್ಮ ಸರಕಾರದ ಲಕ್ಷ ಗ್ರಾಮದ ಕಡೆಗಿದೆ. ಅದಕ್ಕೆ ಇದನ್ನು ಹೇಳುತ್ತಿರುವೆ’’ ಎಂದು ಸಿಎಂ ನುಡಿದಿದ್ದಾರೆ.

ಕಾಂಗ್ರೆಸ್ ನಲ್ಲಿ ಕೆಲವರು ಜನಪ್ರಿಯರಿದ್ದಾರೆ ಆದರೆ ಅವರು ಜನರಿಗಿಲ್ಲ ಎಂದು ವ್ಯಂಗ್ಯವಾಡಿದ ಸಿಎಂ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಏಕೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಾಗಿಲ್ಲ ಎಂದು ಸಿಎಂ ಬೊಮ್ಮಾಯಿ ವಿಪಕ್ಷವನ್ನು ಕುಟುಕಿದ್ದಾರೆ. ‘‘ಕಾಂಗ್ರೆಸ್ ಪಕ್ಷಕ್ಕೆ ವಯಸ್ಸಾಗಿದೆ ಎಂದು ಜನ ತಿರಸ್ಕರಿಸಿದ್ದಾರೆ. ಅಧಿಕಾರ ಇಲ್ಲವೆಂದು ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಅಧಿಕಾರದಲ್ಲಿದ್ದಾಗ ಏಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಪಡಿಸಿಲ್ಲ’’ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ನ ಹಣ ಬಲ ಬಿಜೆಪಿಯ ಜನ ಬಲದ ನಡುವೆ ಸಂಘರ್ಷವಿದೆ. ಹಣ ಹಾಗೂ ಜನ ಬಲದ ನಡುವೆ ಹೋರಾಟ ನಡೆದಾಗ ಗೆದ್ದದ್ದು ಜನ ಬಲ. ಇದನ್ನು ನಾನು ಕಾಂಗ್ರೆಸ್ ನಾಯಕರಿಗೆ ಹೇಳಲು ಇಚ್ಚಿಸುವೆ. ಕಾಂಗ್ರೆಸ್ ನಲ್ಲಿ ಕೆಲವರು ಜನಪ್ರಿಯರಿದ್ದಾರೆ ಆದರೆ ಅವರು ಜನರಿಗಿಲ್ಲ ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊಕ್ಕರೆ ಇದ್ದ ಹಾಗೆ; ಆರೋಗ್ಯ ಸಚಿವ ಕೆ ಸುಧಾಕರ್ ವಾಗ್ದಾಳಿ

ನಾನು ದೆಹಲಿಗೆ ಹೋದಾಗ ನನಗಾರೂ ಒನ್ ಗ್ಲಾಸ್ ಕಾಫಿ ಕೊಡಲಿಲ್ಲ: ಮಂಡ್ಯದಲ್ಲಿ ದೇವೇಗೌಡ

Published On - 9:58 pm, Sun, 5 December 21