ಬೀದರ್: ಎಲ್ಐಸಿ ಮಾಡಿಸುವುದಾಗಿ 165 ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ ಆರೋಪ
ಭಾಲ್ಕಿ ತಾಲೂಕಿನಲ್ಲಿ 339 ಅಂಗನವಾಡಿ ಕಾರ್ಯಕರ್ತೆಯರು, 279 ಅಂಗನವಾಡಿ ಸಹಾಯಕಿಯರು ಹೀಗೆ ಒಟ್ಟು 618 ಜನರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 165 ಜನ ಅಂಗನವಾಡಿ ಕಾರ್ಯಕರ್ತೆಯವರು ಹಾಗೂ ಸಹಾಯಕಿಯರು ಮಾತ್ರ ಎಲ್ಐಸಿ ಮಾಡಿಸಿದ್ದಾರೆ.
ಬೀದರ್: ಮುಂದಿನ ಜೀವನಕ್ಕಾಗಿ ಹಣ ಕೂಡಿಡಬೇಕು ಎನ್ನುವ ಉದ್ದೇಶದಿಂದ ಅಂಗನವಾಡಿ ಕಾರ್ಯಕರ್ತೆಯರು ಡಿಎಲ್ಐಸಿ ಮಾಡಿಸಿದರು. ಅದರಂತೆ ಪ್ರತಿ ತಿಂಗಳು ಇಂತಿಷ್ಟು ಹಣ, ತಮ್ಮ ಬ್ಯಾಂಕ್ ಖಾತೆಯಿಂದ ಕಟ್ ಆಗತಾ ಇತ್ತು. ಆದರೆ ಅನುಮಾನ ಬಂದು ಎಲ್ಐಸಿ ಆಫೀಸ್ಗೆ ಬಂದು ವಿಚಾರಿಸಿದಾಗ ನಿಜ ಬಣ್ಣ ಬಯಲಾಗಿದೆ. ಅದು ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಎಲ್ಐಸಿ ಬಾಂಡ್ ಪೇಪರ್ ತೋರಿಸಿ ತಮ್ಮ ಮೇಲಾಧಿಕಾರಿ ಸಿಡಿಪಿಓ ಮಂಗಲಾ ಉಮರ್ಗೆ ಹಾಗೂ ತಮ್ಮ ಇಲಾಖೆಯ ಸಿಬ್ಬಂಧಿಯ ವಿರುದ್ಧ ಘೊಷಣೆ ಕೂಗುತ್ತಿದ್ದಾರೆ. ಇದಕ್ಕೆ ಕಾರಣ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸೇರಿ 165 ಮಂದಿಯ ಎಲ್ಐಸಿ ಹಣವನ್ನು ಕಟ್ಟದೆ ಗೋಲ್ ಮಾಲ್ ಮಾಡಲಾಗಿದೆ.
ಪ್ರತಿ ತಿಂಗಳು 400 ರಿಂದ 700 ರೂಪಾಯಿ ಹಣವನ್ನು ತಮ್ಮ ಬ್ಯಾಂಕ್ ಖಾತೆಯಿಂದ ಕಟ್ ಮಾಡಿಕೊಂಡು ಆ ಹಣವನ್ನು ಎಲ್ಐಸಿ ಕಂಪನಿಗೆ ಕಟ್ಟಿಲ್ಲ, ಹೀಗಾಗಿ ಪ್ರತಿ ತಿಂಗಳು ಅಂದಾಜು 1 ಲಕ್ಷ 20 ಸಾವಿರ ವರೆಗೆ ಹಣವನ್ನು ಮಹಿಳಾ ಮತ್ತು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಲಪಟಾಯಿಸಿದ್ದಾರೆಂದು ಅಂಗನವಾಡಿ ಕಾರ್ಯಕರ್ತೆ ಶೋಭಾವತಿ ಆರೋಪಿಸಿದ್ದಾರೆ.
ಭಾಲ್ಕಿ ತಾಲೂಕಿನಲ್ಲಿ 339 ಅಂಗನವಾಡಿ ಕಾರ್ಯಕರ್ತೆಯರು, 279 ಅಂಗನವಾಡಿ ಸಹಾಯಕಿಯರು ಹೀಗೆ ಒಟ್ಟು 618 ಜನರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 165 ಜನ ಅಂಗನವಾಡಿ ಕಾರ್ಯಕರ್ತೆಯವರು ಹಾಗೂ ಸಹಾಯಕಿಯರು ಮಾತ್ರ ಎಲ್ಐಸಿ ಮಾಡಿಸಿದ್ದಾರೆ. ಜೊತೆಗೆ ಇವರು ಎಲ್ಐಸಿ ಮಾಡಿಸಿದ್ದಕ್ಕೆ ಬಾಂಡ್ ಪೇಪರ್ ಅನ್ನು ಸಹ ಎಲ್ಐಸಿ ಅಧಿಕಾರಿಗಳು ಕೊಟ್ಟಿದ್ದಾರೆ. ಹೀಗಾಗಿ ಪ್ರತಿಯೊಬ್ಬರ ಅಕೌಂಟ್ನಿಂದ ಪ್ರತಿ ತಿಂಗಳು ಎಲ್ಐಸಿಗೆ ಎಷ್ಟು ಕಟ್ಟಬೇಕು ಅಷ್ಟು ಹಣವನ್ನು ಬ್ಯಾಂಕ್ ಅಕೌಂಟ್ ನಿಂದ ಕಟ್ ಆಗುತ್ತಿತ್ತು. ಆದರೆ ಇವರು ಕಟ್ಟಿದ ಹಣ ಮಾತ್ರ ಕಳೆದ ಮೂರು ವರ್ಷದಿಂದ ಅವರ ಎಲ್ಐಸಿ ಬ್ಯಾಂಕ್ ಖಾತೆಗೆ ಜಮೆಯಾಗಿಲ್ಲ.
ಬ್ಯಾಂಕ್ ಅಕೌಂಟ್ನಿಂದ ಪ್ರತಿ ತಿಂಗಳು ಕಟ್ ಆಗುತ್ತಿದ್ದ ಹಣ ಎಲ್ಲಿಗೆ ಹೋಯಿತು ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿಯೇ ಇದೆ. ಆದರೆ ಸ್ವಲ್ಪ ಹಣ ಕೂಡಿಡಬೇಕು ಎಂದು ಎಲ್ಐಸಿ ಮಾಡಿದ ಬಡ ಅಂಗನವಾಡಿ ಕಾರ್ಯಕರ್ತೆಯರು ಈಗ ದಿಕ್ಕೆ ತೋಚದಂತಾಗಿದ್ದಾರೆ. ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ಮಾಡುವುದರ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಭಾಲ್ಕಿ ಸಿಡಿಪಿಓ ಮಂಗಲಾ ಉಮರ್ಗೆ, ಈ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ತಕ್ಷಣವೇ ಅಂಗನವಾಡಿ ಕಾರ್ಯಕರ್ತೆಯರಿಗೆ ಅದ ಸಮಸ್ಯೆಯನ್ನು ಪರಿಶೀಲಿಸಿ ಪರಿಹರಿಸುವ ಕುರಿತು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ: ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗೆ ವಂಚನೆ? ಸಿನಿಮಾ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಬಂಧನ
ಡಿಸಿಸಿ ಬ್ಯಾಂಕ್‌ಗೆ ವಂಚನೆ ಕೇಸ್; 20 ವರ್ಷ ಬಳಿಕ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ತುಮಕೂರಿನ 2ನೇ ಸತ್ರ ನ್ಯಾಯಾಲಯ