ಭಾಲ್ಕಿ: ಚಳಕಾಪುರ ಹನುಮಾನ್ ಮಂದಿರದಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ, ಆಂಜನೇಯನ ಸಂಜೀವಿನಿ ಬೆಟ್ಟವೂ ಇಲ್ಲಿದೆ
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮಕ್ಕೂ ಶ್ರೀರಾಮನಿಗೂ ನಂಟಿದೆ. ಹನುಮ ಸಂಜೀವಿನಿ ಪರ್ವತ ತೆಗೆದುಕೊಂಡು ಹೋಗುವಾಗ ಅದರ ಸ್ವಲ್ಪ ಮಣ್ಣು ಇಲ್ಲಿ ಬಿದ್ದು ಬೆಟ್ಟ ಸೃಷ್ಟಿಯಾಗಿದೆ. ವರ್ಷಕ್ಕೊಮ್ಮೆಯಾದರೂ ಈ ಬೆಟ್ಟದಲ್ಲಿರುವ ಚಾಳಕಾದೇವಿಯನ್ನು ದರ್ಶನ ಮಾಡಿದರೆ ಪುಣ್ಯ ಬರುತ್ತದೆಂಬ ನಂಬಿಕೆ ನೂರಾರು ವರ್ಷದಿಂದ ಇದೆ.
ಅದು ಸಾವಿರಾರು ವರ್ಷಗಳ ಇತಿಹಾಸವಿರುವ ಸಂಜೀವಿನಿ ಬೆಟ್ಟ. ಹನುಮ ಸಂಜೀವಿನಿ ಪರ್ವತ ತೆಗೆದುಕೊಂಡು ಹೋಗುವಾಗ ಅದರ ಸ್ವಲ್ಪ ಮಣ್ಣು ಇಲ್ಲಿ ಬಿದ್ದು ಬೆಟ್ಟ ಸೃಷ್ಟಿಯಾಗಿದೆ. ಈ ಬೆಟ್ಟದಲ್ಲಿ ಚಳಾಕಾದೇವಿ ನೆಲೆಸಿದ್ದು ಗಣೇಶ, ಶಿವನ ಮೂರ್ತಿಗಳು ಇಲ್ಲಿವೆ. ಈ ಬೆಟ್ಟದಲ್ಲಿರುವ ಚಾಳಕಾದೇವಿಗೆ ವರ್ಷಕ್ಕೆ ಒಂದು ಸಲವಾದರೂ ಬಂದು ದರ್ಶನ ಮಾಡಿದರೆ ಪುಣ್ಯ ಬರುತ್ತದೆಂಬ ನಂಬಿಕೆ ನೂರಾರು ವರ್ಷದಿಂದ ಇದೆ.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮಕ್ಕೂ ಶ್ರೀರಾಮನಿಗೂ ನಂಟಿದೆ. ಇಲ್ಲಿನ ಹನುಮಾನ್ ಮಂದಿರಕ್ಕೆ 2 ಸಾವಿರ ವರ್ಷಗಳಷ್ಟು ಇತಿಹಾಸವಿದೆ. ಇಲ್ಲಿ ಪ್ರತಿದಿನ ತ್ರಿಕಾಲ ಪೂಜೆ ನಡೆಯುತ್ತದೆ. ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ, ಮಧ್ಯಾಹ್ನ 12 ಗಂಟೆಗೆ ಹಾಗೂ ಸಾಯಂಕಾಲ 7 ಗಂಟೆಗೆ… ಹೀಗೆ ಮೂರು ಬಾರಿ ಹನುಮನಿಗೆ ಪೂಜೆ ನಡೆಯುತ್ತದೆ.
ದೇವಾಲಯದ ಇತಿಹಾಸವನ್ನ ನೋಡಿದರೆ ತ್ರೇತಾಯುಗದಲ್ಲಿ ಚಾಳಿಕಾಸುರ ಹಾಗೂ ಚಾಳಿಕಾದೇವಿ ಅನ್ನೋ ಇಬ್ಬರು ರಾಕ್ಷ ದಂಪತಿಯಿದ್ದರಂತೆ ಆ ದಂಪತಿಯ ಪೈಕಿ ಚಾಳಿಕಾಸುರನ ಹೆಂಡತಿ ಚಾಳಿಕಾದೇವಿಯು ಅಪ್ಪಟ ರಾಮನ ಭಕ್ತೆಯಾಗಿದ್ದಳಂತೆ. ತನ್ನ ಹೆಂಡತಿಯ ಆಸೆಯಂತೆ ಚಾಳಿಕಾಸುರ ರಾಕ್ಷಸನು ಚಾಳಿಕಾದೇವಿಗೆ ಒಂದೇ ಒಂದು ರಾತ್ರಿಯಲ್ಲಿ ದೇವಾಲಯವೊಂದನ್ನ ನಿರ್ಮಾಣ ಮಾಡಿ ಚಾಳಿಕಾದೇವಿಗೆ ಉಡುಗೊರೆಯಾಗಿ ಕೊಡುತ್ತಾನಂತೆ. ಆ ದೇವಾಲಯ ನಿರ್ಮಾಣವಾದ 5 ಗಂಟೆಯಲ್ಲಿ ದೇವಾಲಯದ ಗರ್ಭಗುಡಿಯಲ್ಲಿ ಹನುಮನ ಮೂರ್ತಿ ಉದ್ಬವವಾಗಿ ಅಚ್ಚರಿಯನುಂಟು ಮಾಡಿತ್ತು. ಹೀಗಾಗಿ ಚಳಕಾಪುರ ಅನುಮಂತದೇವಾಲಯವನ್ನ ಉದ್ಬವ ಮೂರ್ತಿ ಎಂದು ಕರೆಯಲಾಗುತ್ತದೆ.
ದೇಗುಲದ ಬಾಗಿಲು ಉತ್ತರಾಭಿಮುಖವಾಗಿದೆ. ಆಂಜನೇಯ ಸ್ವಾಮಿಯ ಮುಖ ದಕ್ಷಿಣಾಭಿಮುಖವಾಗಿದ್ದು ಕರ್ನಾಟಕದಲ್ಲಿಯೆ ಅತ್ಯಂತ ಸುಂದರವಾದ ಮೂರ್ತಿಯಾಗಿದೆ. ಈತ ಬಹಳ ಶಕ್ತಿಶಾಲಿ ಆಂಜನೇಯ ಈತನನ್ನು ಸಂಕಲ್ಪ ಸಿದ್ದಿ ದೇವರು ಎನ್ನುತ್ತಾರೆ. ಇನ್ನು ಹನುಮಾನ್ ಮಂದಿರದ ಪಕ್ಕದಲ್ಲಿರುವ ಸಂಜೀವಿನಿ ಪರ್ವತಕ್ಕೂ ಕೂಡಾ ಜನರು ಬಂದು ತಮ್ಮ ಇಷ್ಟಾರ್ಥಗಳನ್ನ ನೇರವೇರಿಸಿ ಅಂತಾ ಕಲ್ಲು, ಗೋಡೆ, ಕಂಬಗಳನ್ನ ನಿರ್ಮಿಸಿಕೊಟ್ಟು ದೇವರಲ್ಲಿ ಕೇಳಿಕೊಳ್ಳುತ್ತಾರೆ.
ಇಲ್ಲಿನ ಸಂಜೀವಿನಿ ಪರ್ವತಕ್ಕೆ ಬಂದು ಇಲ್ಲಿನ ಚಿಕ್ಕ ಚಿಕ್ಕ ಕಲ್ಲುಗಳಿಂದ ಕಂಬ ನಿರ್ಮಾಣ ಮಾಡಿದರೆ ತಮ್ಮ ಮನೆಗಳಲ್ಲಿ ಯಾವುದೇ ರೀತಿ ಕಷ್ಟಗಳು ಬರುವುದಿಲ್ಲ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಇಲ್ಲಿನ ಸಜೀವಿನಿ ಪರ್ವತಕ್ಕೆ ಪ್ರತಿ ಶನಿವಾರ ಅಮಾವಾಸ್ಯೆಯ ದಿನ ಜನರು ಸಾಗರೋಪಾದಿಯಲ್ಲಿ ಬಂದು ದೇವರ ದರ್ಶನ ಪಡೆಯುತ್ತಾರೆ.
ಸಜೀವಿನಿ ಪರ್ವತ ಇರುವ ಈ ಸ್ಥಳ ರೋಗಗಳನ್ನ ವಾಸಿ ಮಾಡುವ, ಬೇಡಿದ್ದನ್ನ ಕರುಣಿಸುವ ಸ್ಥಳ ಅಂತಲೇ ಪ್ರಸಿದ್ಧಿ ಪಡೆದುಕೊಂಡಿದೆ. ಇಲ್ಲಿನ ಚಾಳಕಾದೇವಿ ಬೆಟ್ಟಕ್ಕೆ ಸಂಜೀವಿನಿ ಪರ್ವತ ಅಂತಲೂ ಭಕ್ತರು ಕರೆಯುತ್ತಾರೆ. ತ್ರೇತಾಯುಗದಲ್ಲಿ ಆಂಜನೇಯ ಹಿಮಾಲಯದಿಂದ ಸಂಜೀವಿನಿ ಪರ್ವತ ಕೈಯಲ್ಲಿಟ್ಟುಕೊಂಡು ಹೋಗುವಾಗ ಚಳಕಾಪುರದಲ್ಲಿ ವಿಶ್ರಾಂತಿ ಪಡೆದಿದ್ದನಂತೆ. ಈ ವೇಳೆ ಚಾಳಕಾದೇವಿ ಆಂಜನೇಯನಿಗೆ ಉಪಚಾರ ಮಾಡಿದ್ದರು. ಈ ವೇಳೆ ಆಂಜನೇಯ ಕೈಯಲ್ಲಿದ್ದ ಬೆಟ್ಟದ ಒಂದು ತುಂಡು ಇಲ್ಲಿ ಉಳಿದುಕೊಂಡಿದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹೀಗಾಗಿ ಈ ಬೆಟ್ಟಕ್ಕೆ ಸಂಜೀವಿನಿ ಬೆಟ್ಟ ಅಂತ ಕರೆಯಲಾಗುತ್ತದೆ.
ಇನ್ನು ಈ ಪರ್ವತದ ಸುತ್ತಮುತ್ತಲಿರುವ ಜಾಗ ಕಪ್ಪು ಮಣ್ಣಿನಿಂದ ಆವೃತವಾಗಿದೆ. ಇಲ್ಲಿನ ಈ ಪರ್ವತದ ಮಣ್ಣು ಮಾತ್ರ ಕೆಂಪಾಗಿದೆ ಅನ್ನುವುದು ವಿಶೇಷವಾಗಿದೆ. ಹೀಗಾಗಿ ಸ್ಥಳವು ದೇವಸ್ಥಾನ ಭಕ್ತರನ್ನ ಆಕರ್ಷಿಸುವ ಸ್ಥಳವಾಗಿದೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ದೇಶದ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನವನ್ನ ಪಡೆದುಕೊಳ್ಳುತ್ತಾರೆ.
ನೂರಾರು ವರ್ಷಗಳಿಂದಲೂ ಅಸಂಖ್ಯಾತ ಭಕ್ತರು ಹನುಮನನ್ನ ಪೂಜಿಸುತ್ತಿದ್ದಾರೆ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗದಿಂದ ಭಕ್ತರು ಆಗಮಿಸುವ ಪುಣ್ಯ ಸ್ಥಳವಾಗಿದೆ. ಸರಿ ಸುಮಾರು ಐನೂರು ವರ್ಷಗಳಷ್ಠು ಹಳೆದಾದ ಇಲ್ಲಿನ ಬೆಟ್ಟ ಹನಮಾನ್ ದೇವಸ್ಥಾನ ಇಂದಿಗೂ ಭಕ್ತರನ್ನ ತನ್ನತ್ತ ಸೆಳೆಯುತ್ತಿದೆ. ಈ ದೇವಸ್ಥಾನ ವಿಶೇಷತೆಯನ್ನ ನೋಡಿದರೆ ಎಂತಹವರಿಗೂ ಅಶ್ಚರ್ಯವಾಗದೇ ಇರದು ಅಂತಹ ಪವಾಡ ಇಲ್ಲಿ ನಡೆಯುತ್ತದೆ. ಜೊತೆಗೆ ಬೆಟ್ಟದಲ್ಲಿ ನೆಲೆನಿಂತಿರುವ ಚಾಳಕಾದೇವಿ ಇಲ್ಲಿಗೆ ಬರುವ ಭಕ್ತರ ಇಷ್ಟಾರ್ಥಗಳನ್ನ ಈಡೇರಿಸುತ್ತಾಳೆ ಅಂತಾ ಇಲ್ಲಿನ ಜನರು ಹೇಳುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:10 pm, Thu, 18 January 24