ಬ್ರಿಟನ್​​ ಸಂಸತ್​ನಲ್ಲಿ ಬಸವಣ್ಣನ ವಚನ ಪಠಿಸಿ ಗಮನ ಸೆಳೆದ ಬೀದರ್ ಯುವಕ ಆದೀಶ್ ವಾಲಿ: ಕೊಟ್ಟ ಕಾರಣ ಇಲ್ಲಿದೆ ನೋಡಿ

ಬೀದರ್ ಯುವಕ ಆದೀಶ್ ವಾಲಿ ಬ್ರಿಟನ್​ ಸಂಸತ್​​ನಲ್ಲಿ ಕನ್ನಡದ ಕಲರವ ಮೂಡಿಸಿದ್ದಾರೆ. ಯುಕೆ ಸಂಸತ್​ನಲ್ಲಿ ಸಾಂಸ್ಕೃತಿಕ ನಾಯಕ ಬಸವೇಶ್ವರರ ‘ಇವನಾರವ’ ವಚನ ಪಠಿಸಿದ್ದಾರೆ. ಈ ಮೂಲಕ ಬ್ರಿಟಿಷರ ನಾಡಿನಲ್ಲಿ ಕನ್ನಡದ ಕಂಪು ಮೊಳಗಿಸಿದ ಯುವಕ, ಕನ್ನಡಿಗರ ಮತ್ತು ಬಸವಾಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಜತೆಗೆ, ‘ಟಿವಿ9’ ಜತೆ ಮಾತನಾಡಿ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ. ಆದೀಶ್ ವಾಲಿ ಮಾತಿನ ವಿಡಿಯೋ ಹಾಗೂ ವರದಿ ಇಲ್ಲಿದೆ ನೋಡಿ.

Follow us
ಸುರೇಶ ನಾಯಕ
| Updated By: ಗಣಪತಿ ಶರ್ಮ

Updated on:Oct 02, 2024 | 10:45 AM

ಬೀದರ್, ಅಕ್ಟೋಬರ್ 2: ಯುಕೆ ಸಂಸತ್​​​ನಲ್ಲಿ ಬಸವೇಶ್ವರರ ‘ಇವನಾರವ ಇವನಾರವ’ ವಚನ ಪಠಿಸಿ ಬೀದರ್​​ನ ಆದೀಶ್ ವಾಲಿ ಕನ್ನಡ ಪ್ರೇಮ ಮೆರೆದಿದ್ದಾರೆ. ಇದೀಗ, ಬ್ರಿಟಿಷರ ನಾಡಿನಲ್ಲಿ ಕನ್ನಡದ ಕಂಪು ಮೊಳಗಿಸಿದ ಬೀದರ್ ಯುವಕನಿಗೆ ಬಸವಾಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಹೊಂದಿರುವ ಬೀದರ್ ಜಿಲ್ಲೆಯ ವಿದ್ಯಾರ್ಥಿಯೊಬ್ಬ ವಿಶೇಷ ಸಾಧನೆ ಮಾಡಿದ್ದಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಲಂಡನ್ ಸಂಸತ್​ನಲ್ಲಿ ಬಸವಣ್ಣವರ ವಚನ ಪಠಿಸಿದ ಯುವಕ ಬೀದರ್ ಜಿಲ್ಲೆಯರು. ಬೀದರ್‌ನ ಡಾ. ರಜನೀಶ ವಾಲಿ ಪುತ್ರ ಆದಿಶ್ ವಾಲಿ ಪಿಯುಸಿ ವರೆಗೆ ಬೀದರ್‌ನಲ್ಲಿ ಅಭ್ಯಾಸ ಮಾಡಿ ನಂತರ ಲಂಡನ್​​ನಲ್ಲಿರುವ ಪ್ರತಿಷ್ಠಿತ ಕೋವೆಂಟ್ರಿ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ.

ಯುಕೆ ಕೌನ್ಸಿಲ್‌ನ ಮೊದಲ ಭಾರತೀಯ ಸದಸ್ಯ

ಲಂಡನ್, ಯುಕೆ ಕೌನ್ಸಿಲ್‌ನ ಮೊದಲ ಭಾರತೀಯ ಸದಸ್ಯ ಕೂಡಾ ಆಗಿರುವ ಆದೇಶ ವಾಲಿ ವಿದೇಶದಲ್ಲಿ ಕನ್ನಡದ ಕಂಪು ಮೂಡಿಸಿದ್ದಾರೆ. ಆದೇಶ ರಜನೀಶ್ ವಾಲಿ ಇಂಗ್ಲೆಂಡಿನ ಸಂಸತ್ ಭವನದಲ್ಲಿ ಕನ್ನಡದ ಕಲರವ ಮೂಡಿಸಿದ್ದಾರೆ. ವಿಶ್ವಗುರು ಬಸವೇಶ್ವರರ ‘ಇವನಾರವ ಇವನಾರವ’ ಎಂಬ ವಚನ ಪಠಿಸಿದ್ದಾರೆ.

Bidar Youth Adhish Wali mentioned Basavanna vachana Ivanaarava in UK Parliment, gives reason, Watch video here

‘ಟಿವಿ9’ ಜತೆ ಆದೀಶ್ ವಾಲಿ ಮಾತು

ಎರಡು ವಾರದ ಹಿಂದೆ ಲಂಡನ್ ಸಂಸತ್​​ನಲ್ಲಿ ಹವಾಮಾನ ಬದಲಾವಣೆ ಹಾಗೂ ಸರಕಾರದ ನೀತಿ ಬಗ್ಗೆ ಭಾಷಣ ಮಾಡುವಾಗ ವಚನ ಪಠಿಸುವುದರ ಮೂಲಕ ಕನ್ನಡ ಪ್ರೇಮದ ಜೊತೆಗೆ ಬಸವಣ್ಣನ ವಚನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಲ್ಲೇಖಿಸಿದ್ದಾರೆ.

ಘಟಿಕೋತ್ಸವದಲ್ಲಿ ಕನ್ನಡ ಬಾವುಟ ಪ್ರದರ್ಶಿಸಿದ್ದ ಆದೀಶ್ ವಾಲಿ

ಒಂದು ವರ್ಷದ ಹಿಂದೆ ಆದೀಶ್ ವಾಲಿ ಸಿಟಿ ಯೂನಿರ್ವಸಿಟಿ ಆಫ್ ಲಂಡನ್​ನ ‘ಬೇಸ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್’ನಿಂದ ಮಾಸ್ಟರ್ಸ್ ಪದವಿ ಪಡೆದಿದ್ದು, ಪದವಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಅಂದರೆ ಘಟಿಕೋತ್ಸವ ಸಮಾರಂಭದಲ್ಲಿ ಮೊದಲು ಕನ್ನಡ ನಾಡಿನ ಬಾವುಟ ಎರಡೂ ಕೈಗಳಿಂದ ಎತ್ತಿ ಹಿಡಿದು ಆಮೇಲೆ ಸರ್ಟಿಫಿಕೇಟ್ ಸ್ವೀಕರಿಸಿ ಕನ್ನಡಿಗರ ಮನಸ್ಸು ಗೆದ್ದಿದ್ದರು. ಈಗ ಯುಕೆ ಸಂಸತ್​​ನಲ್ಲಿ ಭಾಷಣ ಮಾಡುವಾಗಲೂ ಬಸವಣ್ಣನ ವಚನ ಉಲ್ಲೇಖಿಸಿ ಮೆಚ್ಚುಗೆ ಗಳಿಸುಕೊಂಡಿದ್ದಾರೆ.

ಅದೀಶ್‌ ವಾಲಿಯವರ ಅಜ್ಜನ ಶಿವಶರಣಪ್ಪ ವಾಲಿಯವರು ಬೀದರ್‌ ಜಿಲ್ಲೆಯ ಹಿರಿಯ ಪತ್ರಕರ್ತರು ಮತ್ತು ಅಪ್ಪಟ ಕನ್ನಡಿಗ. ಬಾಲ್ಯದಿಂದಲೇ ಅವರ ಕನ್ನಡಾಭಿಮಾನವನ್ನು ಕಣ್ಣಾರೆ ಕಂಡ ಯುವಕ ಆದೀಶ್ ವಾಲಿ, ಲಂಡನ್​ನಲ್ಲಿದ್ದರೂ ಕನ್ನಡಾಭಿಮಾನ ಬಿಟ್ಟಿಲ್ಲ.

ಇದನ್ನೂ ಓದಿ: ಬೀದರ್​ ಜನತೆಯನ್ನು ರೋಮಾಂಚನಗೊಳಿಸಿದ ವಾಯುಸೇನೆ ಏರ್ ಶೋ, ಫೋಟೋಸ್​ ನೋಡಿ

ಕನ್ನಡ ಎಂದರೆ ಸಾಕು, ಇದು ಸ್ಥಳೀಯ ಭಾಷೆ. ಮನೆಯಲ್ಲಿ ಬಿಟ್ಟರೆ ಮಾತ್ಯಾವುದಕ್ಕೂ ಕನ್ನಡ ಬೇಕಾಗಿಲ್ಲ ಎನ್ನುವ ಸ್ಥಿತಿ ಇರುವವಾಗ ಬೀದರ್ ಯುವಕ ಬ್ರಿಟಿಷ್‌ ನಾಡಿನಲ್ಲಿ ಕನ್ನಡದ ಕಂಪು ಮೊಳಗಿಸುವ ಮೂಲಕ ಶ್ಲಾಘನೆಗೆ ಪಾತ್ರರಾಗಿರುವುದು ಗಮನಾರ್ಹ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:31 am, Wed, 2 October 24

ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು
ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು
ಭಕ್ತನಂತೆ ದೇವಸ್ಥಾನಕ್ಕೆ ಬಂದು ದೇವರ ವಿಗ್ರಹವನ್ನೇ ಕದ್ದ ಖತರ್ನಾಕ್ ಕಳ್ಳ
ಭಕ್ತನಂತೆ ದೇವಸ್ಥಾನಕ್ಕೆ ಬಂದು ದೇವರ ವಿಗ್ರಹವನ್ನೇ ಕದ್ದ ಖತರ್ನಾಕ್ ಕಳ್ಳ
ಥಾರ್​ ಖರೀದಿಸಿದ ಖುಷಿಗೆ ಮಹೀಂದ್ರಾ ಶೋರೂಂನಲ್ಲಿ ಗುಂಡು ಹಾರಿಸಿದ ಯುವಕ!
ಥಾರ್​ ಖರೀದಿಸಿದ ಖುಷಿಗೆ ಮಹೀಂದ್ರಾ ಶೋರೂಂನಲ್ಲಿ ಗುಂಡು ಹಾರಿಸಿದ ಯುವಕ!
ಚೈತ್ರಾ ಕುಂದಾಪುರ ಎಷ್ಟು ಚಾಲಾಕಿ ಅಂತ ತಿಳಿಯೋಕೆ ಈ ವಿಡಿಯೋ ನೋಡಿ..
ಚೈತ್ರಾ ಕುಂದಾಪುರ ಎಷ್ಟು ಚಾಲಾಕಿ ಅಂತ ತಿಳಿಯೋಕೆ ಈ ವಿಡಿಯೋ ನೋಡಿ..
ಚಿನ್ನ ಖರೀದಿಸಿದರೆ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆಯಾಗುತ್ತಾ?
ಚಿನ್ನ ಖರೀದಿಸಿದರೆ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆಯಾಗುತ್ತಾ?
ವೈಲ್ಡ್ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಬಿದ್ದ ನಟಿ
ವೈಲ್ಡ್ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಬಿದ್ದ ನಟಿ
ಶಿವಣ್ಣನ ‘ಭೈರತಿ ರಣಗಲ್’ ಸಿನಿಮಾ ನೋಡಲು ಬಂದ ದುನಿಯಾ ವಿಜಯ್
ಶಿವಣ್ಣನ ‘ಭೈರತಿ ರಣಗಲ್’ ಸಿನಿಮಾ ನೋಡಲು ಬಂದ ದುನಿಯಾ ವಿಜಯ್