ಬೀದರ್ನಲ್ಲಿ ಸಿಂಧುತ್ವ ಪ್ರಮಾಣಪತ್ರ ಸಿಗದಿದ್ದಕ್ಕೆ ಚಾಲಕ ಆತ್ಮಹತ್ಯೆ! ತಹಶೀಲ್ದಾರ್ ಕಚೇರಿ ಮುಂದೆ ಶವವಿಟ್ಟು ಸಂಬಂಧಿಕರಿಂದ ಧರಣಿಗೆ ಯತ್ನ
ಮೃತ ಓಂಕಾರ ಶೇರಿಕಾರ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಕುಮಾರ್ ಚಿಂಚೊಳ್ಳಿ ಗ್ರಾಮದವರು. ಈಶಾನ್ಯ ಕರ್ನಾಟಕ ಸಾರಿಕೆ ಸಂಸ್ಥೆಯ ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಬೀದರ್: ಸಿಂಧುತ್ವ ಪ್ರಮಾಣಪತ್ರ ಸಿಗದ ಹಿನ್ನೆಲೆ ಚಾಲಕ (Driver) ಆತ್ಮಹತ್ಯೆಗೆ ಶರಣಾಗಿದ್ದು, ಹುಮ್ನಾಬಾದ್ ತಹಶೀಲ್ದಾರ್ ಕಚೇರಿ ಮುಂದೆ ಶವವಿಟ್ಟು ಸಂಬಂಧಿಕರು ಧರಣಿ (Protest) ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನೆ ಮಾಡದಂತೆ ತಡೆದಿದ್ದು, ಅಡ್ಡಿಪಡಿಸಿದ ಪೊಲೀಸರೊಂದಿಗೆ ಮೃತ ವ್ಯಕ್ತಿ ಸಂಬಂಧಿಕರು ವಾಗ್ವಾದ ನಡೆಸಿದ್ದಾರೆ. ಓಂಕಾರ ಶೇರಿಕಾರ ಎಂಬ ಚಾಲಕ ಜಿಲ್ಲೆಯ ವಿವಿಧ ಡಿಪೋ ದಲ್ಲಿ ಹತ್ತು ವರ್ಷ ಸೇವೆಸಲ್ಲಿಸಿದ್ದರು. ನೌಕರಿಗೆ ಸೇರಿದ ಬಳಿಕ ಸಿಂಧುತ್ವ ಪ್ರಮಾಣ ಪತ್ರವನ್ನ ಕೊಡಬೇಕಾಗಿತ್ತು. ಸಿಂಧುತ್ವ ಪ್ರಮಾಣ ಪತ್ರ ಕೊಡುವಂತೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರಂತೆ. ಮನನೊಂದು ಚಾಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ಓಂಕಾರ ಶೇರಿಕಾರ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಕುಮಾರ್ ಚಿಂಚೊಳ್ಳಿ ಗ್ರಾಮದವರು. ಈಶಾನ್ಯ ಕರ್ನಾಟಕ ಸಾರಿಕೆ ಸಂಸ್ಥೆಯ ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ವಸ್ತುಗಳೆಲ್ಲಾ ಸುಟ್ಟು ಭಸ್ಮ: ಕೋಲಾರ: ವಿದ್ಯುತ್ ಲೈನ್ ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ ತಗುಲಿ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿವೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ರಾಮಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮುನಿಯಪ್ಪ ಎಂಬುವರಿಗೆ ಸೇರಿದ ಮನೆ ಸುಟ್ಟು ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ,. ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ವಸ್ತುಗಳು ಬೆಂಕಿಗಾಹುತಿ ಆಗಿವೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಘಟನೆ ನಡೆದಿದೆ ಅಂತ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ನಷ್ಟ ಅನುಭವಿಸಿದ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಆಗ್ರಹಹಿಸಿದ್ದಾರೆ.
ಡೀಸೆಲ್ ಕಳ್ಳನ ಮೇಲೆ ಗುಂಡು ಹಾರಿಸಿದ ಪೊಲೀಸರು: ಡೀಸೆಲ್ ಕಳ್ಳನ ಮೇಲೆ ಬೆಂಗಳೂರಿನ ಜಿಗಣಿ ಠಾಣೆ ಪೊಲೀಸರು ಗುಂಡು ಹಾರಿಸಿದ್ದಾರೆ. ಶ್ರೀನಿವಾಸ್ ಅಲಿಯಾಸ್ ರಾಜು ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಜಿಗಣಿಯ ಡಿಎಲ್‌ಎಫ್ ಬಳಿ ಘಟನೆ ನಡೆದಿದೆ. ಆರೋಪಿ ರಸ್ತೆಬದಿ ನಿಲ್ಲಿಸಿದ್ದ ವಾಹನಗಳಲ್ಲಿ ಡೀಸೆಲ್ ಕದಿಯುತಿದ್ದ. ಆರೋಪಿಗಳನ್ನ ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಒಬ್ಬ ಆರೋಪಿಗೆ ಪೊಲೀಸರು ಗುಂಡು ಹಾರಿಸಿ, ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ
ರಾಜಧಾನಿ ಕೀವ್ ರಕ್ಷಣೆಗೆ ಸರ್ವಪ್ರಯತ್ನ: ರಷ್ಯಾ ಮುತ್ತಿಗೆಗೆ ಪ್ರತಿರೋಧ ತೋರಲು ಉಕ್ರೇನ್ ಸಜ್ಜು
ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿಯಿಂದ ಸ್ಪರ್ಧಿಸಲಿದ್ದಾರೆ ಶತ್ರುಘ್ನ ಸಿನ್ಹಾ, ಬಾಬುಲ್ ಸುಪ್ರಿಯೋ
Published On - 3:23 pm, Sun, 13 March 22