ರಾಜಧಾನಿ ಕೀವ್ ರಕ್ಷಣೆಗೆ ಸರ್ವಪ್ರಯತ್ನ: ರಷ್ಯಾ ಮುತ್ತಿಗೆಗೆ ಪ್ರತಿರೋಧ ತೋರಲು ಉಕ್ರೇನ್ ಸಜ್ಜು

ಕೀವ್​ ನಗರಕ್ಕೆ ಮುತ್ತಿಗೆ ಹಾಕಲು ರಷ್ಯಾ ಸತತ ಪ್ರಯತ್ನ ನಡೆಸುತ್ತಿದ್ದು, ಮರಿಯುಪೋಲ್ ನಗರದ ಮೇಲೆಯೂ ನಿರಂತರ ಬಾಂಬ್ ದಾಳಿಗಳು ನಡೆಯುತ್ತಿವೆ

ರಾಜಧಾನಿ ಕೀವ್ ರಕ್ಷಣೆಗೆ ಸರ್ವಪ್ರಯತ್ನ: ರಷ್ಯಾ ಮುತ್ತಿಗೆಗೆ ಪ್ರತಿರೋಧ ತೋರಲು ಉಕ್ರೇನ್ ಸಜ್ಜು
ಉಕ್ರೇನ್ ನಾಗರಿಕರು ಅಕ್ಕಪಕ್ಕದ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 13, 2022 | 2:01 PM

ಕೀವ್: ರಾಜಧಾನಿ ಕೀವ್ (Kyiv) ನಗರವನ್ನು ರಷ್ಯಾ ಸೇನೆಯಿಂದ ಶತಾಯಗತಾಯ ರಕ್ಷಿಸಿಕೊಳ್ಳಲು ಉಕ್ರೇನ್ (Russia Vs Ukraine) ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೀವ್​ ನಗರಕ್ಕೆ ಮುತ್ತಿಗೆ ಹಾಕಲು ರಷ್ಯಾ ಸತತ ಪ್ರಯತ್ನ ನಡೆಸುತ್ತಿದ್ದು, ಮರಿಯುಪೋಲ್ ನಗರದ ಮೇಲೆಯೂ ನಿರಂತರ ಬಾಂಬ್ ದಾಳಿಗಳು ನಡೆಯುತ್ತಿವೆ. ‘ರಷ್ಯಾಕ್ಕೆ ಉಕ್ರೇನ್​ನ ದೇಶವನ್ನು ಆಕ್ರಮಿಸಿಕೊಳ್ಳುವ ಶಕ್ತಿಯಿಲ್ಲ. ಅವರು ಹಿಂಸಾಚಾರದ ಮೊರೆ ಹೋಗಿದ್ದಾರೆ. ತಮ್ಮ ಬಳಿಯಿರುವ ರಾಶಿರಾಶಿ ಆಯುಧಗಳನ್ನು ಇಲ್ಲಿಗೆ ತಂದಿದ್ದಾರೆ. ಕೇವಲ ಆಯುಧಗಳನ್ನೇ ಮುಂದಿಟ್ಟು ಬೆದರಿಸಿ, ಉಕ್ರೇನ್ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದಾರೆ’ ಎಂದು ಹೇಳಿದರು.

ಮಾನವೀಯ ನೆರವು ಹೊತ್ತು ಮರಿಯುಪೋಲ್ ನಗರಕ್ಕೆ ತೆರಳುತ್ತಿದ್ದ ವಾಹನಗಳನ್ನು ರಷ್ಯಾ ತನ್ನ ಚೆಕ್​ಪಾಯಿಂಟ್​ನಲ್ಲಿ ತಡೆದಿದೆ ಎಂದು ಉಕ್ರೇನ್​ನ ಉಪಪ್ರಧಾನಿ ಇರ್​ಯಾನಾ ವೆರೆಶ್​ಚುಕ್ ತಿಳಿಸಿದರು. ಉಕ್ರೇನ್​ಗೆ ಅಗತ್ಯವಸ್ತು ಪೂರೈಕೆ ದೃಷ್ಟಿಯಿಂದ ಮಹತ್ವ ಪಡೆದಿರುವ ಮರಿಯುಪೋಲ್ ಬಂದರು ಸಹ ಸಂಚಾರಕ್ಕೆ ಮುಕ್ತವಾಗಿಲ್ಲ. ಈ ಮಾನವೀಯ ಬಿಕ್ಕಟ್ಟಿನಲ್ಲಿ 1500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು. ರಷ್ಯಾ ಪಡೆಗಳು ಮುತ್ತಿಗೆ ಹಾಕಿರುವ ನಗರಗಳಲ್ಲಿ ಸಿಲುಕಿರುವ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಪ್ರಯತ್ನಕ್ಕೂ ಈವರೆಗೆ ಫಲಸಿಕ್ಕಿಲ್ಲ. ಮರಿಯುಪೋಲ್ ನಗರವನ್ನು ಪ್ರಸ್ತುತ ರಷ್ಯಾ ಸೇನೆ ಸುತ್ತುವರಿದಿದೆ. ಯುದ್ಧದಲ್ಲಿ ನಗರ ಗೆಲ್ಲಲು ಸಾಧ್ಯವಾಗದ ರಷ್ಯಾ ಸೇನೆಯು ಇದೀಗ ಜನರನ್ನು ಹಸಿವು ಮತ್ತು ಹತಾಶೆಗೆ ತಳ್ಳಿ, ಆ ಮೂಲಕ ತನ್ನ ಉದ್ದೇಶ ಸಾಧಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಫ್ರಾನ್ಸ್​ನ ಮಿಲಿಟರಿ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್​ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಉಕ್ರೇನ್ ಪರಿಸ್ಥಿತಿ ಕುರಿತು ಪ್ರಕ್ರಿಯಿಸಿರುವ ರಷ್ಯಾದ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಸಂಸ್ಥೆಯ ಮುಖ್ಯಸ್ಥ ಮೈಕೆಲ್ ಮಿಝಿನ್​ಟ್​ಸೆವ್, ‘ಉಕ್ರೇನ್​ನಲ್ಲಿ ಮಾನವೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಕೆಲವು ನಗರಗಳಲ್ಲಿ ಹತ್ತಾರು ಸಮಸ್ಯೆಗಳನ್ನು ತಂದೊಡ್ಡಿದೆ’ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ವಿಶ್ವ ಸಮುದಾಯಕ್ಕೆ ವಿಡಿಯೊ ಸಂದೇಶದ ಮೂಲಕ ಮನವಿ ಮಾಡಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​​ಸ್ಕಿ ವಿಶ್ವ ಸಮುದಾಯವು ನೆರವು ಹೆಚ್ಚಿಸಬೇಕು ಎಂದು ಕೋರಿದ್ದರು. ವಿದೇಶಗಳಲ್ಲಿರುವ ನಮ್ಮ ಗೆಳೆಯರು ಉಕ್ರೇನ್ ಮತ್ತು ಉಕ್ರೇನಿಯನ್ನರಿಗಾಗಿ ಇನ್ನಷ್ಟು ನೆರವು ನೀಡಬೇಕಿದೆ. ನಾವು ಕೇವಲ ಉಕ್ರೇನ್​ಗಾಗಿ ಹೋರಾಡುತ್ತಿಲ್ಲ, ಇಡೀ ಯೂರೋಪ್​ ಉಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದರು.

ದಿಗ್ಬಂಧನದಲ್ಲಿ ನಗರ

ಕೀವ್ ನಗರಕ್ಕೆ ಕೇವಲ 25 ಕಿಮೀ ದೂರಕ್ಕೆ ರಷ್ಯಾ ಸೇನೆ ಬಂದು ನಿಂತಿದೆ. ಈ ವಿದ್ಯಮಾನವು ನಾಗರಿಕರಲ್ಲಿ ಆತಂಕ ಹುಟ್ಟುಹಾಕಿದೆ. ಯಾವುದೇ ಕ್ಷಣದಲ್ಲಿ ರಷ್ಯಾ ಸೇನೆಯು ನಗರವನ್ನು ಸುತ್ತುಗಟ್ಟಬಲ್ಲದು ಎಂಬ ಆತಂಕ ವ್ಯಕ್ತವಾಗಿದೆ. ಉಕ್ರೇನ್​ನ ಇತರ ನಗರಗಳು ಈಗಾಗಲೇ ರಷ್ಯಾ ವಶದಲ್ಲಿದೆ ಅಥವಾ ರಷ್ಯಾ ಸೇನೆಯ ದಿಗ್ಬಂಧನದಲ್ಲಿವೆ. ಉಕ್ರೇನ್ ಸೇನೆಯನ್ನು ಪೂರ್ಣ ಪ್ರಮಾಣದಲ್ಲಿ ಸೋಲಿಸಲು ವಿಫಲವಾಗಿರುವ ರಷ್ಯಾ ಇದೀಗ ನಾಗರಿಕರನ್ನು ಗುರಿಯಾಗಿಸಿಕೊಳ್ಳುತ್ತಿದೆ. ಇದು ಯುದ್ಧಾಪರಾಧಗಳ ವ್ಯಾಪ್ತಿಗೆ ಬರುತ್ತದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ದಕ್ಷಿಣದಲ್ಲಿರುವ ಒಡೆಸ್ಸಾ ಮೇಲೆ ಮಾರಕ ದಾಳಿ ನಡೆಸಲು ರಷ್ಯಾ ಸೇನೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ರಷ್ಯಾ ದಾಳಿಯಲ್ಲಿ ಈವರೆಗೆ ಸುಮಾರು 1,300 ಉಕ್ರೇನ್ ಸೈನಿಕರು ಮತ್ತು ರಷ್ಯಾದ 12,000 ಸೈನಿಕರು ಸಾವನ್ನಪ್ಪಿರಬಹುದು ಎಂದು ಝೆಲೆನ್​ಸ್ಕಿ ಹೇಳಿದ್ದರು. ಆದರೆ ರಷ್ಯಾ ಮಾರ್ಚ್ 2ರಂದು ಬಿಡುಗಡೆ ಮಾಡಿದ್ದ ಅಧಿಕೃತ ಹೇಳಿಕೆಯಲ್ಲಿ ತನ್ನ 498 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು. ಈ ಸಂಘರ್ಷದಲ್ಲಿ 579 ನಾಗರಿಕರು ಸಾವನ್ನಪ್ಪಿರಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಆದರೆ ಸಂಖ್ಯೆ ವಾಸ್ತವಕ್ಕಿಂತ ತುಂಬಾ ಕಡಿಮೆ ಎಂದು ಹೇಳಲಾಗುತ್ತಿದೆ. ಈವರೆಗೆ ಸುಮಾರು 26 ಲಕ್ಷ ಜನರು ಉಕ್ರೇನ್ ತೊರೆದು ಅಕ್ಕಪಕ್ಕದ ದೇಶಗಳಿಗೆ ಹೋಗಿದ್ದಾರೆ. ಈ ಪೈಕಿ ಬಹುತೇಕರಿಗೆ ಪೊಲೆಂಡ್ ಆಶ್ರಯ ನೀಡಿದೆ. 2ನೇ ವಿಶ್ವಯುದ್ಧದ ನಂತರ ಯೂರೋಪ್ ಎದುರಿಸುತ್ತಿರುವ ಅತ್ಯಂತ ಕೆಟ್ಟ ನಿರಾಶ್ರಿತರ ಬವಣೆ ಇದು.

ಇದನ್ನೂ ಓದಿ: ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ: ರಷ್ಯಾ ಉಕ್ರೇನ್​ ಯುದ್ಧದ ಬಗ್ಗೆ ಬಾಬಾ ವಂಗಾ ಭವಿಷ್ಯ

ಇದನ್ನೂ ಓದಿ: ಮುಂದುವರೆದ ರಷ್ಯಾ-ಉಕ್ರೇನ್​ ಯುದ್ಧ: ಅಧಿಕೃತವಾಗಿ ಉಕ್ರೇನ್ ಸೇನೆ​ ಸೇರಿದ ಮೊದಲ ಮಹಿಳಾ ಸ್ವಯಂ ಸೇವಕಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?