ಕಬ್ಬು, ಉದ್ದು, ಸೋಯಾ ಕೃಷಿಗೆ ಗುಡ್​ ಬೈ;ಈರುಳ್ಳಿ ಬೀಜ ಉತ್ಪಾದಿಸಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರೋ ರೈತ

ಕಬ್ಬು, ಉದ್ದು, ಸೋಯಾ ಹೆಸರು ಬೆಳೆದು ನಷ್ಟ ಅನುಭವಿಸುತ್ತಿದ್ದ ರೈತನೀಗ, ಅದಕ್ಕೆ ಗುಡ್ ಬೈ ಹೇಳಿದ್ದಾನೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಕೊಡುವ ಈರುಳ್ಳಿ ಬೀಜ ಉತ್ಪಾದನೆ ಮಾಡುವುದರ ಮೂಲಕ ವರ್ಷಕ್ಕೆ ಲಕ್ಷಾಂತರ ಹಣ ಗಳಿಸುತ್ತಿದ್ದಾನೆ. ಬೀಜ ತಯಾರಿಕೆ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡು ಈತ ಬೆಳೆಸಿದ ಬೀಜವನ್ನ ಅಲ್ಲಿಯೇ ಮಾರಾಟ ಮಾಡಿ ಲಾಭ ಉತ್ತಮ ಆದಾಯ ಗಳಿಸುತ್ತಿದ್ದಾನೆ.

ಕಬ್ಬು, ಉದ್ದು, ಸೋಯಾ ಕೃಷಿಗೆ ಗುಡ್​ ಬೈ;ಈರುಳ್ಳಿ ಬೀಜ ಉತ್ಪಾದಿಸಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರೋ ರೈತ
ಈರುಳ್ಳಿ ಬೀಜ ಉತ್ಪಾದನೆ ಮಾಡುತ್ತಿರುವ ಬೀದರ್​ ರೈತ ದೀಲಿಪ್ ಕುಮಾರ್ ನೇಮಿನಾಥ್ ಕಿವುಡೆ
Follow us
ಸುರೇಶ ನಾಯಕ
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 17, 2024 | 3:16 PM

ಬೀದರ್​, ಮಾ.17: ಈರುಳ್ಳಿ ಬೀಜ ಮಾರಾಟ ಮಾಡಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಈ ಪ್ರಗತಿಪರ ರೈತನ ಕೃಷಿಯ ಚಾಣಾಕ್ಷತನಕ್ಕೆ ಅಧಿಕಾರಿಗಳು, ರೈತರು ಫಿದಾ ಆಗಿದ್ದಾರೆ. ಈರುಳ್ಳಿ ಬೆಳೆದರೆ ಸಿಗುವ ಲಾಭಕಿಂತ ಈರುಳ್ಳಿ ಬೀಜ(onion seed) ಉತ್ಪಾದನೆ ಹೆಚ್ಚು ಲಾಭದಾಯಕ ಕೃಷಿಯಾಗಿದೆ. ಹೀಗಾಗಿ ಇದರ ಲಾಭವನ್ನ ಕಂಡುಕೊಂಡ ಬೀದರ್(Bidar) ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ರೈತ ದೀಲಿಪ್ ಕುಮಾರ್ ನೇಮಿನಾಥ್ ಕಿವುಡೆ ಅವರು ತಮ್ಮ 40 ಎಕರೆಯಷ್ಟು ಜಮೀನಿನಲ್ಲಿ ಈರುಳ್ಳಿ ಬೀಜೋತ್ಪಾಧನೆಯಲ್ಲಿ ತೊಡಗಿಕೊಂಡಿದ್ದು, 6 ತಿಂಗಳಿಗೆ ಒಂದು ಕೋಟಿಗೂ ಅಧಿಕ ಲಾಭವನ್ನ ಗಳಿಸುತ್ತಿದ್ದಾರೆ.

ಇನ್ನು ಇವರು ಯಾವುದೇ ಬೀಜೋತ್ಪಾಧನೆ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡಿಲ್ಲ. ಇವರು ತಯ್ಯಾರಿಸಿದ ಇರುಳ್ಳಿ ಬೀಜವನ್ನ ನೇರವಾಗಿ ರೈತರಿಗೆ ಕೊಡುವುದರಿಂದಾಗಿ ಇವರಿಗೆ ಯಾವುದೆ ಮಾರುಕಟ್ಟೆಯಲ್ಲಿ ದರ ಏರಿಳಿತವಾದರೂ ಕೂಡ ಇವರಿಗೆ ಅಷ್ಟೇನು ನಷ್ಟವಾಗುವುದಿಲ್ಲ. ಇವರು ಉತ್ತಮ ಗುಣಮಟ್ಟದ ಇರುಳ್ಳಿ ಬೀಜವನ್ನ ತಯ್ಯಾರಿಸಿ ಮಾರಾಟ ಮಾಡುವುದರಿಂದಾಗಿ ಇವರು ಉತ್ಪಾಧಿಸುವ ಈರುಳ್ಳಿ ಬೀಜಕ್ಕೆ ಬಾರೀ ಬೇಡಿಕೆಯಿದೆ. ಅತೀ ಹೆಚ್ಚಾಗಿ ಇರುಳ್ಳಿ ಬೆಳೆಸುವ ಬಾಗಲಕೋಟೆ, ವಿಜಯಪುರ, ಬೆಳೆಗಾವಿ ಗದಗ ಜಿಲ್ಲೆಗೆ ಹೋಗಿ ತಾವೇ ನೇರವಾಗಿ ರೈತರಿಗೆ ಬೀಜವನ್ನ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ಹೆಚ್ಚಿನ ಲಾಭವಿದೆ ಎಂದು ರೈತ ದೀಲಿಪ್ ಕುಮಾರ್ ನೇಮಿನಾಥ್ ಕಿವುಡೆ ಹೇಳುತ್ತಿದ್ದಾರೆ.

ಇದನ್ನೂ ಓದಿ:Onion Price: ಈರುಳ್ಳಿ ಬೆಲೆ ಈಗ ಕುಸಿತ; ಆದರೆ ಮಾರ್ಚ್​ನಲ್ಲಿ ಕಣ್ಣೀರು ಬರಿಸಲಿದೆಯಂತೆ ಬೆಲೆ ಏರಿಕೆ

ಈ ರೈತ ದೀಲಿಪ್ ಕುಮಾರ್ ಅವರು ಹದಿನೈದು ವರ್ಷದ ಹಿಂದೆ ತಮ್ಮ ಹೊಲದಲ್ಲಿ ಕಬ್ಬು, ಸೋಯಾ, ಉದ್ದು ಹೆಸರು ಬೆಳೆಗೆ ಮಾತ್ರ ಸಿಮೀತವಾಗಿದ್ದರು. ಆದರೆ, ಅದರಲ್ಲಿ ಅಷ್ಟೇನು ಲಾಭ ಈ ರೈತನಿಗೆ ಆಗಿಲ್ಲ. ಕಬ್ಬು ಬೆಳೆಯಿಂದಲೂ ಕೂಡ ಇವರಿಗೆ ಲಾಭ ಅಷ್ಟಕಷ್ಟೆ, ಹೀಗಾಗಿ ಈ ಬೆಳೆಗಳಿಗೆ ಗುಡ್ ಬೈ ಹೇಳಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕು ಅಂದುಕೊಂಡು ಈರುಳ್ಳಿ ಬೀಜೋತ್ಪಾಧನೆ ಮಾಡಿದರೆ ಹೇಗೆ ಎಂದು ಯೋಚನೆ ಮಾಡಿ, ಒಂದು ವರ್ಷ ಹತ್ತು ಎಕರೆಯಷ್ಟು ಪ್ರದೇಶದಲ್ಲಿ ಇರುಳ್ಳಿ ಬೀಜೋತ್ಪಾಧನೆ ಮಾಡಿ, ಕಿಂಟಾಲ್ ಗೆ 20 ಸಾವಿರ ರೂಪಾಯಿಯಂತೆ ಮಾರಾಟ ಮಾಡಿದ್ದಾರೆ.

ಅದರಲ್ಲಿ ಭರ್ಜರಿ ಲಾಭ ಕಂಡು ಕೊಂಡ ಇವರು, ಉತ್ತಮ ಗುಣಮಟ್ಟದ ಬೀಜವನ್ನ ನೋಡಿದ ರೈತರು ಇವರಿಂದ ಹೆಚ್ಚು ಹೆಚ್ಚಾಗಿ ಇರಳ್ಳಿ ಬೀಜವನ್ನ ಖರೀಧಿಸಲು ಶುರುಮಾಡಿದರೂ ಹತ್ತು ಎಕರೆಯಿಂದ ಆರಂಭಿಸಿ ಈಗ 40 ಎಕರೆಯಷ್ಟು ಇರುಳ್ಳಿ ಬೀಜವನ್ನ ಬೆಳೆಸುತ್ತಿದ್ದಾರೆ. ಇನ್ನು ವರ್ಷಕ್ಕೆ ಕನಿಷ್ಟವೆಂದರೂ ಇನ್ನೂರು ಕ್ಷಿಂಟಾಲ್​ವರೆಗೆ ಈರುಳ್ಳಿ ಬೀಜವನ್ನ ಮಾರಾಟ ಮಾಡುತ್ತಿದ್ದಾರೆ. ಎಲ್ಲಾ ಖರ್ಚು ತೆಗೆದರೂ ಕೂಡ ಇವರಿಗೆ ವರ್ಷಕ್ಕೆ 50 ರಿಂದ 60 ಲಕ್ಷ ರೂಪಾಯಿಯಷ್ಟು ಲಾಭವಾಗುತ್ತಿದೆ ಎಂದು ರೈತ ಹೇಳುತ್ತಿದ್ದಾರೆ.

ಇದನ್ನೂ ಓದಿ:Raw Onion: ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳಿವು

ಒಟ್ಟಿನಲ್ಲಿ ರೈತ ದೀಲಿಪ್ ಕುಮಾರ್ ಈರುಳ್ಳಿ ಬೀಜೋತ್ಪಾಧನೆ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಎಲ್ಲ ರೈತರು ಪ್ರಯೋಗಾತ್ಮಕ ಕೃಷಿ, ಬೆಳೆ ಬೆಳೆಯಲು ಅನುಕೂಲ ಮಾಡಿಕೊಳಬೇಕು. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ಗಳಿಸೋ ತೋಟಗಾರಿಕೆ ಬೆಳೆ ಬೆಳೆಯಲು ಎಲ್ಲ ರೈತರು ಯಶಸ್ಸು ಆಗಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು