Basavakalyan By Election Result 2021: ‘ಕೈ’ ಜಾರಿ ಹೋಯ್ತು ಬಸವಕಲ್ಯಾಣ..; ಗೆಲುವಿನತ್ತ ಮುನ್ನುಗ್ಗುತ್ತಿರುವ ಬಿಜೆಪಿ

  • TV9 Web Team
  • Published On - 13:19 PM, 2 May 2021
Basavakalyan By Election Result 2021: ‘ಕೈ’ ಜಾರಿ ಹೋಯ್ತು ಬಸವಕಲ್ಯಾಣ..; ಗೆಲುವಿನತ್ತ ಮುನ್ನುಗ್ಗುತ್ತಿರುವ ಬಿಜೆಪಿ
ಶರಣು ಸಲಗರ ಮತ್ತು ಮಲ್ಲಮ್ಮ ನಾರಾಯಣ್ ರಾವ್​

ಬೀದರ್​: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಇಲ್ಲೀಗ 26ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಈ ಹೊತ್ತಿಗೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ 66,965ಮತಗಳಿಸಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರ ಹತ್ತಿರದ ಸ್ಪರ್ಧಿ ಕಾಂಗ್ರೆಸ್​ನ ಮಾಲಾ ನಾರಾಯಣರಾವ್ 47,839 ಮತಗಳಿಸಿದ್ದಾರೆ. ಹಾಗೇ ಜೆಡಿಎಸ್​ನ ಸಯ್ಯದ್ ಯಸ್ರಬ್ ಅಲಿ ಖಾದ್ರಿ 11,295 ವೋಟ್ ಪಡೆದಿದ್ದಾರೆ. ಈ ಮಧ್ಯೆ ಬಿಜೆಪಿಯಿಂದ ಟಿಕೆಟ್ ಸಿಗದೆ ಬಂಡಾಯ ಎದ್ದು ಸ್ಪರ್ಧಿಸಿದ್ದ 9148 ಮತ ಗಳಿಸಿದ್ದಾರೆ. ಇಲ್ಲೀಗ ಬಿಜೆಪಿ ತನ್ನ ಸಮೀಪ ಸ್ಪರ್ಧಿ 19,126 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

ಬಸವಕಲ್ಯಾಣದಲ್ಲಿ ಈ ಹಿಂದೆ ಶಾಸಕರಾಗಿದ್ದ ಕಾಂಗ್ರೆಸ್​ನ ನಾರಾಯಣ ರಾವ್ ಅವರು 2020ರ ಸೆಪ್ಟೆಂಬರ್​ನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಕಾಂಗ್ರೆಸ್ ನಾರಾಯಣ್​ರಾವ್ ಅವರ ಪತ್ನಿ ಮಲ್ಲಮ್ಮ ನಾರಾಯಣ್​ರಾವ್​ ಅವರನ್ನೇ ಆಯ್ಕೆ ಮಾಡಿತ್ತು. ಉಪಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ಇಲ್ಲಿ ನಾರಾಯಣ್ ರಾವ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರಿಂದ ಅನುಕಂಪದ ಅಲೆಯ ಆಧಾರದಲ್ಲಿ ಮಲ್ಲಮ್ಮ ಅವರೇ ಗೆಲ್ಲಬಹುದು ಎಂಬ ಅಂದಾಜು ಇತ್ತು. ಆದರೆ ಇಲ್ಲೀಗ ನೋಡಿದರೆ ಲೆಕ್ಕಾಚಾರ ಉಲ್ಟಾ ಆಗುವಂತೆ ಕಾಣುತ್ತಿದೆ. ಬಿಜೆಪಿ ಗೆಲುವಿನತ್ತ ದಾಪುಗಾಲು ಇಡುತ್ತಿದೆ.

ಗೆಲುವಿನ ಹಿಂದೆ ಇತ್ತು ಶ್ರಮ
ಬಿ.ನಾರಾಯಣ್​ ರಾವ್ ಹಿರಿಯ ರಾಜಕಾರಣಿಯಾಗಿದ್ದವರು. ಕಾಂಗ್ರೆಸ್​ಗೆ ಯಾವಾಗಲೂ ಕೈ ತಪ್ಪುತ್ತಿದ್ದ ಬಸವಕಲ್ಯಾಣವನ್ನು 2018ರಲ್ಲಿ ತಮ್ಮ ತೆಕ್ಕೆಗೆ ತಂದುಕೊಂಡಿದ್ದಾರೆ. ಇದು ಸುಮ್ಮನೆ ಒಲಿದ ಗೆಲುವಾಗಿರಲಿಲ್ಲ. ಅದಕ್ಕಾಗಿ ಅವರ ಪರಿಶ್ರಮ ಸಿಕ್ಕಾಪಟೆ ಇತ್ತು. ಅದ್ಭುತವಾಗಿ ಪಕ್ಷ ಸಂಘಟನೆಯನ್ನೂ ಮಾಡಿದ್ದರು. ಆದರೆ ಇವರ ನಿಧನದ ನಂತರ ಮತ್ತೆ ಬಸವಕಲ್ಯಾಣ ಕೈ ಜಾರುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಬಿಜೆಪಿಯಿಂದ ಈ ಬಾರಿ ಬಸವಕಲ್ಯಾಣ ಉಪಚುನಾವಣೆ ಉಸ್ತುವಾರಿಯನ್ನು ಡಿಸಿಎಂ ಲಕ್ಷಣ್ ಸವದಿ ಹೊತ್ತಿದ್ದರು. ಬಸವಕಲ್ಯಾಣವನ್ನು ಗೆಲ್ಲಲು ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಪಕ್ಷದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು, ಒಟ್ಟಾಗಿ ಕೆಲಸ ಮಾಡಬೇಕು ಎಂದು ಪಕ್ಷದ ನಾಯಕರು, ಮುಖಂಡರಿಗೆ ಕರೆ ನೀಡಿದ್ದರು.

ಇದನ್ನೂ ಓದಿ: Karnataka By Election Results 2021 LIVE: ಕರ್ನಾಟಕ ಉಪಚುನಾವಣಾ ಕದನ, ಬಸವಕಲ್ಯಾಣದಲ್ಲಿ ಬಿಜೆಪಿ ಜಯಭೇರಿ

5 State Assembly Election Results 2021 LIVE: ಪಂಚರಾಜ್ಯಗಳ ಚುನಾವಣಾ ಫಲಿತಾಂಶ, ತಮಿಳುನಾಡಿನಲ್ಲಿ ಗೆಲುವಿನತ್ತ ಡಿಎಂಕೆ