ಬೀದರ್, ಸೆಪ್ಟೆಂಬರ್ 24: ಕಲ್ಯಾಣ ಕರ್ನಾಟಕದ ಪ್ರಮುಖ ದೇವಾಲಯಗಳೊಂದಾದ ಮೈಲಾರ ಮಲ್ಲಣ್ಣ (Mylara Mallanna) ದೇವಾಸ್ಥಾನದ ಹೊಂಡಗಳು ಇದೀಗ ಅವಸಾನದ ಅಂಚಿನಲ್ಲಿವೆ. ಶಿಲ್ಪಕಲೆಯಿಂದ ಜನರನ್ನ ಆಕರ್ಷನೆ ಮಾಡುವ ಶತಮಾನದ ಮೂರ್ತಿಗಳು ಇಲ್ಲಿನ ಹೊಂಡದಲ್ಲಿದ್ದು ಅದನ್ನ ಕಾಪಾಡೋ ಮನಸ್ಸು ಮಾತ್ರ ಮಾಡುತ್ತಿಲ್ಲ. ಶತಮಾನಗಳ ಇತಿಹಾಸ ಸಾರುವ ಇಂತಹ ಅಪರೂಪದ ಹೊಂಡಗಳನ್ನ ಇಲ್ಲಿನ ಮೂರ್ತಿಗಳನ್ನ ಕಾಪಾಡುವಲ್ಲಿ ಪುರಾತತ್ವ ಇಲಾಖೆ ಮಾತ್ರ ವಿಫಲವಾಗಿದೆ.
ದಕ್ಷಿಣದ ಕಾಶಿ ಅಂತಲೇ ಪ್ರಶಿದ್ಧ ಪಡೆದಿರುವ ಮೈಲಾರ ಮಲ್ಲಣ್ಣ ದೇವಾಲಯದ ಹೊಂಡಗಳು ಅಳಿವಿನಂಚಿಗೆ ಬಂದು ನಿಂತಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿರುವ ಮೈಲಾರ ಮಲ್ಲಣ್ಣ ದೇವಾಲಯದ ಪವಿತ್ರ ಹೊಂಡಗಳು ಮಾಯಾವಾಗುತ್ತಿವೆ. ತ್ರೆತಾಯುಗ ಕಾಲದ 9 ಪವಿತ್ರವಾದ ಹೊಂಡಗಳು ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷದಿಂದ ತನ್ನ ಗತ ವೈಭವವನ್ನ ಕಳೆದುಕೊಂಡು ತನ್ನ ಕೊನೆಯ ದಿನಗಳನ್ನ ಎಣಿಸುತ್ತಿವೆ.
ಒಂದು ಕಾಲದಲ್ಲಿ ಇಲ್ಲಿಗೆ ಬರುವ ಭಕ್ತರ ಆರೋಗ್ಯ ಸಂಜೀವಿನಿಯಾಗಿದ್ದ ಇಲ್ಲಿನ ಹೊಂಡಗಳಲ್ಲಿನ ನೀರು ಮಲೀನವಾಗಿದ್ದು ಆ ನೀರಿನಲ್ಲಿ ಭಕ್ತರು ಸ್ನಾನ ಮಾಡದಂತಾ ಸ್ಥಿತಿಯುಂಟಾಗಿದೆ. ಪ್ರತಿನಿತ್ಯ ಇಲ್ಲಿಗೆ ಬರುವ ಸಾವಿರಾರು ಭಕ್ತರು ಇಲ್ಲಿನ ಹೊಂಡಗಳಲ್ಲಿ ಪವಿತ್ರವಾದ ಸ್ನಾನ ಮಾಡಿ ದೇವರ ದರ್ಶನ ಪಡೆದುಕೊಂಡು ಪುಣಿತರಾಗುತ್ತಿದ್ದರು ಆದರೀಗ ಇಲ್ಲಿನ ಹೊಂಡಗಳ ಸಂಪೂರ್ಣವಾಗಿ ಗಿಡಗಂಟೆಗಳಿಂದ ಮುಚ್ಚಿಹೋಗಿ ಭಕ್ತರು ಹೋಡದ ಕಡೆಗೆ ಹೋಗದಂತಾ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವು ನೀರಿನ ಹೊಂಡಗಳು ಚನ್ನಾಗಿದ್ದು ಆ ನೀರಿನಲ್ಲಿ ಭಕ್ತರು ಸ್ನಾನ ಮಾಡಿ ಪವಿತ್ರರಾಗಿ ದೇವರ ದರ್ಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬೀದರ್: 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಬೃಹತ್ ಗೋದಾಮು ಅರ್ಧಬರ್ಧ ಕಾಮಗಾರಿ: ರೈತರ ಆಕ್ರೋಶ
ಪವಾಡ ಪುರುಷ ಸುಕ್ಷೇತ್ರ ಮೈಲಾರಕ್ಕೆ ಪ್ರತಿ ನಿತ್ಯವು ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತರು ಇಲ್ಲಿನ ಹೊಂಡದಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದರೆ ಪಾಪ ಪರಿಹಾರವಾಗುತ್ತದೆ
ಅನ್ನುವ ನಂಬಿಕೆಯಿಂದ ಪ್ರತಿಯೊಬ್ಬರು ಇಲ್ಲಿನ ಹೊಂಡಗಳಲ್ಲಿ ಸ್ನಾನ ಮಾಡುತ್ತಾರೆ ಆದರೆ ಈಗ ಇಲ್ಲಿನ ಹೊಂಡಗಳಲ್ಲಿ ನೀರು ನಿಲ್ಲುತ್ತಿಲ್ಲ ಸ್ನಾನ ಮಾಡದೇ ದೇವರ ದರ್ಶನ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಇತಿಹಾಸವನ್ನ ನೆನೆಪು ಮಾಡುವ ಇಲ್ಲಿರುವ ಸುಮಾರು 9 ಹೊಂಡಗಳು ಒಂದೊಂದು ಹೊಡಕ್ಕೆ ಹೊಂದೊಂದು ಮಹತ್ವವೂ ಇದೆ. ಆದರೆ ಈ ನೀರಿನ ಹೊಂಡವೂ ಎಂತಹ ಭೀಕರವಾದ ಬರಗಾಲದಲ್ಲಿಯೂ ಇಲ್ಲಿನ ನೀರಿನ ಹೊಂಡದಲ್ಲಿ ನೀರು ಎಂದಿಗೂ ಕೂಡಾ ಬತ್ತಿದ ಉದಾಹರಣೆ ಇಲ್ಲಾ. ಆದರೆ ಈ ಐತಿಹಾಸಿಕ ನೀರಿನ ಹೋಡದಲ್ಲಿನ ಮಣ್ಣನ್ನು ತೆಗೆಸಿ ಹೊಂಡವನ್ನ ದುರಸ್ಥಿ ಮಾಡಿದರೆ ಈ ಇಲ್ಲಿನ ಹೊಂಡದಲ್ಲಿ ಇಲ್ಲಿಗೆ ಬರುವ ಭಕ್ತರು ಸ್ನಾನ ಮಾಡಿ ದೇವರ ದರ್ಶನ ಮಾಡಬಹುದು. ಆದರೆ ಇವುಗಳನ್ನ ಪುರಾತತ್ವ ಇಲಾಖೆಯ ಅಧಿಕಾರಿಗಳು ಪಾಪನಾಶ ಹೊಂಡ, ಗಣೇಶ್ ಹೊಂಡ, ನಂದಿ ಹೊಂಡ, ಗಯಾ ಹೊಂಡ ಹಾಗೂ ಭೂತನಾತ ಹೊಂಡಗಳು ಅವಸಾನದ ಅಂಚಗೆ ಬಂದು ನಿಂತಿವೆ.
ಇದನ್ನೂ ಓದಿ: ಬೀದರ್: ಶಾಲೆ ಕಿರಿದಾದರೂ ಸಾಧನೆ ಹಿರಿದು: ಸರಕಾರಿ ಶಾಲೆಯ ಆವರಣದಲ್ಲಿ ಕಿರು ಉದ್ಯಾನವನ
ಇಲ್ಲಿನ ಪ್ರತಿಯೊಂದು ಹೊಂಡವು ಕೂಡಾ ತನ್ನದೇ ಆದಂತಹ ಇತಿಹಾಸವನ್ನ ಹೊಂದಿ ಇತಿಹಾಸದ ಪುಟದಲ್ಲಿ ಇಲ್ಲಿನ ಹೊಂಡಗಳು ದಾಖಲಾಗಿವೆ. ದೇವಸ್ಥಾನದ ಪಕ್ಕದಲ್ಲಿ ಭಕ್ತರಿಗೆ ಸ್ನಾನ ಮಾಡಿ ದೇವರ ದರ್ಶನ ಪಡೆಯಲು ಅನುಕೂಲವಾಗಲೆಂದು ಒಂದು ಹೊಂಡ ಮಾತ್ರ ಭಕ್ತರು ಉಪಯೋಗಿಸುತ್ತಿದ್ದಾರೆ, ಆದರೆ ದೇವರ ದರ್ಶನಕ್ಕೆ ದಿನಕ್ಕೆ ಸಾವಿರಾರು ಭಕ್ತರು ಬರುವದರಿಂದ ಒಂದೆ ಒಂದು ಹೊಂಡದಲ್ಲಿನ ನೀರು
ಎಲ್ಲರುಗೂ ಸ್ನಾನ ಮಾಡಲು ಆಗುವದಿಲ್ಲ ಜೊತೆಗೆ ಆ ನೀರು ಕೂಡಾ ಕಲ್ಮಶವಾಗಿದ್ದು, ಸ್ನಾನ ಮಾಡದಂತಾ ಸ್ಥಿಯಲ್ಲಿ ಆ ನೀರಿದೆ ಇದರಿಂದಾಗೆ ಬಹಳಷ್ಟು ಭಕ್ತರು ಸ್ನಾನ ಮಾಡದೆ ಹಾಗೆ ವಾಪಸ್ಸ ಹೊಗುತ್ತಿದ್ದಾರೆ.
ಪುರಾತತ್ವ ಇಲಾಖೆಯ ಅಧಿಕಾರಿಗಳು ಇಲ್ಲಿ ಹೊಂಡಗಳನ್ನ ದುರಸ್ಥಿ ಮಾಡಿ ಭಕ್ತರ ಸ್ನಾನಕ್ಕೆ ಅನುಕೂಲ ಕಲ್ಪಿಸಿಕೊಡಬೇಕಂದು ಇಲ್ಲಿನ ಭಕ್ತರು ಕೇಳಿಕೊಳ್ಳುತ್ತಿದ್ದಾರೆ. ಇನ್ನೂ ಇದಷ್ಟೇ ಅಲ್ಲದೆ ಬೀದರ್ ಜಿಲ್ಲೆಯ ಬಹುತೇಕ ಪುರಾತನ ದೇವಸ್ಥಾನದಲ್ಲಿ ನೀರಿನ ಹೊಂಡಳಿದ್ದು ಅವುಗಳನ್ನ ಕೂಡಾ ದುರಸ್ಥಿ ಮಾಡಿ ಎಂದು ಇಲ್ಲಿನ ಭಕ್ತರು ಜಿಲ್ಲಾಢಳಿತಕ್ಕೆ ಮನವಿ ಮಾಡುತ್ತಿದ್ದಾರೆ.
ಇತಿಹಾಸ ಸಾರುವ ಪ್ರಶಿದ್ದ ಹೊಂಡಗಳು ವಿನಾಶದ ಅಂಚಿಗೆ ಬಂದು ನಿಂತಿವೆ. ಇಷ್ಟಾದರು ಕೂಡಾ ಪುರಾತತ್ವ ಇಲಾಖೆ ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ. ಇದು ಸಹಜವಾಗಿಯೇ ಭಕ್ತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ಇದು ಹೀಗೆ ಮುಂದುವರೆದರೆ ಇತಿಹಾಸ ಸಾರುವ ಅದ್ಭುತ ದೇವಸ್ಥಾನದ ಕುರುಹು ಕೂಡ ಉಳಿಯುವುದರಲ್ಲಿ ಅನುಮಾನವೇ ಇಲ್ಲಾ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.