ಬೀದರ್: 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಬೃಹತ್ ಗೋದಾಮು ಅರ್ಧಬರ್ಧ ಕಾಮಗಾರಿ: ರೈತರ ಆಕ್ರೋಶ
ಜಿಲ್ಲೆಯ ಔರಾದ್ ಪಟ್ಣದಲ್ಲಿ 2015-16 ನೇ ಸಾಲಿನಲ್ಲಿ 13 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಉಗ್ರಾಣ ನಿಗಮದಿಂದ ಔರಾದ್ ಪಟ್ಟಣದ ರೈತ ಭವನದ ಹಿಂದೆ ಎರಡು ಬೃಹತ್ತಾದ ಗೋದಾಮು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇಲ್ಲಿ ಗೋದಾಮು ನಿರ್ಮಾಣದ ಕಾಮಗಾರಿ ಅರ್ಧಕ್ಕೆ ನಿಂತೂ ಆರು ವರ್ಷಗಳು ಉರುಳಿದರೂ ಕೂಡಾ ನಿಂತಿರುವ ಕಾಮಗಾರಿಯನ್ನ ಆರಂಭಿಸಿಲ್ಲ.
ಬೀದರ್, ಸೆಪ್ಟೆಂಬರ್ 23: ರೈತರು (Farmers) ಬೆಳೆಸಿದ ದವಸ ಧಾನ್ಯವನ್ನ ಸಂಗ್ರಹಿಸಲು ಅಲ್ಲಿ ಗೋದಾಮು ನಿರ್ಮಾಣ ಮಾಡಲಾಗುತ್ತಿತ್ತು. 13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಬೃಹತ್ ಗೋದಾಮು ಅರ್ಧಬರ್ಧ ಕಾಮಗಾರಿ ಮಾಡಿ ಗುತ್ತಿಗೆದಾರ ಪಲಾಯನ ಮಾಡಿದ್ದಾನೆ. ಹೀಗಾಗಿ ಆರು ವರ್ಷದಿಂದ ಕೆಲಸ ಅರ್ಧಕ್ಕೆ ನಿಂತಿದ್ದು ಕೊಟ್ಯಾಂತರ ರೂಪಾಯಿ ವ್ಯರ್ಥವಾಗಿದ್ದು ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.
ಜಿಲ್ಲೆಯ ಔರಾದ್ ಪಟ್ಣದಲ್ಲಿ 2015-16 ನೇ ಸಾಲಿನಲ್ಲಿ 13 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಉಗ್ರಾಣ ನಿಗಮದಿಂದ ಔರಾದ್ ಪಟ್ಟಣದ ರೈತ ಭವನದ ಹಿಂದೆ ಎರಡು ಬೃಹತ್ತಾದ ಗೋದಾಮು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇಲ್ಲಿ ಗೋದಾಮು ನಿರ್ಮಾಣದ ಕಾಮಗಾರಿ ಅರ್ಧಕ್ಕೆ ನಿಂತೂ ಆರು ವರ್ಷಗಳು ಉರುಳಿದರೂ ಕೂಡಾ ನಿಂತಿರುವ ಕಾಮಗಾರಿಯನ್ನ ಆರಂಭಿಸಿಲ್ಲ ಇದರಿಂದಾಗಿ ಅರ್ಧಬರ್ಧ ನಿಂತುಕೊಂಡಿರುವ ಕಾಮಗಾರಿಯೂ ಹಾಳಾಗುತ್ತಿದ್ದು ಪುಂಡ ಪೋಕರಿಗಳ ಸ್ಥಳವಾಗಿ ಬದಲಾಗಿದೆ.
ಈ ಕಾಮಗಾರಿಯ ಬಗ್ಗೆ ಉಗ್ರಣ ನಿಗಮದ ಅಧಿಕಾರಿಗಳನ್ನ ಕೇಳಿದರೆ ಅವರು ಇದರ ಬಗ್ಗೆ ಸಮರ್ಪಕವಾದ ಉತ್ತರವನ್ನ ಕೊಡುತ್ತಿಲ್ಲ ಜೊತೆಗೆ ಮಾಧ್ಯಮದವರ ಜೊತೆಗೆ ಮಾತನಾಡಲು ಕೂಡಾ ಹಿಂದೆಟು ಹಾಕುತ್ತಿದ್ದಾರೆ.
ಇದನ್ನೂ ಓದಿ: ಬೀದರ್: ಶಾಲೆ ಕಿರಿದಾದರೂ ಸಾಧನೆ ಹಿರಿದು: ಸರಕಾರಿ ಶಾಲೆಯ ಆವರಣದಲ್ಲಿ ಕಿರು ಉದ್ಯಾನವನ
ಗೋದಾಮು ಅರ್ಧಕ್ಕೆ ನಿಲ್ಲಿಸಿ ಫಲಾಯನ ಮಾಡಿರುವ ಗುತ್ತಿಗೆದಾರನ ವಿರುದ್ಧ ಔರಾದ್ ನಿವಾಸಿ ಗುರುನಾಥ ವಡ್ಡೆ ಎಂಬುವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದು ಉಗ್ರಣ ನಿರ್ಮಾಣದ ಹೆಸರಿನಲ್ಲಿ ಭ್ರಷ್ಠಾಚಾರ ನಡೆದಿದ್ದು, ಸಮಗ್ರ ತನಿಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇನ್ನೂ 2023 ಅಗಷ್ಟ್ 24 ರಂದು ಬೆಂಗಳೂರಿನ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಶಕ್ತ ಅರ್ಜಿಯನ್ನ ಸಹ ಸಲ್ಲಿಸಿದ್ದು ಗುತ್ತಿಗೆದಾರನಿಗೆ, ಸಂಬಂಧಿಸಿದ ಇಲಾಕೆಯ ಅಧಿಕಾರಿಗಳಿಗೆ ನಡುಕ ಶುರುವಾಗಿದೆ..
ಔರಾದ್ ತಾಲೂಕಿನ ರೈತರು ತಾವು ಬೆಳೆಸಿದ ದವಸ ಧಾನ್ಯಗಳನ್ನ ಸಂಗ್ರಹಿಸಿಡುವ ಉದ್ದೇಶದಿಂದ ಈ ಇಲ್ಲಿ ಗೋದಾಮು ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಕಳೆದ ಏಳು ವರ್ಷದಿಂದ ಗೋದಾಮು ಕಾಮಗಾರಿ ಆರ್ಧಕ್ಕೆ ನಿಂತುಕೊಂಡಿದ್ದು ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ಗೋದಾಮು ನಿರ್ಮಾಣ ಉದ್ದೇಶವಿಲ್ಲಿ ವಿಫಲವಾಗಿದ್ದು ರೈತರು ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ರೈತರು ತಾವು ಬೆಳೆದ ದವಸ ಧಾನ್ಯವನ್ನ ಖಾಸಗಿ ಗೋದಾಮಿನಲ್ಲಿ ಹೆಚ್ಚಿಗೆ ಹಣವನ್ನ ಕೊಟ್ಟು ತಮ್ಮ ದವಧಾನ್ಯವನ್ನ ಇಡುವಂತಾ ಸ್ಥಿತಿಯಿಲ್ಲಿ ಎದುರಾಗಿದೆ ನಿರ್ಮಾಣವಾಗಿದ್ದು ರೈತರಿಗೆ ಇದು ಹೊರೆಯಾಗಿ ಪರಿಣಮಿಸಿದೆ.
ಏಳು ವರ್ಷದಿಂದ ಗೋದಾಮು ಕಾಮಗಾರಿ ಅರ್ಧಕ್ಕೆ ನಿಂತುಕೊಂಡಿರುವ ಪರಿಣಾಮದಿಂದಾಗಿ ಮಳೆ, ಬಿಸಿಲಿಗೆ ಅರ್ಧಕ್ಕೆ ನಿಂತುಕೊಂಡಿರುವ ಕಟ್ಟಡ ಉಪಯೋಗಕ್ಕೆ ಬಾರದಂತಾಗಿದೆ. ಇನ್ನೂ ಗೋದಾಮಿನ ಚಾವಣಿ ಕೆಲಸವನ್ನ ಮಾಡಲಾಗಿದೆ ಮಳೆಯಿಂದಾ ಚಾವಣಿಗೆ ಹಾಕಿದ ಕಬ್ಬಿಣದ ಸಲಾಖೆಗಳು ತುಕ್ಕು ಹಿಡಿದಿದ್ದು ಮರು ಉಪಯೋಗಕ್ಕೆ ಬಾರದಂತಾಗಿದೆ.
ಇದನ್ನೂ ಓದಿ: ನೂರಾರು ಕೋಟಿ ರೂ. ವೆಚ್ಚಮಾಡಿ ಕಾಲುವೆ ದುರಸ್ಥಿ: ಆದರೂ ಬರಲಿಲ್ಲ ನೀರು, ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ
ಇದರಿಂದಾಗಿ ಉಗ್ರಾಣ ನಿರ್ಮಾಣಕ್ಕೆ ಬಳಸಲಾಗಿರುವ ಸುಮಾರು 1139.86 ಲಕ್ಷ ರೂಪಾಯಿ ಹಣ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದ್ದು ಸರಕಾರದ ಭೊಕ್ಕಸಕ್ಕೆ ಕೊಟ್ಯಾಂತರ ರೂಪಾಯಿ ನಷ್ಟವಾಗಿದ್ದು ಈ ಹಣವನ್ನ ಗುತ್ತಿಗೆದಾರನಿಂದ ಮರಳಿ ಪಡೆದುಕೊಂಡು ಆತನ ಮೇಲೆ ಕ್ರಿಮಿನಲ್ ಪ್ರಕರಣ ಹಾಕಿ ಆತನನ್ನ ಜೈಲಿಗೆ ಕಳುಹಿಸಬೇಕೆಂದು ಇಲ್ಲಿನ ರೈತರು ಹೇಳುತ್ತಿದ್ದಾರೆ. ರೈತರ ಅನೂಕುಲಕ್ಕೆ ನಿರ್ಮಾಣವಾಗುತ್ತಿದ್ದು ಗೋದಾಮು ಆರ್ದಕ್ಕೆ ನಿಂತಿದ್ದು ಇದು ರೈತರಿಗೆ ಸಮಸ್ಯೆಯಾಗಿದೆ ಎಂದು ಸಮಾಜ ಸೇವಕ ಗುರುನಾಂತ್ ವಡ್ಡೆ ಹೇಳುತ್ತಿದ್ದಾರೆ.
ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದ್ದರು ಅಧಿಕಾರಿಗಳು ಕಂಡು ಕಾಣದಂತೆ ಕುಳಿತಿದ್ದಾರೆ. ಗೋದಾಮು ನಿರ್ಮಾಣದ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಭ್ರಷ್ಟಚಾರ ನಡೆದಿದೆ ಅದನ್ನ ತನಿಕೆ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರಿಗೆ ದೂರು ಕೂಡಾ ಕೊಡಲಾಗಿದೆ. ಈ ಪ್ರಕರಣವನ್ನ ಲೋಕಾಯುಕ್ತ ಅಧಿಕಾರಿಗಳು ಹೇಗೆ ಪರಿಗಣಿಸುತ್ತಾರೆಂದು ಕಾದು ನೋಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.