ಕಟ್ಟಿ 10 ವರ್ಷವಾದರೂ ಬಳಕೆಯಾಗದ ಸರ್ಕಾರಿ ಹಾಸ್ಟೆಲ್​, ಜೂಜುಕೋರರ ಅಡ್ಡೆಯಾದ ವಿದ್ಯಾರ್ಥಿನಿಯರ ವಸತಿ ನಿಲಯ !

ಬಳಕೆಯಾಗದೆ ಅನೈತಿಕ ಚಟುವಟಿಗೆಗಳ ತಾಣವಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್

ಕಟ್ಟಿ 10 ವರ್ಷವಾದರೂ ಬಳಕೆಯಾಗದ ಸರ್ಕಾರಿ  ಹಾಸ್ಟೆಲ್​, ಜೂಜುಕೋರರ ಅಡ್ಡೆಯಾದ ವಿದ್ಯಾರ್ಥಿನಿಯರ ವಸತಿ ನಿಲಯ !
ವಿದ್ಯರ್ಥಿನಿಯರ ವಸತಿ ನಿಲಯ
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 01, 2022 | 10:01 PM

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಹಾಸ್ಟೆಲ್ ನಿರ್ಮಿಸಲಾಗಿದೆ. ಈ ಹಾಸ್ಟೇಲ್ ಕಟ್ಟಡ ಪೂರ್ಣಗೊಂಡು ಐದು ವರ್ಷಗಳು ಉರುಳಿದ್ದು, ಪ್ರತಿ ವರ್ಷ ಹಾಸ್ಟೆಲ್ ರೀಪೇರಿಗಾಗಿ ಹಣ ಖರ್ಚು ಮಾಡುತ್ತಿದ್ದಾರೆ. ಆದರೆ ಈ ಹಾಸ್ಟೇಲ್ ಕಟ್ಟಡ ವಿದ್ಯಾರ್ಥಿಗಳಿಗೆ ಬಳಕೆಯಾಗುತ್ತಿಲ್ಲ ಹೀಗಾಗಿ ಈ ಕಟ್ಟಡ ಇದ್ದು ಇಲ್ಲದಂತಾಗಿದೆ. ಐದಾರು ವರ್ಷಗಳಿಂದ ಬಳಸಿಕೊಳ್ಳದ ಕಟ್ಟಡಗಳು ಜೂಜು ಕೋರರ ಅಡ್ಡೆಯಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಬೀದರ್ ತಾಲೂಕಿ ಕಮಠಾಣ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಕಟ್ಟಡವನ್ನ 56 ಲಕ್ಷ ರೂಪಾಯಿ ವೆಚ್ಚದಲ್ಲಿ 2001-02 ರಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಇದುವರೆಗೂ ಕೂಡ ಈ ಕಟ್ಟಡವನ್ನು ವಿದ್ಯಾರ್ಥಿಗಳ ಬಳಕೆಗೆ ನೀಡಿಲ್ಲ. ಇದರಿಂದ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಕಟ್ಟಡದ ಗಾಜುಗಳನ್ನು ಕಿಡಗೇಡಿಗಳು ಒಡೆದುಹಾಕುತ್ತಿದ್ದು, ರಿಪೇರಿಗಾಗಿ ಬಜೆಟ್​ನಿಂದ ಹಣ ತಂದು ಹೊಸ ಗಾಜುಗಳನ್ನು ಅಳವಡಿಸಿ ಮತ್ತೆ ಸುಣ್ಣ ಬಣ್ಣ ಬಳೆಯುತ್ತಾರೆ . ಆದರೆ ಮಕ್ಕಳ ಬಳಕೆಗೆ ಮಾತ್ರ ಅವಕಾಶ ಕೊಟ್ಟಿಲ್ಲ. ಈ ಹಾಸ್ಟೆಲ್​ನಲ್ಲಿ ಉಳಿಯಬೇಕಾದ ಮಕ್ಕಳು ಬಾಡಿಗೆ ಕಟ್ಟಡದಲ್ಲಿ ವಸತಿ ಮಾಡುತ್ತಿದ್ದಾರೆ.

ತಿಂಗಳಿಗೆ ಬಾಡಿಗೆ ರೂಪದಲ್ಲಿ ಮಕ್ಕಳಿಗಾಗಿ 55 ಸಾವಿರ ರೂಪಾಯಿ ಹಣವನ್ನು ಸರಕಾರ ಬರಿಸುತ್ತಿದೆ. ಆದರೆ ಇಷ್ಟು ಸುಂದರವಾದ ಕಟ್ಟಡವನ್ನ ಬಳಸಿಕೊಳ್ಳದೆ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದ್ದು ಖೇದರದ ಸಂಗತಿ. ಬಾಡಿಗೆ ಹಾಸ್ಟೆಲ್​ನಲ್ಲಿ ಸುಮಾರು 29 ವಿದ್ಯಾರ್ಥಿನೀಯರು ವಾಸಿಸುತ್ತಿದ್ದು, ಮಕ್ಕಳಿಗೆ ಹತ್ತಾರು ಸಮಸ್ಯೆಗಳು ಕಾಡುತ್ತಿವೆ. ಆದರೂ ಕೂಡಾ ಅನಿವಾರ್ಯವಾಗಿ ವಿದ್ಯಾರ್ಥಿನೀಯರು ಇಲ್ಲಿಯೇ ವಾಸವಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಊರ ಹೊರಗಿರುವ ಈ ನೂತನ ಹಾಸ್ಟೇಲ್ ಕಟ್ಟಡಕ್ಕೆ ಹೋಗಲು ವಿದ್ಯಾರ್ಥಿನೀಯರು ಕೂಡಾ ಒಪ್ಪುತ್ತಿಲ್ಲ. ನೂತನ ಹಾಸ್ಟೆಲ್ ಕಟ್ಟಡದಿಂದ ವಿದ್ಯಾರ್ಥಿನೀಯರು ಓದುವ ಶಾಲೆ ಕನಿಷ್ಟ ಅಂದರು ಮೂರು ಕಿಲೋಮೀಟರ್ ದೂರವಿದೆ. ಹೀಗಾಗಿ ಅಲ್ಲಿಂದ ನಾವು ನಡೆದುಕೊಂಡು ಬಂದು ಶಾಲೆ ಕಲಿಯುವುದು ಕಷ್ಟದ ಕೆಲಸ ಎಂದು ವಿದ್ಯಾರ್ಥಿನೀಯರು ಹೇಳುತ್ತಿದ್ದಾರೆ.

ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಸರಿ ಸುಮಾರು 20 ಕ್ಕಿಂತ ಹೆಚ್ಚು ಸುಸಜ್ಜಿತ ಹಾಸ್ಟೆಲ್ ಕಟ್ಟಡಗಳನ್ನು ಕಟ್ಟಲಾಗಿದೆ. ಪ್ರತಿಯೊಂದು ಕಟ್ಟಡವೂ ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಪ್ಲಾನ್ ರೂಪಿಸಿ ಕಟ್ಟಡಗಳನ್ನ ಕಟ್ಟಲಾಗಿದೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಟ್ಟಿದ ಕಟ್ಟಡಗಳನ್ನ ಉದ್ಘಾಟನೆ ಮಾಡಿ ಅಲ್ಲಿ ವಿದ್ಯಾರ್ಥಿಗಳಿಗೆ ಉಳಿಯಲಿಕ್ಕೆ ಅನೂಕೂಲ ಕಲ್ಪಿಸಿಲ್ಲ. ಜೊತೆಗೆ ಕಟ್ಟಡಗಳು ಕಟ್ಟಿ ಐದು ವರ್ಷ ಕಳೆದಿದ್ದರಿಂದ ಕಟ್ಟಿದ ಕಟ್ಟಡಗಳು ಸಂಪೂರ್ಣವಾಗಿ ಹಾಳಾಗುವ ಹಂತ ತಲುಪಿದೆ. ಹಲವಾರು ಆಸೆ ಕನಸುಗಳನ್ನ ಕಟ್ಟಿಕೊಂಡು ಹಾಸ್ಟೆಲ್​ಗೆ ಬರುವ ವಿದ್ಯಾರ್ಥಿ ವಿದ್ಯಾರ್ಥಿನೀಯರಿಗೆ ಹಳೆ ಕಟ್ಟಡದಲ್ಲಿಯೇ ವಾಸ ಮಾಡುವಂತಾಗಿದೆ. ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಕಟ್ಟಗಳು ಜೂಜುಕೋರರಿಗೆ ಬಳಕೆಯಾಗುತ್ತಿದೆ ಹೊರತು ಅದು ಮಕ್ಕಳಿಗೆ ಮಾತ್ರ ಬಳಕೆಯಾಗದಿರುವುದು ದುರ್ದೈವದ ಸಂಗತಿ.

Published On - 10:01 pm, Tue, 1 November 22