ಪಾಳುಬಿದ್ದ ಕೋಟ್ಯಾಂತರ ರೂಪಾಯಿ ವೆಚ್ಚದ ಟೌನ್‌ಹಾಲ್ ಅನೈತಿಕ ಚಟುವಟಿಗೆಳ ತಾಣ
ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಟೌನ್‌ಹಾಲ್ ಪಾಳುಬಿದ್ದಿದೆ.
Updated on:Nov 02, 2022 | 6:37 PM

Neglected government new town hall bulding in bidar

Neglected government new town hall bulding in bidar

500 ಜನ ಕುಳಿತುಕೊಳ್ಳುವ ಹೈಟೆಕ್ ಮಾದರಿಯ ಟೌನ್‌ಹಾಲ್ ಇದಾಗಿದ್ದು, ಸೌಂಡ್ ಸಿಸ್ಟಮ್, ವಿದ್ಯುತ್ ದೀಪ ಮತ್ತು ಎಸಿಗಂತಲೇ 1.20 ಕೋಟಿ ವೆಚ್ಚ ಮಾಡಲಾಗಿದ್ದು, ಇನ್ನೂ ಉದ್ಘಾಟನೆಗೊಂಡಿಲ್ಲ. ಹೀಗಾಗಿ ಹೈಟೆಕ್ ಮಾದರಿ ಪುರಭವನ ಪಾಳು ಬಿದ್ದಿದೆ.

ಕಟ್ಟಡ ಕಾಮಗಾರಿ ಮುಗಿದು ಮೂರು ವರ್ಷ ಕಳೆದರು ಲೋಕೋಪಯೋಗಿ ಇಲಾಖೆಯಿಂದ ಪುರಸಭೆಗೆ ಕಟ್ಟಡ ಇನ್ನೂ ಹಸ್ತಾಂತರವಾಗಿಲ್ಲ. ಹೀಗಾಗಿ ಪುರಸಭೆಯ ಅಧಿಕಾರಿಗಳು ಕಟ್ಟಡ ಬಳಕೆ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ.

ಸದ್ಯ ಟೌನ್‌ಹಾಲ್ ಉದ್ಘಾಟನೆಯಾಗದೆ ಹಾಳು ಕೊಂಪೆಯಂತಾಗಿದ್ದು, ಅನೈತಿಕ ಚಟುವಟಿಕೆಯ ತಾಣವಾಗಿದೆ.

ಟೌನ್‌ಹಾಲ್ ಹಾಲ್ನ ಸುತ್ತ ಆಳೆತ್ತರೆದ ಕಸ ಬೆಳದಿದ್ದು, ಟೌನ್ಹಾಲ್ನ ಕಿಟಕಿ, ವಿದ್ಯುತ್ ದೀಪಗಳ ಒಡೆದು ಹೋಗಿವೆ.

ಟೌನ್ಹಾಲ್ನಲ್ಲಿನರುವ ವಸ್ತುಗಳನ್ನು ಬಳಸುವವರು ಇಲ್ಲದೆ, ದೂಳು ತುಂಬಿದ್ದು, ಪಕ್ಷಿಗಳು ವಾಸಿಸಲು ಅನುಕೂಲವಾಗಿದೆ.
Published On - 6:36 pm, Wed, 2 November 22
























