ಟಿವಿ9ನ ಮಂಗಳೂರು ಕ್ಯಾಮೆರಾ ಮ್ಯಾನ್ ವಿಲ್ಫ್ರೆಡ್ ಡಿಸೋಜಾ, ಬೀದರ್ ಜಿಲ್ಲಾ ವರದಿಗಾರ ಸುರೇಶ್ ನಾಯಕ್ಗೆ ರಾಜ್ಯೋತ್ಸವ ಪ್ರಶಸ್ತಿ
ಹದಿನೈದು ವರ್ಷಗಳ ದೃಶ್ಯ ಮಾಧ್ಯಮದ ಸೇವೆಯನ್ನ ಗುರುತಿಸಿ ಬೀದರ್ ಟಿವಿ9 ಜಿಲ್ಲಾ ವರದಿಗಾರ ಸುರೇಶ್ ನಾಯಕ್ ಅವರಿಗೆ ಬೀದರ್ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ಕೊಟ್ಟು ಗೌರವಿಸಲಾಯಿತು.
ಮಂಗಳೂರು: ನವೆಂಬರ್ 1 ರಂದು (November) ಟಿವಿ9ನ ಇಬ್ಬರು ಸಿಬ್ಬಂದಿಗೆ ರಾಜ್ಯೋತ್ಸವ ಪ್ರಶಸ್ತಿ (Rajyotsava Award) ಸಿಕ್ಕಿದ್ದು ಟಿವಿ9ನ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಂತಾಗಿದೆ. ಟಿವಿ9 ಕ್ಯಾಮೆರಾ ಮ್ಯಾನ್ ವಿಲ್ಫ್ರೆಡ್ ಡಿಸೋಜಾಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯ್ತು. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಂಸದ ನಳೀನ್ ಕುಮಾರ್ ಕಟೀಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯ್ತು. ಟಿವಿ9 ಕ್ಯಾಮೆರಾ ಮ್ಯಾನ್ ಆಗಿರುವ ಕೆ. ವಿಲ್ಫ್ರೆಡ್ ಡಿಸೋಜ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದವರು. ಸುಮಾರು 25 ವರ್ಷಗಳಿಂದ ಟಿ.ವಿ. ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 1997-98 ರಲ್ಲಿ ಟಿವಿ ಮಾಧ್ಯಮಕ್ಕೆ ಪ್ರವೇಶ ಮಾಡಿದ್ರು. ವಿವಿಧ ಸ್ಥಳೀಯ ಚಾನೆಲ್ ಗಳಲ್ಲಿ ಕಾರ್ಯ ನಿರ್ವಹಿಸಿದ್ರು. 2006 ಅಗಸ್ಟ್ ನಿಂದ ಇಂದಿನವರೆಗೆ Tv9 ಮಾಧ್ಯಮದಲ್ಲಿ 16 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ದಿನವೇ ಮುಳುಬಾಗಿಲುನಲ್ಲಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಪಂಚರತ್ನ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ
ಬೀದರ್ ಜಿಲ್ಲಾ ವರದಿಗಾರ ಸುರೇಶ್ ನಾಯಕ್ಗೆ ರಾಜ್ಯೋತ್ಸವ ಪ್ರಶಸ್ತಿ
ಇನ್ನು ಹದಿನೈದು ವರ್ಷಗಳ ದೃಶ್ಯ ಮಾಧ್ಯಮದ ಸೇವೆಯನ್ನ ಗುರುತಿಸಿ ಬೀದರ್ ಟಿವಿ9 ಜಿಲ್ಲಾ ವರದಿಗಾರ ಸುರೇಶ್ ನಾಯಕ್ ಅವರಿಗೆ ಬೀದರ್ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ಕೊಟ್ಟು ಗೌರವಿಸಲಾಯಿತು. ರಾಜ್ಯದ ನಂಬರ್ 1 ಸುದ್ದಿ ವಾಹಿನಿ ಟಿವಿ9 ನ ಬೀದರ್ ಜಿಲ್ಲಾ ವರದಿಗಾರನಾಗಿ 9 ವರ್ಷಗಳ ಕಾಲ ಜಿಲ್ಲೆಯ ಜನರ ಸಮಸ್ಯೆಗಳಿಗೆ, ನೊಂದವರು, ಬಡವರು ಪರ ಅವರ ಧ್ವನಿಯಾಗಿ ಅವರ ಸಮಸ್ಯೆಯನ್ನ ರಾಜ್ಯದ ಜನರ ಮುಂದಿಟ್ಟು ಅವರ ಸಮಸ್ಯೆಯನ್ನ ಬಗೆಹರಿಸುವ ಕೆಲಸ ಮಾಡಿದ್ದಕ್ಕಾಗಿ ಜಿಲ್ಲಾಡಳಿತ ಗುರುತಿಸಿ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ಕೊಟ್ಟು ಗೌರವಿಸಿದೆ. ಅತಿವೃಷ್ಠಿ ಅನಾವೃಷ್ಠಿ ಸಮಯದಲ್ಲಿ ಅನ್ನದಾತರ ಗೋಳನ್ನ ವಾಹಿನಿಯ ಮೂಲಕ ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಸಂಬಂಧ ಪಟ್ಟವರ ಗಮನಕ್ಕೆ ತಂದು ನೇಗಿಲ ಯೋಗಿಯ ಕಣ್ಣಿರು ಒರೆಸುವ ಕೆಲಸವನ್ನ ಮಾಡಿದ್ದಕ್ಕಾಗಿ ಗುರುತಿಸಿ ಇಂದು ವಿಶೇಷವಾಗಿ ಸನ್ಮಾನ ಮಾಡಲಾಯಿತು.
ಇದರ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಮಾರು 15 ಜನ ಸಾಧಕರಿಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ಕೊಟ್ಟು ಸನ್ಮಾನ ಮಾಡಲಾಯಿತು. ಇನ್ನೂ ಈ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾಜಿ ಸಚಿವ ಹಾಲಿ ಶಾಸಕ ಬೀದರ್ ಉತ್ತರ ವಿಧಾನ ಸಬಾ ಕ್ಷೇತ್ರದ ಶಾಸಕ ರಹೀಂ ಖಾನ್, ವಿಧಾನ ಪರಿಷತ್ ಸದಶ್ಯ ಅರವಿಂದ್ ಕುಮಾರ್ ಅರಳಿ, ಬೀದರ್ ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ ಭಾಗವಹಿಸಿದ್ದರು.
Published On - 8:43 am, Wed, 2 November 22