ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ಘೋಷಣೆ: ವಿಜಯೇಂದ್ರ ಮುಂದುವರಿಯದಂತೆ ಭಿನ್ನರ ಪಡೆ ವ್ಯೂಹ

ಯಾವ ಕಾರಣಕ್ಕೂ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಮುಂದುವರೆಯಬಾರದು ಎಂಬುದು ಬಿಜೆಪಿ ಭಿನ್ನರ ತಂಡದ ಒನ್‌ಲೈನ್‌ ಅಜೆಂಡಾ. ಬಿವೈವಿ ಮುಂದುವರೆಸಿದರೆ, ಪಕ್ಷಕ್ಕೆ ಡ್ಯಾಮೇಜ್‌ ಆಗುವುದು ಖಂಡಿತಾ ಎಂಬುದು ಅವರ ಅಭಿಪ್ರಾಯ. ಈ ಎಲ್ಲ ತಲೆನೋವಿನ ಮಧ್ಯೆಯೇ ಬಿಜೆಪಿ ಹೈಕಮಾಂಡ್‌ ರಾಜ್ಯಾಧ್ಯಕ್ಷರ ಘೋಷಣೆಗೆ ಮುಂದಾಗಿದ್ದು, ಕುತೂಹಲ ಮೂಡಿಸಿದೆ.

ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದ ಬಿಜೆಪಿ ರಾಜ್ಯಾಧ್ಯಕ್ಷ ಘೋಷಣೆ: ವಿಜಯೇಂದ್ರ ಮುಂದುವರಿಯದಂತೆ ಭಿನ್ನರ ಪಡೆ ವ್ಯೂಹ
ಆರ್ ಅಶೋಕ, ವಿ ಸುನೀಲ್ ಕುಮಾರ್ ಹಾಗೂ ಬಿವೈ ವಿಜಯೇಂದ್ರ (ಸಂಗ್ರಹ ಚಿತ್ರ)
Updated By: Ganapathi Sharma

Updated on: Jul 01, 2025 | 7:45 AM

ಬೆಂಗಳೂರು, ಜುಲೈ 1: ಬಿವೈ ವಿಜಯೇಂದ್ರ (BY Vijayendra) ಅವರನ್ನೇ ಕರ್ನಾಟಕ ಬಿಜೆಪಿ (BJP) ಸಾರಥಿಯನ್ನಾಗಿ ಮುಂದುವರಿಸಬೇಕಾ, ಬೇಡವಾ ಎಂಬ ಚರ್ಚೆ 6ತಿಂಗಳಿನಿಂದಲೂ ನಡೆಯುತ್ತಿದೆ. ಅದೀಗ ಅಂತಿಮ ಘಟ್ಟಕ್ಕೆ ಬಂದಂತಾಗಿದೆ. ಇಂದು ಸಂಜೆ 5ಕ್ಕೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯ ಘಟಕಗಳ ಬಿಜೆಪಿ ಅಧ್ಯಕ್ಷರ ಘೋಷಣೆಗೆ ಸಮಯ ನಿಗದಿಯಾಗಿದೆ. ಹೀಗಾಗಿ, ಕರ್ನಾಟಕದಲ್ಲೂ ಇಂದು ಅಥವಾ ನಾಳೆ ರಾಜ್ಯಾಧ್ಯಕ್ಷರ ನೇಮಕಾತಿ ಘೋಷಿಸುವ ಸಾಧ್ಯತೆ ಇದೆ. ಹಾಲಿ ಅಧ್ಯಕ್ಷ ವಿಜಯೇಂದ್ರ ಭವಿಷ್ಯವೂ ನಿರ್ಧಾರವಾಗಲಿದೆ. ಆದರೆ, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್ ವ್ಯಂಗ್ಯವಾಡಿದ್ದು, ವಿಜಯೇಂದ್ರ ಮುಂದುವರೆಸಿದರೆ ಹೊಸ ಪಕ್ಷ ಕಟ್ಟುವ ಬಗ್ಗೆ ಚಿಂತಿಸುವುದಾಗಿ ಹೇಳಿದ್ದಾರೆ.

ಈ ಮಧ್ಯೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ ಹೆಸರು ಕೇಳಿ ಬರುತ್ತಿದ್ದಂತೆಯೇ, ಪಕ್ಷದ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ.

ಈಶ್ವರಪ್ಪ ಘರ್‌ವಾಪ್ಸಿಗೆ ಉತ್ಸುಕತೆ

ಬಿಜೆಪಿ ಉಚ್ಚಾಟಿಸಿರುವ ಕೆಎಸ್ ಈಶ್ವರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆತರಲು ಯತ್ನ ನಡೆಯುತ್ತಿದೆ. ಆದರೆ, ಅಧಿಕೃತ ಆಹ್ವಾನ ಬಂದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ವಿಜಯೇಂದ್ರ ಜಾದು ಮಾಡಿದ್ದಾನೆ ಎಂದು ಯತ್ನಾಳ್‌ ಮೂದಲಿಸಿದ್ದಾರೆ.

ಇದನ್ನೂ ಓದಿ
ಶಾಸಕರ ಮುನಿಸಿಗೆ ಮದ್ದರೆಯಲು ಸುರ್ಜೇವಾಲ ಸಂಧಾನ ಸೂತ್ರ
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ: ಭದ್ರತೆ ಹೆಚ್ಚಳ
ಮುಸ್ಲಿಂ ವ್ಯಕ್ತಿ ಜೊತೆ ಲಿವಿಂಗ್ ಟುಗೆದರ್: ಮಹಿಳೆ ಶವ ಕಸದ ಲಾರಿಲಿ ಪತ್ತೆ
ಬಿಜೆಪಿ ಭಿನ್ನಮತಕ್ಕೆ ಮದ್ದರೆದ ಆರೆಸ್ಟೆಸ್! ಆಂತರಿಕ ಸಭೆಯಲ್ಲಿ ಏನೇನಾಯ್ತು?

ಇದನ್ನೂ ಓದಿ: ಬಿಜೆಪಿ ಭಿನ್ನಮತಕ್ಕೆ ಮದ್ದರೆದ ಆರ್​ಎಸ್​ಎಸ್! ಆಂತರಿಕ ಸಭೆಯಲ್ಲಿ ಏನೇನಾಯ್ತು? ಇಲ್ಲಿದೆ ವಿವರ

ಒಟ್ಟಿನಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಘೋಷಣೆ ಎಂಬುದು ಬಿಜೆಪಿಗೆ ಗಜ ಪ್ರಸವದಂತಾಗಿದೆ. ಏತನ್ಮಧ್ಯೆ, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮೂಲಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ತಂತ್ರ ಹೆಣೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ