ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಬೇಡಿಕೆ ಇಟ್ಟ ಬಿಜೆಪಿ ನಾಯಕ
ಮೈಸೂರಿನಲ್ಲಿ ಟಿವಿ9 ಜೊತೆಗೆ ಮಾತನಾಡಿದ ಪರಿಷತ್ ಸದಸ್ಯ ಎಚ್ ವಿಶ್ವನಾಥ್, ನಾನು ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಈ ಬಗ್ಗೆ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ನೀವು ಬಿಜೆಪಿಯಲ್ಲಿ ಇದ್ದೀರಾ ಹೇಗೆ ಅಂತಾ ಕೇಳಿದರು. ಅದಕ್ಕೆ ನಾನು ಎಲ್ಲವನ್ನೂ ವಿವರಿಸಿದ್ದೇನೆ ಎಂದಿದ್ದಾರೆ.
ಮೈಸೂರು, ಮಾರ್ಚ್ 13: ನಾನು ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಈ ಬಗ್ಗೆ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತನಾಡಿದ್ದೇನೆ ಎಂದು ಪರಿಷತ್ ಸದಸ್ಯ ಎಚ್ ವಿಶ್ವನಾಥ್ (H Vishwanath) ಹೇಳಿದ್ದಾರೆ. ನಗರದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಅವರು, ಮೈಸೂರು-ಕೊಡಗು ‘ಕೈ’ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ನಾನು ಟೆಕ್ನಿಕಲಿ ಬಿಜೆಪಿಯಲ್ಲಿದ್ದೇನೆ. ನನಗೆ ಟಿಕೆಟ್ ನೀಡಿದರೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡುವೆ. ಸಿದ್ದರಾಮಯ್ಯ ನೀವು ಬಿಜೆಪಿಯಲ್ಲಿ ಇದ್ದೀರಾ ಹೇಗೆ ಅಂತಾ ಕೇಳಿದರು. ಅದಕ್ಕೆ ನಾನು ಎಲ್ಲವನ್ನೂ ವಿವರಿಸಿದ್ದೇನೆ ಎಂದು ಹೇಳಿದ್ದರು.
ಮುದ್ದು ಹನುಮೇಗೌಡರಿಗೂ ಟಿಕೆಟ್ ನೀಡಲಾಗುತ್ತಿದೆ. ಅದೇ ರೀತಿ ನನಗೂ ನೀಡಬಹುದು ಅಂತಾ ತಿಳಿಸಿದ್ದೇನೆ. ಸಿಎಂ ಸಿದ್ದರಾಮಯ್ಯ ನೋಡೋಣ ಅಂತಾ ಹೇಳಿದ್ದಾರೆ. ಒಂದು ವೇಳೆ ಟಿಕೆಟ್ ನೀಡಿದರೆ ಗೆಲ್ಲುವ ವಿಶ್ವಾಸ ಇದೆ ಎಂದಿದ್ದಾರೆ.
ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುವುದಿಲ್ಲ: ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ
ನಾನು ಇದೇ ಕ್ಷೇತ್ರದಲ್ಲಿ ಸಂಸದನಾಗಿದ್ದೇ. ಈ ವೇಳೆ ಕೊಡಗು ಮೈಸೂರಿನಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹಿಂದೆ ಸಚಿವನಾಗಿದ್ದಾಗ ಬಿಸಿಯೂಟ ಯಶಸ್ವಿನಿ ಯೋಜನೆ ಜಾರಿ ಮಾಡಿದ್ದೇನೆ. ಚುನಾವಣೆಗೆ ಹಣ ಜಾತಿಯಿಂದ ಮಾತ್ರವಲ್ಲ ಅನುಭವದ ಅವಶ್ಯಕತೆ ಇದೆ ಎಂದರು.
ಪ್ರತಾಪ್ ಅವರ ಈ ಪರಿಸ್ಥಿತಿಗೆ ಅವರ ನಡವಳಿಕೆ ಕಾರಣ ಎಂದ ಎಚ್ ವಿಶ್ವನಾಥ್
ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಕೈತಪ್ಪುವ ವಿಚಾರವಾಗಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಗಳಿಗಿಂತ ನಡವಳಿಕೆಗಳು ಮುಖ್ಯವಾಗುತ್ತೆ. ಪ್ರತಾಪ್ ಅವರ ಈ ಪರಿಸ್ಥಿತಿಗೆ ಅವರ ನಡವಳಿಕೆ ಕಾರಣ. ಪ್ರತಾಪ್ ಸಿಂಹ ನಡೆದುಕೊಂಡ ರೀತಿಯಿಂದ ಹೀಗಾಗಿದೆ ಎಂದು ಹೇಳಿದ್ದಾರೆ.
ನಾವು ಪಕ್ಷಕ್ಕಾಗಿ ದುಡಿಯುತ್ತೇವೆ: ಸ್ನೇಕ್ ಶ್ಯಾಮ್
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ನಗರದಲ್ಲಿ ಉರುಗ ಸಂರಕ್ಷಕ ಸ್ನೇಕ್ ಶ್ಯಾಮ್ ಹೇಳಿಕೆ ನೀಡಿದ್ದು, ಯದುವೀರ ಅವರಿಗೆ ಸಿಗಲಿ ಪ್ರತಾಪಸಿಂಹ ಅವರಿಗೆ ಟಿಕೆಟ್ ಸಿಗಲಿ. ನಾವು ಪಕ್ಷಕ್ಕಾಗಿ ದುಡಿಯುತ್ತೇವೆ. ಕೆಲವರು ಯದುವೀರ ಅವರಿಗೆ ಟಿಕೆಟ್ ಅಂತಿದ್ದಾರೆ. ಪ್ರತಾಪ ಸಿಂಹ ತಮಗೆ ಟಿಕೆಟ್ ಸಿಗುತ್ತದೆ ಅಂತಿದ್ದಾರೆ. ಯಾರಿಗೆ ಸಿಕ್ಕರೂ ಪಕ್ಷದ ಪರವಾಗಿ ದುಡಿಯುತ್ತೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:41 pm, Wed, 13 March 24