ಬೆಂಗಳೂರು, ಆಗಸ್ಟ್ 05: ಮುಡಾ ಮತ್ತು ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ಉಭಯ ಪಕ್ಷಗಳು ಈಗಾಗಲೇ ಸರ್ಕಾರದ ವಿರುದ್ಧ ಪಾದಯಾತ್ರೆ ಕೈಗೊಂಡಿವೆ. ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಆರೋಪ ಪ್ರತ್ಯಾರೋಪಗಳು ಮಾಡಲಾಗುತ್ತಿದೆ. ಇನ್ನೊಂದೆಡೆ ಬಿಜೆಪಿ ಅವಧಿಯಲ್ಲಿನ ಹಗರಣಗಳನ್ನು ತನಿಖೆ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಈ ಮಧ್ಯೆ ಬಿಜೆಪಿ ನಾಯಕ ಎಲ್ಆರ್ ಶಿವರಾಮೇಗೌಡ (LR Shivarame Gowda) ಬಂಧನ ಭೀತಿ ಎದುರಾಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಜಾಮೀನಿಗಾಗಿ ಕೋರ್ಟ್ ಮೊರೆಹೋಗಿದ್ದಾರೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 20 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದಾಗಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಕೇಸ್ನಲ್ಲಿ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿರುವ ಎಲ್.ಆರ್.ಶಿವರಾಮೇಗೌಡ ಇದೀಗ ಯೂನಿಯನ್ ಬ್ಯಾಂಕ್ ವಂಚನೆ ಕೇಸ್ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಸಿಬಿಐ ಪರ ಅಭಿಯೋಜಕರು ಕಾಲಾವಕಾಶ ಕೋರಿದ್ದು, ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿ ವಿಚಾರಣೆಯನ್ನು ಆ.7ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಕುಟುಂಬಕ್ಕೆ ಶುರುವಾಯ್ತು ಸಿಬಿಐ ಕಂಟಕ
ಜಮೀನು ಮಾಲೀಕರೊಂದಿಗೆ ಸೇರಿ ಬ್ಯಾಂಕ್ಗಳಿಂದ 32 ಕೋಟಿ ರೂ. ಪಡೆದುಕೊಳ್ಳಲಾಗಿದೆ. ಶಾಲೆಯ ಬಾಡಿಗೆಯ ಹಣವನ್ನು ಬ್ಯಾಂಕ್ಗೆ ನೀಡುವುದಾಗಿ ಒಡಂಬಡಿಕೆ ಮಾಡಲಾಗಿದೆ. ಇನ್ನು ಎಲ್.ಆರ್.ಶಿವರಾಮೇಗೌಡ ರಾಯಲ್ ಕಾನ್ಕಾರ್ಡ್ ಸಂಸ್ಥೆಯ ಟ್ರಸ್ಟಿ ಆಗಿದ್ದು, ವರ್ತೂರಿನ ಅಂಬಲೀಪುರದ ಜಮೀನಿನ ಮೇಲೆ ಮಾಲೀಕರು ಸಾಲ ಪಡೆದಿದ್ದಾರೆ. ಒಪ್ಪಂದದಂತೆ ಸಾಲ ತೀರಿಸದೇ ಇದ್ದಾಗ ವಂಚನೆ ಆರೋಪದಡಿ ಸಿಬಿಐ ಕೇಸ್ ದಾಖಲಿಸಲಾಗಿದೆ.
ಮೈಸೂರು ಜಿಲ್ಲೆಯ ಕೆಆರ್ ನಗರ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಜಾಮೀನು ಕೋರಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದ್ದು, ಆದೇಶವನ್ನು ಕಾಯ್ದಿರಿಸಿದೆ.
ಇದನ್ನೂ ಓದಿ: ಜಾಮೀನು ಸಿಕ್ಕ ಬೆನ್ನಲ್ಲೇ ಕಾನೂನು ಹೋರಾಟಕ್ಕಿಳಿದ ಶಾಸಕ ಎಚ್ಡಿ ರೇವಣ್ಣ
ಸತೀಶ್ ಬಾಬು, ಮಧುಗೌಡ, ಕೆ.ಎ.ರಾಜಗೋಪಾಲ್, ಹೆಚ್.ಕೆ.ಸುಜಯ್, ಹೆಚ್.ಎನ್.ಮಧು, ಎಸ್.ಟಿ.ಕೀರ್ತಿ ಜಾಮೀನು ಕೋರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.