ನವೆಂಬರ್ 19ರಿಂದ ಯಡಿಯೂರಪ್ಪ, ನಳಿನ್ ಕುಮಾರ್, ಶೆಟ್ಟರ್, ಈಶ್ವರಪ್ಪ ತಂಡದಿಂದ ರಾಜ್ಯ ಪ್ರವಾಸ

ನ. 19ರಿಂದ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ 6 ನಾಯಕರ ತಂಡ ಪ್ರವಾಸ ಕೈಗೊಳ್ಳಲಿದ್ದು, ನಳಿನ್ ಕುಮಾರ್‌ ನೇತೃತ್ವದಲ್ಲಿ 9, ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ 8, ಜಗದೀಶ್ ಶೆಟ್ಟರ್‌ ನೇತೃತ್ವದಲ್ಲಿ ಬಿಜೆಪಿಯ 7 ನಾಯಕರ ತಂಡ ಪ್ರವಾಸ ಕೈಗೊಳ್ಳಲಿದೆ.

ನವೆಂಬರ್ 19ರಿಂದ ಯಡಿಯೂರಪ್ಪ, ನಳಿನ್ ಕುಮಾರ್, ಶೆಟ್ಟರ್, ಈಶ್ವರಪ್ಪ ತಂಡದಿಂದ ರಾಜ್ಯ ಪ್ರವಾಸ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)
Edited By:

Updated on: Nov 06, 2021 | 9:13 PM

ಬೆಂಗಳೂರು: ನ. 19ರಿಂದ ಬಿಜೆಪಿ ನಾಯಕರು ರಾಜ್ಯ ಪ್ರವಾಸ ನಡೆಸಲಿದ್ದು, ‘ಜನ ಸ್ವರಾಜ್’​ ಯಾತ್ರೆ ನಡೆಸಲಿದ್ದಾರೆ. ನವೆಂಬರ್‌ 19ರಿಂದ ಬಿಜೆಪಿಯ ಕೇಂದ್ರ ಸಚಿವರು, ರಾಜ್ಯ ಸಚಿವರ ತಂಡ ರಾಜ್ಯ ಪ್ರವಾಸ ನಡೆಸಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌, ಮಾಜಿ ಸಿಎಂ ಜಗದೀಶ್ ಶೆಟ್ಟರ್‌, ಸಚಿವ ಈಶ್ವರಪ್ಪ ನೇತೃತ್ವದ 4 ತಂಡ ರಾಜ್ಯ ಪ್ರವಾಸ ನಡೆಸಲಿದೆ.

ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ 6 ನಾಯಕರ ತಂಡ ಪ್ರವಾಸ ಕೈಗೊಳ್ಳಲಿದ್ದು, ನಳಿನ್ ಕುಮಾರ್‌ ನೇತೃತ್ವದಲ್ಲಿ 9 ನಾಯಕರ ತಂಡ ಪ್ರವಾಸ ನಡೆಸಲಿದೆ. ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ 8 ನಾಯಕರ ತಂಡ ಪ್ರವಾಸ ಕೈಗೊಳ್ಳಲಿದೆ. ಜಗದೀಶ್ ಶೆಟ್ಟರ್‌ ನೇತೃತ್ವದಲ್ಲಿ ಬಿಜೆಪಿಯ 7 ನಾಯಕರ ತಂಡ ಪ್ರವಾಸ ಕೈಗೊಳ್ಳಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಟೀಂ ನ.19ಕ್ಕೆ ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್​ ಪ್ರವಾಸ ನಡೆಸಲಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಟೀಂ ನ.19ರಿಂದ 22ರವರೆಗೆ ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ, ಬೆಳಗಾವಿಯಲ್ಲಿ ಪ್ರವಾಸ ಕೈಗೊಳ್ಳಲಿದೆ.

ಕೆ.ಎಸ್. ಈಶ್ವರಪ್ಪ ಟೀಂ ನ.19ರಿಂದ 22ರವರೆಗೆ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನದಲ್ಲಿ ಪ್ರವಾಸ ಕೈಗೊಳ್ಳಲಿದೆ. ಜಗದೀಶ್​ ಶೆಟ್ಟರ್​ ತಂಡ (ವಿಜಯೇಂದ್ರ) ದಾವಣಗೆರೆ, ಚಿತ್ರದುರ್ಗ, ತುಮಕೂರು , ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿದೆ. ಡಿ.ವಿ. ಸದಾನಂದ ಗೌಡ ರಾಜ್ಯ ಪ್ರವಾಸದಲ್ಲಿ ಭಾಗಿ ಆಗುತ್ತಿಲ್ಲ.

ಇದನ್ನೂ ಓದಿ: ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಕನ್ನಡ ಕಡೆಗಣನೆ: ತಪ್ಪೊಪ್ಪಿಕೊಂಡ ಕೇಂದ್ರ ಸಚಿವ ಕಿಶನ್ ರೆಡ್ಡಿ

ಸಾಣೆಹಳ್ಳಿ ಶಿವಸಂಚಾರ ನಾಟಕೋತ್ಸವಕ್ಕೆ ಚಾಲನೆ: ಯಡಿಯೂರಪ್ಪ, ದೊಡ್ಡರಂಗೇಗೌಡ ಭಾಗಿ