AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್.ಸಿ. ಮಹದೇವಪ್ಪಗೆ ಬಿಜೆಪಿ ಸಚಿವರ ಮೆಚ್ಚುಗೆ, ಕಾಂಗ್ರೆಸ್‌ ಬಗ್ಗೆ HC ವಿಷಾದ!

ಮೈಸೂರು: ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ರಸ್ತೆ ಕಾಮಗಾರಿ ಚೆನ್ನಾಗಿ ನಡೆದಿತ್ತು ಎಂದು ಬಿಜೆಪಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಪ್ರಸ್ತಾಪಿಸಿ, ಮಾಜಿ ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಆವರು ಕಾಂಗ್ರೆಸ್​ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವಿದ್ದಾಗ ಅವರ ತವರು ಜಿಲ್ಲೆಯಲ್ಲಿಯೇ ಅವರ ಅತ್ಯಾಪ್ತ ಮಿತ್ರನ ತುಳಿಯುವ ಪ್ರಯತ್ನ ನಡೆದಿತ್ತಾ ಎಂಬ ಗುಮಾನಿ ಎದ್ದಿದೆ. ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಮಹದೇವಪ್ಪ ಅವರು ಬಿಜೆಪಿ ಸಚಿವರ ಮೆಚ್ಚುಗೆಯಂತಹ ಬೆಳವಣಿಗೆ ರಾಜಕೀಯ ವ್ಯವಸ್ಥೆಯಲ್ಲಿ ಆಗಬೇಕು. ಒಂದು ಸರ್ಕಾರದ […]

ಹೆಚ್.ಸಿ. ಮಹದೇವಪ್ಪಗೆ ಬಿಜೆಪಿ ಸಚಿವರ ಮೆಚ್ಚುಗೆ, ಕಾಂಗ್ರೆಸ್‌ ಬಗ್ಗೆ HC ವಿಷಾದ!
ಸಾಧು ಶ್ರೀನಾಥ್​
|

Updated on:Dec 21, 2019 | 3:25 PM

Share

ಮೈಸೂರು: ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ರಸ್ತೆ ಕಾಮಗಾರಿ ಚೆನ್ನಾಗಿ ನಡೆದಿತ್ತು ಎಂದು ಬಿಜೆಪಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಪ್ರಸ್ತಾಪಿಸಿ, ಮಾಜಿ ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಆವರು ಕಾಂಗ್ರೆಸ್​ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವಿದ್ದಾಗ ಅವರ ತವರು ಜಿಲ್ಲೆಯಲ್ಲಿಯೇ ಅವರ ಅತ್ಯಾಪ್ತ ಮಿತ್ರನ ತುಳಿಯುವ ಪ್ರಯತ್ನ ನಡೆದಿತ್ತಾ ಎಂಬ ಗುಮಾನಿ ಎದ್ದಿದೆ.

ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಮಹದೇವಪ್ಪ ಅವರು ಬಿಜೆಪಿ ಸಚಿವರ ಮೆಚ್ಚುಗೆಯಂತಹ ಬೆಳವಣಿಗೆ ರಾಜಕೀಯ ವ್ಯವಸ್ಥೆಯಲ್ಲಿ ಆಗಬೇಕು. ಒಂದು ಸರ್ಕಾರದ ಯೋಜನೆಗಳನ್ನ ಮತ್ತೊಂದು ಸರ್ಕಾರ ಪ್ರಶಂಸೆ ಮಾಡುವಂತಿರಬೇಕು. ನನ್ನ ಕೆಲಸದ ಬಗ್ಗೆ ಹೊಗಳಿಕೆ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದ್ದಾರೆ. ಎಲ್ಲಿ ದೊಡ್ಡಮಟ್ಟದ ನಾಯಕನಾಗುತ್ತೇನೋ ಎಂಬ ಆತಂಕ ನಮ್ಮ ನಾಯಕರಿಗಿತ್ತು! ನನ್ನ ಅವಧಿ ಕೆಲಸಗಳ ಬಗ್ಗೆ ಸಿಎಂ ಹಾಗೂ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ. ಆದ್ರೆ ನನ್ನ ಕೆಲಸವನ್ನ‌ ನಮ್ಮವರೇ ಬಳಸಿಕೊಳ್ಳಲಿಲ್ಲ. ಅದ್ಯಾಕೋ ಏನೋ ನಮ್ಮವರು ಅದನ್ನ ಉಪಯೋಗಿಕೊಳ್ಳಲೇ ಇಲ್ಲ. ಎಲ್ಲಿ ಕಾಂಗ್ರೆಸ್‌ನಲ್ಲಿ ನಾನು ದೊಡ್ಡಮಟ್ಟದ ನಾಯಕನಾಗುತ್ತೇನೋ ಅಂತಾನೋ ಏನೋ ಗೊತ್ತಿಲ್ಲ. ವಿಪರ್ಯಾಸವೆಂದ್ರೆ ನಮ್ಮ ಕೆಲಸದ ಬಗ್ಗೆ ಈಗ ಬೇರೆಯವರು ಮಾತನಾಡುತ್ತಿದ್ದಾರೆ ಎಂದು ವಿಷಾದದ ದನಿಯಲ್ಲಿ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.

Published On - 1:44 pm, Sat, 21 December 19