ರಾಜಾ ಅಮರೇಶ್ವರ ನಾಯಕ್ ವಿರುದ್ಧ ನಾಲಿಗೆ ಹರಿಬಿಟ್ಟ BJP ಕಾರ್ಯಕರ್ತ; ಚಪ್ಪಲಿಯಲ್ಲಿ ಹೊಡಿತೀವಿ ಎಂದು ಕಿಡಿ

ಅಸಮಾಧಾನಿತ ತಿಪ್ಪರಾಜು ಹವಾಲ್ದಾರ್ ಹಾಗೂ ಬಿವಿ ನಾಯಕ್ ಮನವೊಲಿಸಲು ಬಿಜೆಪಿ ನಾಯಕರು ಸಭೆ ನಡೆಸಿದ್ದು ಬಿಜೆಪಿ ಪ್ರಯತ್ನ ವಿಫಲವಾಗಿದೆ. ಸಭೆಯಲ್ಲಿ ಹಾಲಿ ಸಂಸದರ ವಿರುದ್ಧ ಕಾರ್ಯಕರ್ತ ಶಿವ ಶರಣಪ್ಪ ಗೌಡ ನಾಲಿಗೆ ಹರಿಬಿಟ್ಟಿದ್ದಾರೆ. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಗೆ ಚಪ್ಪಲಿಯಲ್ಲಿ ಹೊಡಿತೀವಿ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ರಾಜಾ ಅಮರೇಶ್ವರ ನಾಯಕ್ ವಿರುದ್ಧ ನಾಲಿಗೆ ಹರಿಬಿಟ್ಟ BJP ಕಾರ್ಯಕರ್ತ; ಚಪ್ಪಲಿಯಲ್ಲಿ ಹೊಡಿತೀವಿ ಎಂದು ಕಿಡಿ
ರಾಜಾ ಅಮರೇಶ್ವರ ನಾಯಕ್
Follow us
TV9 Web
| Updated By: ಆಯೇಷಾ ಬಾನು

Updated on: Mar 30, 2024 | 12:36 PM

ರಾಯಚೂರು, ಮಾರ್ಚ್​.30: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ (Lok Sabha Election) ಸ್ಪರ್ಧಿಸಲು ಬಿಜೆಪಿ ರಾಜಾ ಅಮರೇಶ್ವರ ನಾಯಕ್ (Raja Amareshwara Naik) ಅವರಿಗೆ ಟಿಕೆಟ್ ಘೋಷಿಸಿದೆ. ಆದರೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ (Tipparaju Havaldar) ಅವರಿಗೆ ಟಿಕೆಟ್ ತಪ್ಪಿದ್ದು ಅಸಮಾಧಾನಗೊಂಡಿದ್ದಾರೆ. ಇನ್ನೊಂದೆಡೆ ಟಿಕೆಟ್ ಆಕಾಂಕ್ಷಿ ಬಿವಿ ನಾಯಕ್ (BV Nayak) ಕೂಡ ಬೇಸರಗೊಂಡಿದ್ದಾರೆ. ರಾಯಚೂರಿನಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಹೀಗಾಗಿ ಅಸಮಾಧಾನಿತ ತಿಪ್ಪರಾಜು ಹವಾಲ್ದಾರ್ ಹಾಗೂ ಬಿವಿ ನಾಯಕ್ ಮನವೊಲಿಸಲು ಬಿಜೆಪಿ ನಾಯಕರು ಸಭೆ ನಡೆಸಿದ್ದು ಬಿಜೆಪಿ ಪ್ರಯತ್ನ ವಿಫಲವಾಗಿದೆ.

ಸಭೆಯಲ್ಲಿ ಬಿಜೆಪಿ ಸಚೇತಕ ದೊಡ್ಡನಗೌಡ ಪಾಟೀಲ್ ಎದುರಲ್ಲೇ ಹಾಲಿ ಸಂಸದರ ವಿರುದ್ಧ ಕಾರ್ಯಕರ್ತ ಶಿವ ಶರಣಪ್ಪ ಗೌಡ ನಾಲಿಗೆ ಹರಿಬಿಟ್ಟಿದ್ದಾರೆ. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಗೆ ಚಪ್ಪಲಿಯಲ್ಲಿ ಹೊಡಿತೀವಿ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಉದ್ವೇಗಕ್ಕೊಳಗಾಗಿ ಹಿಂದಿನ ಚುನಾವಣೆಯಲ್ಲಿ ಒಂದೂವರೆ ಲಕ್ಷ ಮತಗಳಿಂದ ಬಿವಿ ನಾಯಕ್ ಸೋತಿದ್ದರು. ಈಗ ಟೆಕೆಟ್ ಕೇಳೋಕೆ ಬಂದಿದ್ದಾರೆ ಅಂತ ಹಾಲಿ ಸಂಸದ ಹೇಳಿದ್ರು. ಇಂದಿರಾ ಗಾಂಧಿ ಕಾಲದಲ್ಲಿ ಕತ್ತೆ ನಿಂತ್ರೆ ಕತ್ತೆ ಗೆಲ್ತಿತ್ತು. ಈಗಲೂ ಮೋದಿ ಕಾಲದಲ್ಲಿ ಕತ್ತೆ ನಿಂತ್ರೆ ಕತ್ತೆ ಗೆಲ್ಲತ್ತೆ. ಹಾಲಿ ಸಂಸದ ಕಳೆದ ಬಾರಿ ಮೋದಿ ಹೆಸರಿನಲ್ಲಿ ಗೆದ್ದಿದ್ರು. ಈಗ ಹಳ್ಳಿಗಳಿಗೆ ಬರ್ಲಿ ಚಪ್ಪಲೀಲಿ ಹೊಡಿತೀವಿ. ಮೊನ್ನೆ ಕಳ್ಳನ ರೀತಿ ಸಂಸದ ಬಂದು ಹೋಗಿದ್ದಾನೆ ಅಂತ ಹಾಲಿ ಸಂಸದರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಹೊಸ ಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್; ಸಚಿವರ ಮಕ್ಕಳು, ಕುಟುಂಬಸ್ಥರಿಗೆ ಲೋಕಸಭಾ ಚುನಾವಣೆ ಟಿಕೆಟ್

ರಾಯಚೂರು ಬಿಜೆಪಿ ಘಟಕದಲ್ಲಿ ಭಿನ್ನಮತ ಜೋರಾಗಿದೆ. ಟಿಕೆಟ್ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಗೆ ದಕ್ಕುತಿದ್ದಂತೆಯೇ ಬಂಡಾಯ ಭುಗಿಲೆದ್ದಿತ್ತು. ಕಳೆದ ಐದು ವರ್ಷಗಳಲ್ಲಿ ಸಂಸದ ಅಮರೇಶ್ವರ ನಾಯಕ್ ಕ್ಷೇತ್ರದಲ್ಲಿ ಓಡಾಡಿಲ್ಲ, ಕಾರ್ಯಕರ್ತರಿಗೆ ಮನ್ನಣೆ ನೀಡಿಲ್ಲ ಅನ್ನೋ ಆಕ್ರೋಶದ ಮಧ್ಯೆ ಟಿಕೆಟ್ ಕೊಟ್ಟಿದ್ದಕ್ಕೆ ಮಾಜಿ ಸಂಸದ ಬಿವಿ ನಾಯಕ್ ಕೆರಳಿದ್ರು. ಜೊತೆ ಅವರ ಅಭಿಮಾನಿಗಳು ಕೂಡ ಬಂಡಾಯ ಎದ್ದಿದ್ರು. ಇವರ ಸಾಲಿಗೆ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಕೂಡ ಎಂಟ್ರಿಯಾಗಿದ್ರು. ಇತ್ತೀಚೆಗೆ ಎಲ್ಲೂ ಬಹಿರಂಗ ಹೇಳಿಕೆ ನೀಡದೇ ಮೌನವಾಗಿಯೇ ಟಿಕೆಟ್ ವಿಚಾರದ ಬಗ್ಗೆ ಅಸಮಾಧಾನ ಹೊರಹಾಕಿದ್ರು. ಸಭೆಯಲ್ಲಿ ಕಾರ್ಯಕರ್ತರು ರಾಜ್ಯ ನಾಯಕರ ವಿರುದ್ಧ ಕೆರಳಿದ್ರು. ಜೊತೆಗೆ ತಮ್ಮ ಆಕ್ರೋಶ ಹೊರ ಹಾಕಿ ಕೋಲಾಹಲ ಎಬ್ಬಿಸಿದ್ರು. ಈ ವೇಳೆ ಖುದ್ದು ತಿಪ್ಪರಾಜು ಹವಾಲ್ದಾರ್ ವೇದಿಕೆಯಿಂದ ಕೆಳಗಿಳಿದು ಬಂದು ಸಮಾಧಾನ ವ್ಯಕ್ತಪಡಿಸಿದರು. ಆದ್ರೆ ಅವರಿಗೆ ಕಾರ್ಯಕರ್ತರು ಮಣಿಯದೇ ಕೆಂಡಾಮಂಡಲರಾದ್ರು. ಕೊನೆಗೆ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಬಿಜೆಪಿ ಪರ ಕೆಲಸ ಮಾಡ್ತಿನಿ ಅಂತ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ