ಹೈಕಮಾಂಡ್ಗೂ ಮೊದಲೇ ಅಭ್ಯರ್ಥಿ ಘೋಷಿಸಿದ ಎಂಎಲ್ಎ ವಿರುದ್ಧ ಹರಿಪ್ರಸಾದ್ ಕೆಂಡಾಮಂಡಲ
ಮುಖ್ಯಾಂಶಗಳು
- ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಉಪ ಚುನಾವಣೆ ವಿಚಾರ
- ಸುಹಾಸ್ ಸುಧಾಕರ್ ಗೆಲ್ಲಿಸಿ ಎಂದಿದ್ದ ಎಂಎಲ್ಎ ಎನ್ವೈ ಗೋಪಾಲಕೃಷ್ಣ
- ಎನ್ವೈ ಗೋಪಾಲಕೃಷ್ಣ ಹೇಳಿಕೆ ಬಿ.ಕೆ.ಹರಿಪ್ರಸಾದ್ ಗರಂ
ಹಿರಿಯೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಸುಹಾಸ್ ಸುಧಾಕರ್ ಅವರನ್ನು ಬೆಂಬಲಿಸುವಂತೆ ಎಂಎಲ್ಎ ಎನ್ವೈ ಗೋಪಾಲಕೃಷ್ಣ ಹೇಳಿಕೆ ನೀಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ರಾಜ್ಯ ಮತ್ತು ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಂತಿಮ ನಿರ್ಧಾರ ಹೈಕಮಾಂಡ್ನದ್ದಾಗಿರುತ್ತದೆ ಎಂದು ತಿಳಿಸಿದ್ದಾರೆ.
ಚಿತ್ರದುರ್ಗ, ಅಕ್ಟೋಬರ್ 16: ‘ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆಗೆ ಒಂದು ವ್ಯವಸ್ಥೆ ಇದೆ. ಸೆಂಟ್ರಲ್ ಎಲೆಕ್ಷನ್ ಕಮಿಟಿ ಅಂತಿದೆ. ಎಂಎಲ್ಎ ಎನ್.ವೈ.ಗೋಪಾಲಕೃಷ್ಣ ಏನು ಅಧ್ಯಕ್ಷರಾ?’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಗರಂ ಆದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಉಪ ಚುನಾವಣೆ ವಿಚಾರವಾಗಿ ಸುಹಾಸ್ ಸುಧಾಕರ್ ಗೆಲ್ಲಿಸಿ ಎಂಬ ಗೋಪಾಲಕೃಷ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿಕೆ ಹರಿಪ್ರಸಾದ್, ‘ಎನ್ವೈ ಗೋಪಾಲಕೃಷ್ಣ ಅವರ ಅನಿಸಿಕೆ ಹೇಳಿದ್ದಾರೆ. ಅನಿಸಿಕೆ ಹೇಳುವುದರಲ್ಲಿ ತಪ್ಪಿಲ್ಲ. ರಾಜ್ಯ, ಕೇಂದ್ರದ ಚುನಾವಣೆ ಸಮಿತಿ ಇದೆ. ಯಾರ ಹೆಸರು ಬರುತ್ತದೆ ಕೇಂದ್ರಕ್ಕೆ ನಾವು ಕಳಿಸಬೇಕು. ಅಂತಿಮ ತೀರ್ಮಾನ ಹೈಕಮಾಂಡ್ದು’ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

