ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಬೋಟ್​​ ಮುಳುಗಡೆ: ಮೀನುಗಾರರಿಂದ 8 ಜನರ ರಕ್ಷಣೆ

ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಸರಕು ತುಂಬಿದ ಮಂಜಿ ಬೋಟ್ ಸಮುದ್ರದಲ್ಲಿ ಮುಳುಗಡೆ ಆಗಿದೆ. ಅನ್ನ, ನೀರಿಲ್ಲದೇ ಸಮುದ್ರದಲ್ಲಿ ಮೂರು ದಿನ ಕಳೆದ ಮಂಜಿ ಬೋಟ್​ನಲ್ಲಿದ್ದ ಸಿಬ್ಬಂದಿಗಳನ್ನು ಮೀನುಗಾರರು ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ಸಣ್ಣ ಬೋಟಿನಲ್ಲಿ ಸಮುದ್ರಕ್ಕೆ ಹಾರಿ ಮಂಜಿಯ ಕ್ಯಾಪ್ಟನ್ ಮತ್ತು ಸಿಬಂದಿ ಜೀವ ಉಳಿಸಿಕೊಂಡಿದ್ದಾರೆ. 

ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಬೋಟ್​​ ಮುಳುಗಡೆ: ಮೀನುಗಾರರಿಂದ 8 ಜನರ ರಕ್ಷಣೆ
ಬೋಟ್ ಮುಳುಗಡೆ
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Mar 20, 2024 | 12:52 PM

ಮಂಗಳೂರು, ಮಾರ್ಚ್ 20: ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಸರಕು ತುಂಬಿದ ಮಂಜಿ ಬೋಟ್ (Boat) ಸಮುದ್ರದಲ್ಲಿ ಮುಳುಗಡೆ ಆಗಿದೆ. ಅನ್ನ, ನೀರಿಲ್ಲದೇ ಸಮುದ್ರದಲ್ಲಿ ಮೂರು ದಿನ ಕಳೆದ ಮಂಜಿ ಬೋಟ್​ನಲ್ಲಿದ್ದ ಸಿಬ್ಬಂದಿಗಳನ್ನು ಮೀನುಗಾರರು ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ಮಾ.12ರಂದು ಮಂಗಳೂರಿನಿಂದ ಜಲ್ಲಿ, ಸಿಮೆಂಟ್ ಇನ್ನಿತರೆ ಸಾಮಗ್ರಿ ಹೊತ್ತು ತೆರಳಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಸಮುದ್ರ ಮಧ್ಯೆ ಬೋಟ್​ ಮುಳುಗಿದೆ. ಸಣ್ಣ ಬೋಟಿನಲ್ಲಿ ಸಮುದ್ರಕ್ಕೆ ಹಾರಿ ಮಂಜಿಯ ಕ್ಯಾಪ್ಟನ್ ಮತ್ತು ಸಿಬಂದಿ ಜೀವ ಉಳಿಸಿಕೊಂಡಿದ್ದಾರೆ.

ಆಳವಾದ ಸಮುದ್ರದಲ್ಲಿ ತಮ್ಮ ಜೀವ ರಕ್ಷಣೆಗಾಗಿ ಹಾತೊರೆಯುತ್ತಿದ್ದ ಸಿಬಂದಿಗಳನ್ನು ಲಕ್ಷದ್ವೀಪ ಬಳಿಯ ಕಲ್ಪೇನಿ ದ್ವೀಪದ ಮೀನುಗಾರರು ಒಟ್ಟು ಎಂಟು ಜನರನ್ನು ರಕ್ಷಣೆ ಮಾಡಿ, ದ್ವೀಪಕ್ಕೆ ಕರೆದೊಯ್ದು ಉಪಚರಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಆಮ್ಲೆಟ್ ಮಾಡಿ ತಿಂದ ಕಿಡಿಗೇಡಿಗಳು

ಮುಳುಗಡೆಗೆಯ ವಿಚಾರ ತಿಳಿದ ಮಂಗಳೂರು ಕೋಸ್ಟ್ ಗಾರ್ಡ್ ಮೂರು ದಿನಗಳಿಂದ ಸಮುದ್ರದಲ್ಲಿ ಹುಡುಕಾಟ ನಡೆಸಿದ್ದರು. ಆದರೆ ರಕ್ಷಣೆ ವಿಷಯ ತಿಳಿದು ಸ್ಪೀಡ್ ಬೋಟ್ ಮೂಲಕ ಕೇರಳದ ಕೊಚ್ಚಿಗೆ ಎಲ್ಲರನ್ನು ಕೋಸ್ಟ್ ಗಾರ್ಡ್‌ ಕರೆತಂದಿದ್ದಾರೆ.

ನಂಬರ್ ಪ್ಲೇಟ್​ಗೆ ಗ್ರೀಸ್ ಹಚ್ಚಿ ವ್ಯಾಪಕ ಮರಳು ಸಾಗಾಟ ಆರೋಪ: ರಸ್ತೆ ತಡೆದು ಪ್ರತಿಭಟನೆ ಮಾಡಿ ಸ್ಥಳೀಯರು

ಮಂಗಳೂರಿನಲ್ಲಿ ಲಾರಿಗಳ ನಂಬರ್ ಪ್ಲೇಟ್​ಗೆ ಗ್ರೀಸ್ ಹಚ್ಚಿ ವ್ಯಾಪಕ ಮರಳು ಸಾಗಾಟ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಮಂಗಳೂರಿನ ಕಣ್ಣೂರಿನಲ್ಲಿ ಮಧ್ಯರಾತ್ರಿ ರಸ್ತೆ ತಡೆದು ಸ್ಥಳೀಯರು ಪ್ರತಿಭಟನೆ ಮಾಡಿದರು. ಮಂಗಳೂರು ದಕ್ಷಿಣ ಠಾಣಾ ವ್ಯಾಪ್ತಿಗೆ ಬರುವ ಮೂರು ಠಾಣೆಗಳ ಎದುರೇ ಅವ್ಯಾಹತವಾಗಿ ದಂಧೆ ಮಾಡಲಾಗುತ್ತಿದೆ. ಲಾರಿಗಳ ನಂಬರ್ ಪ್ಲೇಟ್​​ಗೆ ಗ್ರೀಸ್ ಹಚ್ಚಿ ಹಾಗೂ ಸ್ಟಿಕ್ಕರ್ ಅಂಟಿಸಿ ಕೊಣಾಜೆ, ಮಂಗಳೂರು ಗ್ರಾಮಾಂತರ, ಉಳ್ಳಾಲ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಮರಳು ಸಾಗಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥನ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ ಶಾಸಕನ ಬೆಂಬಲಿಗರು, ಪುತ್ತೂರಲ್ಲಿ ಕೇಸ್ ದಾಖಲು

ಅದೇ ರೀತಿಯಾಗಿ ಉಳ್ಳಾಲ, ಕೋಟೆಪುರ, ಕಣ್ಣೂರು, ಫರಂಗಿಪೇಟೆ, ಹರೇಕಳ, ಪಾವೂರು ಭಾಗಗಳಿಂದ ಮರಳು ಸಾಗಾಟ ಮಾಡಲಾಗುತ್ತಿದೆ. ಹೀಗಾಗಿ ಲಾರಿಗಳನ್ನು ತಡೆ ಹಿಡಿದ ಸಾರ್ವಜನಿಕರು ಪೊಲೀಸರು ಬರುವವರೆಗೆ ರಸ್ತೆ ತಡೆ ಹಿಡಿದ್ದರು. ಸ್ಥಳದಲ್ಲಿ ಮರಳು ಮಾಫಿಯಾ ಹಾಗೂ ಸಾರ್ವಜನಿಕರು ಜಮಾಯಿಸಿ ತೀವ್ರ ವಾಗ್ವಾದ ಉಂಟಾಗಿದೆ.

ಬಳಿಕ ನಂಬರ್ ಪ್ಲೇಟ್ ಮಾಸಿದ ರೀತಿಯಲ್ಲಿದ್ದ ಒಂದು ಟಿಪ್ಪರ್ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಸಿಪಿ ಧನ್ಯಾ ನಾಯಕ್ ಲಾರಿಗಳ ಆರ್ಭಟವನ್ನು ಗಮನಿಸಿಯೂ ಕಣ್ಣಿದ್ದು, ಕುರುಡರಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ. ಮರಳು ಸಾಗಾಟದ ಹಿಂದೆ ತಲಪಾಡಿ ಮೂಲದ ಕಾಂಗ್ರೆಸ್ ಮುಖಂಡರ ಕೈವಾಡ ಆರೋಪ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.