AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿಗಣತಿ: ‘ಸಾಮಾನ್ಯ ಬ್ರಾಹ್ಮಣ’ ಆಯ್ಕೆ ಇಲ್ಲದ್ದಕ್ಕೆ ಧಾರವಾಡದಲ್ಲಿ ಆಕ್ಷೇಪ

ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯ ಜಾತಿ ಕಾಲಂನಲ್ಲಿ 'ಸಾಮಾನ್ಯ ಬ್ರಾಹ್ಮಣ' ಆಯ್ಕೆ ಇಲ್ಲದ್ದಕ್ಕೆ ಆಕ್ಷೇಪ ಕೇಳಿಬಂದಿದೆ. ಕಂದಾಯ ಇಲಾಖೆಯಿಂದ ನೀಡಲಾಗುವ ಜಾತಿ ಪ್ರಮಾಣಪತ್ರದಲ್ಲಿ ಬ್ರಾಹ್ಮಣ ಸಮುದಾಯದವರನ್ನ 'ಸಾಮಾನ್ಯ ಬ್ರಾಹ್ಮಣ' ಎಂದು ನಮೂದಿಸಲಾಗುತ್ತದೆ. ಆದರೆ ಗಣತಿ ವೇಳೆ ಆ ಆಯ್ಕೆ ಯಾಕಿಲ್ಲ ಎಂಬ ಪ್ರಶ್ನೆ ಕೇಳಿಬರತೊಡಗಿದೆ.

ಜಾತಿಗಣತಿ: 'ಸಾಮಾನ್ಯ ಬ್ರಾಹ್ಮಣ' ಆಯ್ಕೆ ಇಲ್ಲದ್ದಕ್ಕೆ ಧಾರವಾಡದಲ್ಲಿ ಆಕ್ಷೇಪ
ಬ್ರಾಹ್ಮಣ ಸಮುದಾಯದ ವಿರೋಧ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಪ್ರಸನ್ನ ಹೆಗಡೆ|

Updated on:Oct 06, 2025 | 5:45 PM

Share

ಧಾರವಾಡ, ಅಕ್ಟೋಬರ್​ 06: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ (Caste census) ಜಾತಿ ಕಾಲಂನಲ್ಲಿ ‘ಸಾಮಾನ್ಯ ಬ್ರಾಹ್ಮಣ’ ಆಯ್ಕೆ ಇಲ್ಲದ ವಿಚಾರವಾಗಿ ಬ್ರಾಹ್ಮಣ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ. ಗಣತಿಗೆ ಹೋದವರ ಬಳಿ ಸಮುದಾಯವರು ಈ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದು, ಸಿಬ್ಬಂದಿ ಗೊಂದಲಕ್ಕೆ ಬಿದ್ದಿದ್ದಾರೆ. ನಮಗೆ ಈ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಡಬೇಕು ಎಂದು ಕೆಲವರು ಹೇಳುತ್ತಿದ್ದು, ಆ ತನಕ ಗಣತಿದಾರಿಗೆ ಮಾಹಿತಿ ನೀಡಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಏನಿದು ಗೊಂದಲ?

ಕಂದಾಯ ಇಲಾಖೆಯಿಂದ ನೀಡಲಾಗುವ ಜಾತಿ ಪ್ರಮಾಣಪತ್ರದಲ್ಲಿ ಬ್ರಾಹ್ಮಣ ಸಮುದಾಯದವರನ್ನ ‘ಸಾಮಾನ್ಯ ಬ್ರಾಹ್ಮಣ’ ಎಂದು ನಮೂದಿಸಲಾಗುತ್ತದೆ. ಆದರೆ, ಗಣತಿಯಲ್ಲಿ ಈ ಆಯ್ಕೆಯೇ ಇಲ್ಲ ಅನ್ನೋದು ಬ್ರಾಹ್ಮಣರ ಆಕ್ಷೇಪ. ಗಣತಿಯ ಆ್ಯಪ್ ನಲ್ಲಿ ಎಸ್ಸಿ, ಎಸ್ಟಿ ಮತ್ತು ಇತರೆ ಅನ್ನೋ ಮೂರು ಕಾಲಂಗಳಿವೆ. ಇದರಲ್ಲಿ ‘ಇತರೆ’ ಎನ್ನುವ ಕಾಲಂನಲ್ಲಿ ಬ್ರಾಹ್ಮಣರು ತಮ್ಮ ಹೆಸರನ್ನು ನಮೂದಿಸಬೇಕು. ಉಳಿದ ಜನಾಂಗದವರು ಕೂಡ ಇದರಲ್ಲಿ ಹೆಸರನ್ನು ನಮೂದಿಸಿದರೂ ಅವರಿಗೆ ಅವಶ್ಯಕತೆ ಬಿದ್ದಾಗ ಆಯಾ ಜಾತಿಗೆ ಜಾರಿಯಲ್ಲಿರೋ ಮೀಸಲಾತಿ ಸಿಗುತ್ತೆ. ಅಲ್ಲದೇ ಅವರು ಸಾಮಾನ್ಯ ಕೆಟಗರಿಯಲ್ಲಿಯೂ ಸವಲತ್ತು ಪಡೆಯಬಹುದು. ಒಂದು ವೇಳೆ ಇವತ್ತು ನಾವು ಇತರೆ ಕಾಲಂನಲ್ಲಿ ಬ್ರಾಹ್ಮಣ ಅಂತಾ ನಮೂದಿಸಿದರೆ ನಾಳೆ ‘ಇತರೆ ಬ್ರಾಹ್ಮಣ’ ಅಂತಾ ಪ್ರಮಾಣ ಪತ್ರ ಬಂದರೆ ನಮ್ಮ ಗತಿ ಏನು ಅನ್ನೋದು ಸಮುದಾಯದ ಪ್ರಶ್ನೆ. ಈ ವಿಚಾರವನ್ನು ಧಾರವಾಡ ಜಿಲ್ಲೆಯಲ್ಲಿ ಮೊದಲಿಗೆ ಎತ್ತಿದ್ದು ಹೆಬ್ಬಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹೇಶ ಜೋಶಿ.

ಇದನ್ನೂ ಓದಿ:

ಗಣತಿದಾರರು ಬಂದಾಗ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಜಾತಿ ಕಾಲಂನಲ್ಲಿ ಬ್ರಾಹ್ಮಣ ಇಲ್ಲ, ಬದಲಾಗಿ ಇತರೆ ಎಂಬುದರಲ್ಲಿ ನಮೂದಿಸಬೇಕು ಎಂದಿದ್ದಕ್ಕೆ ಮಹೇಶ ಜೋಶಿ ತಕರಾರು ತಗೆದಿದ್ದಾರೆ. ಬ್ರಾಹ್ಮಣ ಸಮುದಾಯ ‘ಇತರೆ’ ಕಾಲಂನಲ್ಲಿ ಸೇರಿಸೋದಾದರೆ, ಕಂದಾಯ ಇಲಾಖೆಯ ಜಾತಿ ಪ್ರಮಾಣದಲ್ಲಿ ‘ಸಾಮಾನ್ಯ ಬ್ರಾಹ್ಮಣ’ ಎಂದು ಯಾಕೆ ಪ್ರಮಾಣ ಪತ್ರ ಕೊಡಬೇಕಿತ್ತು ಅನ್ನೋದು ಇವರ ಪ್ರಶ್ನೆ. ಅಲ್ಲದೆ ಸಮೀಕ್ಷೆಯಲ್ಲಿ ಈ ರೀತಿ ಮಾಡುವುದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಅನ್ನೋದು ಮಹೇಶ ಜೋಶಿ ವಾದ.

‘ಬ್ರಾಹ್ಮಣರು ಯಾವತ್ತೂ ಮೀಸಲಾತಿ ಕೇಳಿಲ್ಲ’

ಈ ಬಗ್ಗೆ ಅಧಿಕಾರಿಗಳೊಂದಿಗೆ ವಾದಕ್ಕೆ ಇಳಿದಿರೋ ಮಹೇಶ ಜೋಶಿ, ನಾವು ಬ್ರಾಹ್ಮಣರು ಯಾವತ್ತೂ ಯಾವುದೇ ಕೆಟಗರಿಗೆ ಸೇರಿಸಿ ಅಂದಿಲ್ಲ. ಅಲ್ಲದೇ ನಮಗೆ ಸರಕಾರದ ಯಾವುದೇ ಸೌಲಭ್ಯಗಳೂ ಇಲ್ಲ. ಹಾಗಂತ ನಾವು ಕೇಳುತ್ತಲೂ ಇಲ್ಲ. ಸೌಲಭ್ಯಗಳನ್ನು ಯಾರು ಕೇಳುತ್ತಾರೋ ಅವರನ್ನು ಅವರು ಕೇಳಿದ ಕೆಟಗರಿಗೆ ಸೇರಿಸಿಕೊಳ್ಳಿ, ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ, ನಮ್ಮನ್ನು ಇತರೆ ಎಂದು ನಮೂದಿಸುತ್ತಿರೋದಕ್ಕೆ ತೀವ್ರ ಬೇಸರ ತಂದಿದೆ ಎಂದಿದ್ದಾರೆ. ಈ ಬಗ್ಗೆ ಮೂರು ದಿನಗಳಿಂದ ಗಣತಿದಾರರನ್ನು ಪ್ರಶ್ನಿಸುತ್ತಲೇ ಇದ್ದರೂ ಇದುವರೆಗೆ ಯಾರೊಬ್ಬರೂ ಸರಿಯಾದ ಉತ್ತರ ನೀಡುತ್ತಿಲ್ಲ. ಅಲ್ಲದೇ ಮೇಲಾಧಿಕಾರಿಗಳನ್ನು ಕೇಳಿದರೆ ಅವರು ಕೂಡ ನಿರುತ್ತರರಾಗಿದ್ದಾರೆ ಅನ್ನೋದು ಅವರ ಆರೋಪ. ಇನ್ನು ಇವರ ಬೇಡಿಕೆಯಂತೆ ನಮೂದಿಸಲು ಆಯ್ಕೆ ಇಲ್ಲದ ಕಾರಣ ಗಣತಿಗೆ ಬಂದಿದ್ದ ಸಿಬ್ಬಂದಿ ರೂಪಾ ಕುಬಸದ್, ಮಹೇಶ ಜೋಶಿ ಅವರಿಗೆ ಪತ್ರವೊಂದನ್ನು ಬರೆದುಕೊಟ್ಟಿದ್ದಾರೆ. ಅದರಲ್ಲಿ ನೀವು ಕೇಳಿದ ರೀತಿಯಲ್ಲಿ ನಮೂದಿಸಲು ಅವಕಾಶವಿಲ್ಲ ಅಂತಾ ತಿಳಿಸಲಾಗಿದೆ.

ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿರುವ ಮಹೇಶ ಜೋಶಿ, ಮುಂದಿನ ದಿನಗಳಲ್ಲಿ ಇದು ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸೋ ಸಾಧ್ಯತೆ ಇದೆ. ಹೀಗಾಗಿ ನಾನು ಈಗಲೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೇನೆ. ಇತರರು ಕೂಡ ಆಕ್ಷೇಪ ವ್ಯಕ್ತಪಡಿಸಬೇಕಿತ್ತು. ನನ್ನ ಬಳಿ ಸಾಮಾನ್ಯ ಬ್ರಾಹ್ಮಣ ಅಂತಾ ತಹಶೀಲ್​ದಾರರು ನೀಡಿರೋ ಪ್ರಮಾಣ ಪತ್ರವಿದೆ. ಈ ಗಣತಿಯಲ್ಲಿ ಇತರೆ ಬ್ರಾಹ್ಮಣ ಅಂತಾ ನಮೂದಿಸಬೇಕು ಎಂದಾದರೆ ಎರಡರಲ್ಲಿ ಯಾವುದು ಸರಿಯಾಗಿದ್ದು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಬಗ್ಗೆ ನಾನು ಬ್ರಾಹ್ಮಣ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಲಕ್ಷ್ಮಣ ಕುಲಕರ್ಣಿ ಅವರನ್ನು ಸಂಪರ್ಕಿಸಿದ್ದೇನೆ. ಅವರಿಗೂ ಈ ಗೊಂದಲದ ಬಗ್ಗೆ ಅರಿವಿದೆ. ಇದರ ವಿರುದ್ಧ ಶೀಘ್ರ ಪಿಐಎಲ್ ಸಲ್ಲಿಸೋದಾಗಿ ಅವರು ತಿಳಿಸಿದ್ದಾರೆ ಎಂದು ಮಹೇಶ ಜೋಶಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:43 pm, Mon, 6 October 25

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!