Kannada News Live | ರಾಜ್ಯದ ಜನತೆಗೆ ಸುದೀರ್ಘ ಪತ್ರ ಬರೆದ ಸಿದ್ದರಾಮಯ್ಯ| 31-01-2021

Skanda
| Updated By: shruti hegde

Updated on:Feb 01, 2021 | 7:35 AM

Kannada News Live | ರಾಜ್ಯದ ಜನತೆಗೆ ಸುದೀರ್ಘ ಪತ್ರ ಬರೆದ ಸಿದ್ದರಾಮಯ್ಯ| 31-01-2021
ವಿಪಕ್ಷ ನಾಯಕ ಸಿದ್ದರಾಮಯ್ಯ

ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್​ಸೈಟ್​ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.

LIVE NEWS & UPDATES

The liveblog has ended.
  • 31 Jan 2021 07:48 PM (IST)

    ನಾವು ಎಐಎಡಿಎಂಕೆ ಜತೆ ಮೈತ್ರಿ ಮುಂದುವರಿಸುತ್ತೇವೆ: ಬಿಜೆಪಿ ಘೋಷಣೆ  

    07:52 pm ಏಪ್ರಿಲ್​-ಮೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಾವು ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ.

  • 31 Jan 2021 06:43 PM (IST)

    ಇನ್ಮುಂದೆ ಒಟಿಟಿಗೂ ಬರಲಿದೆ ಕಟ್ಟುಪಾಡು

    06:46 pm: ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಬೇಕು ಎಂದಾದರೆ ಅದಕ್ಕೆ ಒಂದಷ್ಟು ಕಟ್ಟುಪಾಡುಗಳಿವೆ. ಕೆಟ್ಟ ಶಬ್ದಗಳ ಬಳಕೆ, ಅಶ್ಲೀಲ ದೃಶ್ಯಗಳನ್ನು ಸಿನಿಮಾದಲ್ಲಿ ತೋರಿಸುವಂತಿಲ್ಲ. ಆದರೆ, ಒಟಿಟಿಗೆ ಈವರೆಗೆ ಯಾವುದೇ ರೀತಿಯ ಕಟ್ಟುಪಾಡುಗಳಿಗಿಲ್ಲ. ಈಗ ಇದಕ್ಕೂ ಕೆಲ ನಿಯಮ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

  • 31 Jan 2021 06:18 PM (IST)

    ಬಿಜೆಪಿ ಶಾಸಕ ಯತ್ನಾಳ್​ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ-ಬಿ.ಸಿ.ಪಾಟೀಲ್

    06:22 pm ಬಿಜೆಪಿ ಶಾಸಕ ಯತ್ನಾಳ್​ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ. ಅವರದ್ದು ತೋಳ ಬಂತು ತೊಳ ಕತೆ. ಬಸನಗೌಡ ಪಾಟೀಲ್​ ಯತ್ನಾಳ್​ ಸುಮ್ಮನೆ ಬುರುಡೆ ಬಿಡ್ತಾರೆ. ಯಡಿಯೂರಪ್ಪ ಎರಡೂವರೆ ವರ್ಷದ ಸಿಎಂ ಆಗಿರುತ್ತಾರೆ ಎಂದು ದಾವಣಗೆರೆಯಲ್ಲಿ ಕೃಷಿ ಖಾತೆ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.

  • 31 Jan 2021 05:05 PM (IST)

    ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಯಡವಟ್ಟು ಮಾಡಿಕೊಂಡ ಪೊಲೀಸ್​

    ಕುರುಬ ಸಮಾಜವನ್ನು ಎಸ್.ಟಿ ವಿಭಾಗಕ್ಕೆ ಸೇರಿಸುವಂತೆ ನಡೆದಿದ್ದ ಪ್ರತಿಭಟನೆಯಲ್ಲಿ ಕೆ.ಆರ್.ಪುರಂ ಇನ್ಸ್​ಪೆಕ್ಟರ್ ಅಂಬರೀಶ್ ಭಾಗವಹಿಸಿ ಯಡವಟ್ಟು ಮಾಡಿಕೊಂಡಿದ್ದಾರೆ. ನಗಾರಿ ಹೊಡೆದು ಸರ್ಕಾರದ ವಿರುದ್ದ ಪ್ರತಿಭಟನೆಯಲ್ಲಿ‌ ಭಾಗಿಯಾಗಿದ್ದು, ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸರ್ಕಾರಿ ನೌಕರನೇ ಪ್ರತಿಭಟಿಸಿರುವುದರಿಂದ ವಿವಾದ ಸೃಷ್ಟಿಯಾಗಿದೆ. ಈ ಹಿಂದೆಯೂ ಇಂಥದ್ದೇ ವಿವಾದ ಮೈಮೇಲೆ ಎಳೆದುಕೊಂಡಿದ್ದ ಅಂಬರೀಶ್, ಕೆ.ಆರ್ ಪುರಂ ಶಾಸಕರ ಬರ್ತ್ಡೇಯಲ್ಲಿ ಭಾಗಿಯಾಗಿ ಬೆಳ್ಳಿ ಗದೆ ನೀಡಿ ಘೋಷಣೆ ಕೂಗಿದ್ದರು.

  • 31 Jan 2021 04:55 PM (IST)

    ದೇಶ ಎಂದರೆ ಜನರೇ ಅಲ್ಲವೆ? ಜನದ್ರೋಹಿಗಳು ದೇಶ ಪ್ರೇಮಿಗಳು ಹೇಗಾಗುತ್ತಾರೆ? ನಾಡಿನ ಜನತೆಗೆ ಸಿದ್ದರಾಮಯ್ಯ ಬರೆದ ಪತ್ರ

    ಮೆರವಣಿಗೆ ನಡೆಸಿದ 10 ಲಕ್ಷ ರೈತರನ್ನು ಯಾವ ನಾಲಿಗೆಯಲ್ಲಿ ದೇಶದ್ರೋಹಿಗಳು ಎನ್ನುವುದು? ಆತ್ಮ, ಹೃದಯಗಳನ್ನು ಮಾರಿಕೊಂಡ, ಒತ್ತೆ ಇಟ್ಟುಕೊಂಡ ಜನದ್ರೋಹಿಗಳು ಮಾತ್ರವೇ ಈ ಮಾತುಗಳನ್ನಾಡಲು ಸಾಧ್ಯ ಅಲ್ಲವೇ?

    ದೇಶ ಎಂದರೆ ಜನರೇ ಅಲ್ಲವೆ? ಜನದ್ರೋಹಿಗಳು ದೇಶ ಪ್ರೇಮಿಗಳು ಹೇಗಾಗುತ್ತಾರೆ? ನಾಡಿನ ಜನತೆಗೆ ಸಿದ್ದರಾಮಯ್ಯ ಬರೆದ ಪತ್ರ

  • 31 Jan 2021 04:02 PM (IST)

    ಮಹಾರಾಷ್ಟ್ರ ಮುಖ್ಯಮಂತ್ರಿ ಬಹಳ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ: ಹೆಚ್​.ಡಿ.ದೇವೇಗೌಡ

    ಕರ್ನಾಟಕದ ಪ್ರದೇಶಗಳನ್ನು ಒಳಗೊಂಡ ಮಹಾರಾಷ್ಟ್ರದ ಹೊಸ ನಕ್ಷೆ ತಯಾರಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡೆ ಸರಿಯಿಲ್ಲ. ಉದ್ಧವ್​ ಠಾಕ್ರೆ ಬಹಳ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರು ತಾಳ್ಮೆ ಕಳೆದುಕೊಂಡಿದ್ದಾರೆ ಅನ್ನಿಸುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಗಡಿ ವಿವಾದ ಮುಗಿದ ಅಧ್ಯಾಯ ಎಂದು ಮೊರಾರ್ಜಿ ದೇಸಾಯಿ ಅವರೇ ಹೇಳಿದ್ದರು. ಆ ಸಂದರ್ಭದಲ್ಲಿ ನಾನೂ ಇದ್ದೆ. ಆದರೆ ಈಗ ಚುನಾವಣೆಗಾಗಿ ಮತ್ತೆ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

  • 31 Jan 2021 03:55 PM (IST)

    ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕಿಚ್ಚ ಸುದೀಪ್​ಗೆ ಶುಭಾಶಯಗಳ ಸುರಿಮಳೆ

    ನಟ ಸುದೀಪ್​ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷವಾಗಿದೆ. ಈ ಬೆಳ್ಳಿ‌ಹೆಜ್ಜೆ ಸಂಭ್ರಮದಲ್ಲಿರೋ ಸುದೀಪ್​ಗೆ ಚಿತ್ರರಂಗದ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ಉಪೇಂದ್ರ, ಮೋಹನ್ ಲಾಲ್, ರಮ್ಯಾ ಕೃಷ್ಣ, ಪ್ರಿಯಾ ಮಣಿ ಸೇರಿದಂತೆ ಹಲವು ಕಲಾವಿದರು ಸುದೀಪ್​ಗೆ ಶುಭ ಕೋರಿದ್ದಾರೆ.

  • 31 Jan 2021 03:11 PM (IST)

    ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ – ಸಿದ್ದರಾಮಯ್ಯ

    ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ. ಅವರ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ನನ್ನ ಪ್ರಕಾರ JDS ಈಸ್​ ನಾಟ್ ಎ ಪೊಲಿಟಿಕಲ್ ಪಾರ್ಟಿ ಎಂದಿರುವ ಸಿದ್ದರಾಮಯ್ಯ, ಅವರ ಕುರಿತಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

  • 31 Jan 2021 03:06 PM (IST)

    ವರ್ಗಾವಣೆ ಮಾಡಿದ್ದಕ್ಕೆ ಬೇಸರ: ಮೈಸೂರಿನ ಡಿಸಿ ಕಚೇರಿ ಮುಂದೆ ಮಹಿಳೆಯ ಏಕಾಂಗಿ ಧರಣಿ

    ವರ್ಗಾವಣೆ ಮಾಡಿದ್ದಕ್ಕೆ ಬೇಸರಗೊಂಡ ಡಿ ಗ್ರೂಪ್​ ನೌಕರ ಮಹಿಳೆ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಸೂರು ಡಿಸಿ ಕಚೇರಿಯಿಂದ ನಂಜನಗೂಡಿಗೆ ವರ್ಗಾವಣೆ ಮಾಡಿದ್ದಕ್ಕೆ ಬೇಸರಗೊಂಡಿರುವ ಮಹಿಳೆಯ ಮನವೊಲಿಸಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

  • 31 Jan 2021 02:19 PM (IST)

    ಪ್ರಧಾನ ಮಂತ್ರಿ ಸ್ಥಾನಕ್ಕೆ ಕೊಡಬೇಕಾದ ಗೌರವ ಕೊಡುತ್ತೇವೆ.. ರೈತರ ಆತ್ಮ ಗೌರವವನ್ನೂ ಕಾಪಾಡಿಕೊಳ್ಳುತ್ತೇವೆ..

    ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರೈತ ನಾಯಕ ನರೇಶ್​ ಟಿಕಾಯತ್​, ನಾವು ಸರ್ಕಾರಕ್ಕೆ ಹಾಗೂ ಪ್ರಧಾನ ಮಂತ್ರಿ ಸ್ಥಾನಕ್ಕೆ ನೀಡಬೇಕಾದ ಗೌರವವನ್ನು ನೀಡುತ್ತೇವೆ. ವ್ಯವಸ್ಥೆ ನಮ್ಮೆದುರು ತಲೆಬಾಗಲಿ ಎಂದು ಬಯಸುವುದಿಲ್ಲ. ಆದರೆ, ರೈತರ ಆತ್ಮಗೌರವವನ್ನು ಕಾಪಾಡಿಕೊಳ್ಳುವ ಕೆಲಸವನ್ನೂ ಮಾಡುತ್ತೇವೆ ಎಂದಿದ್ದಾರೆ. ಸರ್ಕಾರ ಈ ಸೂಕ್ಷ್ಮವನ್ನು ಅರಿತು ಪರಿಹಾರ ದೊರಕಿಸಿಕೊಡಬೇಕು ಎಂದು ಹೇಳಿಕೆ ನೀಡಿದ್ದಾರೆ.

  • 31 Jan 2021 01:32 PM (IST)

    ಮಹಾರಾಷ್ಟ್ರದ ಕಥೆ ’ಮನೆಯೊಂದು ಮೂರು ಬಾಗಿಲು‘ ಥರ ಆಗಿದೆ

    ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿವೆ. ಅವರ ಕಥೆ ಕನ್ನಡ ಧಾರಾವಾಹಿ ಮನೆಯೊಂದು ಮೂರು ಬಾಗಿಲು ಥರ ಆಗಿದೆ. ಎತ್ತು ಏರಿಗೆಳೆದರೆ ಕೋಣ ಕೆರೆಗೆ ಎಳೆಯಿತು ಎಂಬ ಪರಿಸ್ಥಿತಿ ಇದೆ. ಹೀಗೆ ಅಸ್ಥಿರತೆ ಉಂಟಾದಾಗ ಜನರ ಗಮನ ಬೇರೆಡೆ ಸೆಳೆಯಲು ಏನೇನೋ ಮಾತನಾಡುತ್ತಾರೆ. ಅವರ ವಿವಾದಾತ್ಮಕ ಹೇಳಿಕೆಯನ್ನು ಕಠೋರವಾಗಿ ಖಂಡಿಸುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

  • 31 Jan 2021 01:27 PM (IST)

    ಸಮ್ಮಿಶ್ರ ಸರ್ಕಾರದಲ್ಲಿ ನಾನು ಕ್ಲರ್ಕ್​ ಥರ ಕೆಲಸ ಮಾಡಿದ್ದೆ, ಸ್ವಾತಂತ್ರ್ಯವೇ ಇರಲಿಲ್ಲ: ಹೆಚ್​ಡಿಕೆ

    ಸಮ್ಮಿಶ್ರ ಸರಕಾರದಲ್ಲಿ ನನಗೆ ಸ್ವಾತಂತ್ರ್ಯ ಇರಲಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದರೂ ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವ ಹಾಗಿರಲಿಲ್ಲ. ಸಿದ್ದರಾಮಯ್ಯ ಅವರ ಒತ್ತಡ ಇತ್ತು. ಮೈತ್ರಿ ಸರಕಾರದಲ್ಲಿ ನಾನು ಕ್ಲರ್ಕ್ ತರ ಇದ್ದೆ ಅಂತ ಈಗಾಗಲೇ ಹೇಳಿದ್ದೇನೆ. ಹಾಗಾಗಿ ನನಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಆಗಿಲ್ಲ ಎಂದು ಬಾಗಲಕೋಟೆಯಲ್ಲಿ ಬೇಸರ ತೋಡಿಕೊಂಡಿದ್ದಾರೆ.

  • 31 Jan 2021 01:23 PM (IST)

    ಎಲ್ಲಾ ರಾಜಕಾರಣಿಗಳು ಮೌಲ್ಯ ಕಳೆದುಕೊಂಡಿದ್ದಾರೆ: ಬಸವರಾಜ ಹೊರಟ್ಟಿ

    ಸದ್ಯ ಎಲ್ಲಾ ಪಕ್ಷಗಳಲ್ಲಿ ಮೌಲ್ಯ ಅನ್ನೋದು ಹೊರಟು ಹೋಗಿದೆ. ರಾಜಕಾರಣಿಗಳು ಮೌಲ್ಯಗಳನ್ನು ಮರೆತಿದ್ದಾರೆ. ನಾವೆಲ್ಲರೂ ರಾಜಕೀಯದ ಎಥಿಕ್ಸ್​ ಮರೆತಿದ್ದೇವೆ. ಆಗೆಲ್ಲಾ ಪಕ್ಷಾಂತರ ಇರಲಿಲ್ಲ, ಈಗ ಎಲ್ಲವೂ ಬದಲಾಗಿದೆ ಎಂದು ಬಾಗಲಕೋಟೆಯಲ್ಲಿ MLC ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ.

  • 31 Jan 2021 01:08 PM (IST)

    ಮಹದಾಯಿ ಬಗ್ಗೆ ಗೋವಾ ಸಿಎಂ ಹೇಳಿಕೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹದ್ದು: ಹೆಚ್​.ಕೆ.ಪಾಟೀಲ್​

    ಮಹದಾಯಿ ಕುರಿತು ಗೋವಾ ಮುಖ್ಯಮಂತ್ರಿ ಹೇಳಿಕೆ ನೀಡಿರುವುದು ಅತ್ಯಂತ ಬೇಜವಾಬ್ದಾರಿತನದ ನಡೆಯಾಗಿದೆ. ಮಹದಾಯಿ ವಿಚಾರದಲ್ಲಿ ಈಗಾಗಲೇ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ್ದು, ಅದರ ಅನುಷ್ಠಾನದತ್ತ ಗಂಭೀರ ಹೆಜ್ಜೆ ಹಾಕಬೇಕಿದೆಯಷ್ಟೇ. ಗೋವಾ ಸಿಎಂ ಹೇಳಿಕೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥದ್ದಾಗಿದೆ ಎಂದು ಮಾಜಿ ಸಚಿವ ಹೆಚ್​.ಕೆ.ಪಾಟೀಲ್​ ಧಾರವಾಡದಲ್ಲಿ ಹೇಳಿಕೆ ನೀಡಿದ್ದಾರೆ.

  • 31 Jan 2021 01:03 PM (IST)

    ಹೆಚ್​.ವಿಶ್ವನಾಥ್​ ಕಾಂಗ್ರೆಸ್​ ಬಿಟ್ಟಿದ್ದೇ ತಪ್ಪು: ಹೆಚ್.ಕೆ. ಪಾಟೀಲ್

    ಹೆಚ್.ವಿಶ್ವನಾಥ್​ ಅವರು ಕಾಂಗ್ರೆಸ್​ ಬಿಟ್ಟು ಹೋಗಿದ್ದೇ ತಪ್ಪು. ಈಗ ಪಶ್ಚಾತ್ತಾಪ ಅಥವಾ ಬೇರೇನೇ ಇದ್ದರೂ ಅದು ಅವರ ವೈಯಕ್ತಿಕ ವಿಚಾರ. ಆದರೆ, ಕಾಂಗ್ರೆಸ್‌ನಿಂದ ಹೊರಗೆ ಹೋದವರು ಕೆಲವೇ ದಿನದಲ್ಲಿ ಪಶ್ಚಾತ್ತಾಪ ಪಡುತ್ತಾರೆ ಎನ್ನುವುದು ಸತ್ಯ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.

  • 31 Jan 2021 12:38 PM (IST)

    ರೆಸಾರ್ಟ್​ಗೆ ತೆರಳಲಿರುವ ಶಶಿಕಲಾ ನಟರಾಜನ್​

    ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ವಿ.ಕೆ.ಶಶಿಕಲಾ ಏರ್​ಪೋರ್ಟ್​ ಮಾರ್ಗದಲ್ಲಿ ತೆರಳುತ್ತಿದ್ದು, ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಬಳಿಯ ಪ್ರೆಸ್ಟೀಜ್ ಗಾಲ್ಪ್ ಶೈರ್‌ ರೆಸಾರ್ಟ್‌ಗೆ ಹೋಗಲಿದ್ದಾರೆ.

  • 31 Jan 2021 12:24 PM (IST)

    ಜಯಲಲಿತಾ ಸ್ಟೈಲ್​ನಲ್ಲೇ ಹೊರಬಂದ ಶಶಿಕಲಾ

    ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಶಶಿಕಲಾ ನಟರಾಜನ್​ ದಿ.ಜಯಲಲಿತಾ ಮಾದರಿಯನ್ನು ಇಲ್ಲಿಯೂ ಅನುಸರಿಸಿದ್ದಾರೆ. ಮೈ ಮೇಲೆ ಶಾಲು ಹೊದ್ದು, ವಿಕ್ಟರಿ ಸಿಂಬಲ್ ತೋರಿಸುತ್ತಾ ಜಯಲಲಿತಾರಂತೆಯೇ ಎರಡು ಕೈ ಮುಗಿದು ಅಮ್ಮನ ಸ್ಟೈಲ್​ ಕಾಪಾಡಿಕೊಂಡಿದ್ದಾರೆ. ಶಶಿಕಲಾ ಕಾರು ಕೆ.ಆರ್ ಮಾರ್ಕೆಟ್​ನಿಂದ ಟೌನ್ ಹಾಲ್ ಕಡೆ ಹೊರಡುವಾಗ ಅಭಿಮಾನಿಗಳ ಸಂಭ್ರಮ ಎಲ್ಲೆ ಮೀರಿತ್ತು.

  • 31 Jan 2021 12:10 PM (IST)

    ಆಸ್ಪತ್ರೆಯಿಂದ ಬಿಡುಗಡೆಯಾದ ಶಶಿಕಲಾ ನಟರಾಜನ್​

    ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಶಶಿಕಲಾ ನಟರಾಜನ್​ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತಮ್ಮ ನೆಚ್ಚಿನ ನಾಯಕಿ ಹೊರಬರುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.

  • 31 Jan 2021 12:09 PM (IST)

    ಶಶಿಕಲಾ ಡಿಸ್ಚಾರ್ಜ್​: ಆಸ್ಪತ್ರೆಗೆ ಟಿಟಿವಿ ದಿನಕರನ್ ಆಗಮನ

    ಆಸ್ಪತ್ರೆಯಿಂದ ಶಶಿಕಲಾ ಡಿಸ್ಚಾರ್ಜ್ ನಟರಾಜನ್​​ ಆಗುತ್ತಿರುವ ಹಿನ್ನೆಲೆ ಟಿಟಿವಿ ದಿನಕರನ್​ ಆಸ್ಪತ್ರೆಗೆ ಆಗಮಿಸಿದ್ದಾರೆ. ಶಶಿಕಲಾ ನಟರಾಜನ್ ಅಕ್ಕನ ಮಗ ಹಾಗೂ ಅಮ್ಮಲ್ ಮಕ್ಕಳ್ ಮುನ್ನೆಟ್ರ ಕಳಗಂ ಪಕ್ಷದ ಜನರಲ್ ಸೆಕ್ರೆಟರಿ ಹಾಗೂ ಚೆನ್ನೈ ಆರ್.ಕೆ ನಗರದ ಶಾಸಕರಾಗಿರುವ ದಿನಕರನ್​ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದಾರೆ.

  • 31 Jan 2021 11:49 AM (IST)

    ಪೋಲಿಯೋ ಲಸಿಕೆ ನೀಡುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಿದ ನಟಿ ತಾರಾ

    ಇಂದು ಪೋಲಿಯೋ ಲಸಿಕೆ ಅಭಿಯಾನ

  • 31 Jan 2021 11:38 AM (IST)

    ಮುಂಬೈ ಕರ್ನಾಟಕಕ್ಕೆ ಸೇರಬೇಕು, ಛತ್ರಪತಿ ಶಿವಾಜಿ ಮೂಲತಃ ಕರ್ನಾಟಕದವರು: ಸವದಿ ಮತ್ತು ಕಾರಜೋಳ

    ತಂಟೆಗೆ ಬಂದ ಮಹಾರಾಷ್ಟ್ರಕ್ಕೆ ಕರ್ನಾಟಕದ ಉಪಮುಖ್ಯಂತ್ರಿಗಳ ತಿರುಗೇಟು

    ಬೆಳಗಾವಿ ನಮ್ಮದೆಂದು ತಕರಾರು ತೆಗೆದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಗೆ ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ​ ಸವದಿ ಮತ್ತು ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಮುಂಬೈ ನಮಗೆ ಸೇರಬೇಕು ಎಂದು ಲಕ್ಷ್ಮಣ ಸವದಿ ಹೇಳಿದ್ದು, ಛತ್ರಪತಿ ಶಿವಾಜಿ ಪೂರ್ವಜರು ಕರ್ನಾಟಕದವರು ಹಾಗಾಗಿ ಶಿವಾಜಿಯ ಮೂಲ ಕರ್ನಾಟಕ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.

  • 31 Jan 2021 11:37 AM (IST)

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೌರವ್ ಗಂಗೂಲಿ

    ಎರಡನೇ ಬಾರಿಗೆ ಆ್ಯಂಜಿಯೋಪ್ಲಾಸ್ಟ್​ಗೆ ಒಳಗಾಗಿ ಆಸ್ಪತ್ರೆಗೆ ಸೇರಿದ್ದ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಇಂದು ಕೋಲ್ಕತ್ತಾದ ಅಪೋಲೊ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮತ್ತೆರೆಡು ಸ್ಟಂಟ್​ ಅವಳವಡಿಸಿ, ಬೆಳಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಗಂಗೂಲಿಯವರನ್ನು ಡಿಸ್ಚಾರ್ಜ್​ ಮಾಡಲಾಗಿದೆ.

  • 31 Jan 2021 11:34 AM (IST)

    ಎಲ್ಲರೂ ಒಂದಾಗಿ ಕಾರ್ಯ ನಿರ್ವಹಿಸಿ ಈ ವರ್ಷವನ್ನು ಸಾರ್ಥಕಗೊಳಿಸೋಣ: ಮೋದಿ ಕರೆ

    ಹೊಸ ವರ್ಷಕ್ಕೆ ಹೊಸ ಆಲೋಚನೆಗಳೊಂದಿಗೆ ಕಾಲಿಟ್ಟಿದ್ದೇವೆ. ಪ್ರತಿಯೊಂದು ಜವಾಬ್ದಾರಿಗಳನ್ನೂ ಸಮರ್ಪಕವಾಗಿ ನಿಭಾಯಿಸಿ ಹೆಜ್ಜೆ ಇಡುವ ಮೂಲಕ ಈ ವರ್ಷವನ್ನು ಸಾರ್ಥಕಗೊಳಿಸೋಣ ಎಂದು ಕರೆ ನೀಡಿದ ಪ್ರಧಾನಿ ಮೋದಿ.

  • 31 Jan 2021 11:09 AM (IST)

    ಭಾರತದ ಕೊರೊನಾ ಲಸಿಕೆ ಆತ್ಮನಿರ್ಭರತೆಯ ಸಂಕೇತ ಮಾತ್ರವಲ್ಲ: ಮೋದಿ

    ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆ ಆತ್ಮನಿರ್ಭರ ಭಾರತದ ಸಂಕೇತ ಮಾತ್ರವಲ್ಲ. ಅದು ಭಾರತದ ಆತ್ಮ ಗೌರವದ ಸಂಕೇತವೂ ಹೌದು ಎಂದು ಹೇಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ.

  • 31 Jan 2021 11:08 AM (IST)

    ಹೆಮ್ಮೆ, ಬೇಸರ ಎರಡನ್ನೂ ಹೊತ್ತು ತಂದ ಜನವರಿ: ಮೋದಿ

    ಜನವರಿಯಲ್ಲಿ ಏನೇನಾಯಿತು ಎಂದು ಮೆಲುಕು ಹಾಕಿದ ಮೋದಿ. ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಕ್ರಿಕೆಟ್​ ತಂಡ ವಿಜಯ ಸಾಧಿಸಿದ್ದು, ಕೊರೊನಾ ಲಸಿಕೆ ವಿತರಣೆ ಆರಂಭಿಸಿದ್ದು, ಸಂಕ್ರಾಂತಿ, ಗಣರಾಜ್ಯೋತ್ಸವ ಆಚರಿಸಿದ್ದು ಎಲ್ಲವೂ ಖುಷಿಯ ವಿಚಾರ. ಆದರೆ, ಗಣರಾಜ್ಯೋತ್ಸವದ ದಿನ ಕೆಂಪುಕೋಟೆಯಲ್ಲಿ ನಡೆದ ಘಟನೆ ಬೇಸರ ಮೂಡಿಸುವಂಥದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮೋದಿ.

  • 31 Jan 2021 11:05 AM (IST)

    ಸಮಯ ಎಷ್ಟು ಬೇಗ ಓಡುತ್ತದೆ.. ಹೊಸ ವರ್ಷದ ಒಂದು ತಿಂಗಳು ಕಳೆದೇ ಹೋಯಿತು: ನರೇಂದ್ರ ಮೋದಿ

    ಮೊನ್ನೆ ಮೊನ್ನೆಯಷ್ಟೇ ನಾವು ಒಬ್ಬರಿಗೊಬ್ಬರು ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡಿದ್ದೆವು. ಆದರೀಗ ಜನವರಿಯ ಕೊನೆಯ ದಿನಕ್ಕೆ ಬಂದು ನಿಂತಿದ್ದೇವೆ. ಸಮಯ ಎಷ್ಟು ಬೇಗ ಓಡುತ್ತದೆ ಎಂದು ಮನ್​ ಕೀ ಬಾತ್​ ಆರಂಭಿಸಿದ ಮೋದಿ.

  • 31 Jan 2021 10:57 AM (IST)

    ಮುಷ್ಕರ ನಿರತ ಟೊಯೊಟಾ ಕಾರ್ಮಿಕರನ್ನು ಭೇಟಿ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ

    ರಾಮನಗರ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೊಟಾ ಸಂಸ್ಥೆಯ ಕಾರ್ಮಿಕರ ಮುಷ್ಕರ 84ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಮಿಕರನ್ನು ಭೇಟಿಯಾಗಿದ್ದಾರೆ.

  • 31 Jan 2021 10:30 AM (IST)

    PUBG ಆಡುವಾಗ ಅವಮಾನಿಸಿದರೆಂದು ನೇಣಿಗೆ ಕೊರಳೊಡ್ಡಿದ ಹುಡುಗ

    PUBG ಆಡುವಾಗ ಅವಮಾನಿಸಿದ್ದಕ್ಕೆ ಬೇಸತ್ತು, 16 ವರ್ಷದ ಹುಡುಗ ನೇಣಿಗೆ ಶರಣಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರಿನ ಭಾರತಿದಾಸನ್ ನಗರದಲ್ಲಿ ನಡೆದಿದೆ. ITI ವಿದ್ಯಾರ್ಥಿ ರವಿ ಎಂಬಾತ ಅಮ್ಮನ ಸೀರೆಯನ್ನು ಬಳಸಿ ನೇಣು ಹಾಕಿಕೊಂಡಿದ್ದಾನೆ. ಗಾರೆ ಕೆಲಸಕ್ಕೆ ತೆರಳಿದ್ದ ತಾಯಿ ಮನೆಗೆ ಬಂದಾಗ ಮಗ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ.

  • 31 Jan 2021 09:57 AM (IST)

    ನಾಳೆಯಿಂದ ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ಅವಕಾಶ

    ಕೊವಿಡ್ ಹಿನ್ನೆಲೆ ಕಳೆದ 10 ತಿಂಗಳಿಂದ ಬಂದ್​ ಆಗಿದ್ದ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ನಾಳೆಯಿಂದ ದೇವಿ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧಿಕೃತ ಆದೇಶ ಹೊರಡಿಸಿದ್ದಾರೆ. ಕೆಲವು ಮಾರ್ಗಸೂಚಿ ಸೂತ್ರ ವಿಧಿಸಿ ಯಲ್ಲಮ್ಮ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ದರ್ಶನ ಪಡೆಯುವಂತೆ ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮನವಿ ಮಾಡಿದ್ದಾರೆ.

  • 31 Jan 2021 09:51 AM (IST)

    ಇಂದು ಬೆಳಗ್ಗೆ 11ಕ್ಕೆ ವರ್ಷದ ಮೊದಲ ಮನ್​ ಕೀ ಬಾತ್​

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಕಾರ್ಯಕ್ರಮ ಮನ್​ ಕೀ ಬಾತ್​ ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. 2021ನೇ ಇಸವಿಯ ಮೊದಲ ಮನ್​ ಕೀ ಬಾತ್​ ಕಾರ್ಯಕ್ರಮ ಇದಾಗಿದೆ.

  • 31 Jan 2021 09:48 AM (IST)

    ಕುರುಬ ಸಮುದಾಯಕ್ಕೆ ಎಸ್​ಟಿ ಮೀಸಲಾತಿ ವಿಚಾರ: ದಾಬಸ್​ಪೇಟೆ ತಲುಪಲಿರುವ ಪಾದಯಾತ್ರೆ

    ಕುರುಬ ಸಮುದಾಯಕ್ಕೆ ST ಮೀಸಲಾತಿ ನೀಡಲು ಆಗ್ರಹಿಸಿ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇಂದು ದಾಬಸ್‌ಪೇಟೆ ತಲುಪಲಿದೆ. ಹೋರಾಟದ ಮುಂದುವರೆದ ಭಾಗವಾಗಿ ಫೆ.7ರಂದು ಬಿಐಇಸಿಯಲ್ಲಿ ‘ಎಸ್‌ಟಿ ನಮ್ಮ ಹಕ್ಕು’ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.

  • 31 Jan 2021 09:40 AM (IST)

    ಬಾಗಲಕೋಟೆಯಲ್ಲಿ ಜೆಡಿಎಸ್​ ಬಲ ಪ್ರದರ್ಶನ

    ಬಾಗಲಕೋಟೆಗೆ ಇಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ನಗರದ ಕಾಳಿದಾಸ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಜೆಡಿಎಸ್ ಸಂಘಟನಾ ಸಮಾವೇಶದಲ್ಲಿ ಭಾಗಿಯಾಗಲಿರುವ ಹೆಚ್​ಡಿಕೆಗೆ ಪಕ್ಷದ ಪ್ರಮುಖ ನಾಯಕರು ಜೊತೆಯಾಗಲಿದ್ದಾರೆ. ಸಮಾವೇಶದಲ್ಲಿ ವಿವಿಧ ತಾಲ್ಲೂಕಿನ 100ಕ್ಕೂ ಹೆಚ್ಚು ಮುಖಂಡರು ಜೆಡಿಎಸ್​ ಸೇರುವುದಾಗಿ ತಿಳಿದುಬಂದಿದೆ.

  • 31 Jan 2021 09:36 AM (IST)

    ರೈತರನ್ನು ತಡೆಯಲು ಗಾಜೀಪುರ ಗಡಿಯಲ್ಲಿ 12 ಹಂತದ ಬ್ಯಾರಿಕೇಡ್​ ಅಳವಡಿಕೆ

    ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು ದೆಹಲಿಯ ಗಾಜೀಪುರ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸುತ್ತಿದ್ದು ಗಾಜೀಪುರ ಗಡಿಯಲ್ಲಿ 12 ಹಂತದಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ.

  • 31 Jan 2021 09:33 AM (IST)

    ರಾಬರ್ಟ್​ ವಿವಾದ.. ಟಾಲಿವುಡ್​ ನಡೆ ಪ್ರಶ್ನಿಸಿ ಇಂದು ಸಿನಿರಂಗದ ಪ್ರಮುಖರಿಂದ ಸಭೆ

    ನಟ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಬಿಡುಗಡೆ ವಿವಾದಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರರಂಗದ ಹೊಸ ನಿಯಮವನ್ನು ಪ್ರಶ್ನಿಸಿ, ಇಂದು ದಕ್ಷಿಣ ಭಾರತದ ಫಿಲ್ಮ್ ಚೇಂಬರ್ ಸಂಘದ ಸಭೆಯನ್ನು ಚೆನ್ನೈನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ ಸಭೆಯಲ್ಲಿ ಸೌತ್ ಇಂಡಿಯನ್ ಫಿಲಂ ಚೇಂಬರ್ ಅಧ್ಯಕ್ಷ ಕಾಟ್ರಗಾಡ್ ಪ್ರಸಾದ್, ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ.

  • 31 Jan 2021 09:26 AM (IST)

    ಕೊವಿಡ್‌ನಿಂದ ಶಶಿಕಲಾ ನಟರಾಜನ್ ಪೂರ್ಣ ಗುಣಮುಖ

    ಕೊವಿಡ್‌ ಸೋಂಕಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಶಶಿಕಲಾ ನಟರಾಜನ್ ಸಂಪೂರ್ಣ ಗುಣಮುಖರಾಗಿದ್ದಾರೆ. 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಶಶಿಕಲಾ ಅವರಿಗೆ ಕೆಲದಿನಗಳವರೆಗೆ ಹೋಂ ಕ್ವಾರಂಟೈನ್‌ನಲ್ಲಿರಲು ವೈದ್ಯರು ಸಲಹೆ ನೀಡಿದ್ದಾಗಿ ತಿಳಿದುಬಂದಿದೆ. ಇನ್ನು ಶಶಿಕಲಾ ಅವರ ಜೈಲುವಾಸ ಜನವರಿ 27ರಂದೇ ಅಂತ್ಯವಾಗಿದ್ದು, ಜೈಲು ಸಿಬ್ಬಂದಿ ಬಿಡುಗಡೆ ಪ್ರಕ್ರಿಯೆಯನ್ನು ಅಂದೇ ಮುಗಿಸಿದ್ದಾರೆ.

  • 31 Jan 2021 09:22 AM (IST)

    ಮಹಾರಾಷ್ಟ್ರದಲ್ಲಿ ಲಘು ಭೂಕಂಪ

    ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಲಘು ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.2ರಷ್ಟು ದಾಖಲಾಗಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • 31 Jan 2021 09:19 AM (IST)

    ಇಂದಿನಿಂದ 4 ದಿನ ಪೋಲಿಯೋ ಲಸಿಕೆ ಕಾರ್ಯಕ್ರಮ ಪ್ರಯುಕ್ತ ಕೊರೊನಾ ಲಸಿಕೆಗೆ ಬ್ರೇಕ್​

    ಇಂದಿನಿಂದ 4 ದಿನ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಲಿದ್ದು ರಾಜ್ಯದಲ್ಲಿ 4 ದಿನಗಳ ಕಾಲ ಕೊವಿಡ್ ಲಸಿಕೆ ಅಭಿಯಾನವನ್ನು ನಿಲ್ಲಿಸಲು ಸೂಚನೆ ನೀಡಲಾಗಿದೆ. ಫೆ.3ರವರೆಗೆ ಪೋಲಿಯೋ ಲಸಿಕೆ ಕಾರ್ಯಕ್ರಮ ಇರಲಿದ್ದು, ಅದಕ್ಕೆ ಹೆಚ್ಚಿನ ಸಮಯಾವಕಾಶ ಬೇಕಾದ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲು ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ಆದೇಶ ಹೊರಡಿಸಿದ್ದಾರೆ.

  • Published On - Jan 31,2021 7:48 PM

    Follow us
    ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
    ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
    ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
    ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
    ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
    ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
    ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
    ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
    ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
    ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
    Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
    Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
    ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
    ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
    ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
    ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
    ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
    ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
    ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
    ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ