ಕಲ್ಲಿನಿಂದ ಜಜ್ಜಿ ಅಣ್ಣ ಮತ್ತು ತಂಗಿಯ ಕೊಲೆ, ಆಟೋ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರ ದುರ್ಮರಣ
ಕಲ್ಲಿನಿಂದ ಜಜ್ಜಿಅಣ್ಣ ಮತ್ತು ತಂಗಿಯನ್ನು ಕೊಲೆ ಮಾಡಿರುವ ಘಟನೆ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.
ವಿಜಯಪುರ: ಕಲ್ಲಿನಿಂದ ಜಜ್ಜಿಅಣ್ಣ ಮತ್ತು ತಂಗಿಯನ್ನು ಕೊಲೆ ಮಾಡಿರುವ ಘಟನೆ ಸಿಂದಗಿ (Sindagi) ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ರಾಜಶ್ರೀ ಶಂಕರಗೌಡ ಬಿರಾದಾರ(40), ನಾನಾಗೌಡ ಯರಗಲ್(45) ಮೃತ ದುರ್ದೈವಿಗಳು. ರಾಜಶ್ರೀ ಪತಿ ಶಂಕರಗೌಡ ಮತ್ತು ಇತರರರು ಕೊಲೆ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ಸಕಲೇಶಪುರದ ಹಳ್ಳಿಗಳಿಗೆ ಪುನಃ ಕಾಡಾನೆಗಳ ಪ್ರವೇಶ, ಆನೆ ಉಪಟಳಕ್ಕೆ ಶಾಶ್ವತ ಪರಿಹಾರ ಹುಡುಕದ ಸರ್ಕಾರದ ವಿರುದ್ಧ ಜನರ ಆಕ್ರೋಶ
ಪುತ್ತೂರು ತಾಲೂಕಿನ ಪೆರ್ಲಂಪಾಡಿಯಲ್ಲಿ ವ್ಯಕ್ತಿ ಕೊಲೆ ಕೇಸ್
ದಕ್ಷಿಣ ಕನ್ನಡ: ಪುತ್ತೂರು (Puttur) ತಾಲೂಕಿನ ಪೆರ್ಲಂಪಾಡಿಯಲ್ಲಿ ವ್ಯಕ್ತಿಯೋರ್ವ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. . ಜಿಲ್ಲೆಯ ಪುತ್ತೂರು ತಾಲೂಕಿನ ಪೆರ್ಲಂಪಾಡಿನ ನರ್ಮೇಶ್ ರೈ, ನಿತಿಲ್ ಶೆಟ್ಟಿ, ವಿಜೇಶ್ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ಕಿಶೋರ್ ಕುಮಾರ್ಗಾಗಿ ಶೋಧ ಕಾರ್ಯ ನಡೆಯುತ್ತಿದೆ. 2019ರ ಕಾರ್ತಿಕ್ ಎಂಬ ವ್ಯಕ್ತಿಯ ಕೊಲೆಯ ಪ್ರತೀಕಾರಕ್ಕಾಗಿ ಹತ್ಯೆ ನಡೆದಿತ್ತು. ಇನ್ನೂ ಹಲವು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.
ಆಟೋ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರ ದುರ್ಮರಣ
ತುಮಕೂರು: ಆಟೋ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಲಿಗಾನಹಳ್ಳಿ ಗ್ರಾಮದ ಬಳಿ ನಡೆದಿದೆ. ಬಂಡಪ್ಪ(60), ಈರ ಬಂಡಪ್ಪ(65) ಮೃತ ದುರ್ದೈವಿಗಳು. ಆಟೋದಲ್ಲಿ 8-10 ಜನರಿದ್ದರು ಎನ್ನಲಾಗುತ್ತಿದ್ದು, ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನು ಓದಿ: ಚೀನಾದಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ಹೇಗಿರುತ್ತದೆ ಗೊತ್ತಾ? ಇಲ್ಲಿ ನೋಡಿ
ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವು
ಗದಗ: ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಬೆಣ್ಣಿಹಳ್ಳಿ ಬಳಿ ಗದಗ-ಚೆಳ್ಳಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹಣಮಂತ ಇದ್ಲಿ 40, ಫಕೀರಪ್ಪ ಇದ್ಲಿ 38 ಮೃತ ದುರ್ದೈವಿಗಳು. ಲಾರಿ ಓವರ್ ಟೇಕ್ ಮಾಡುವಾಗ ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿದೆ. ಡಿಕ್ಕಿ ಸಂಭವಿಸಿದಾಗಿ ಲಾರಿ ಕೆಳಗೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಸವಾರರಿಗೆ ಗಂಭೀರ ಗಾಯಗಳಾಗಿವೆ. ದಾವಲಸಾಬ್ 26, ಲಾಲಸಾಬ್ 26 ಸವಾರರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮುಂಡರಗಿ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ರೌಡಿಶೀಟರ್ಗೆ ನಕಲಿ ಶ್ಯೂರಿಟಿ ನೀಡಲು ಬಂದಿದ್ದವರ ಸೆರೆ
ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ, ರೌಡಿ ಲಕ್ಷ್ಮಣಗೆ ನಕಲಿ ಶ್ಯೂರಿಟಿ ನೀಡಲು ಬಂದ ನಾಲ್ವರನ್ನು ಬೆಂಗಳೂರಿನ ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ಗಳಾದ ಆಕಾಶ್, ಮಹೇಶ್, ಲೋಕೇಶ್ ಮತ್ತು ರಾಮಲಿಂಗಯ್ಯ ಬಂಧಿತ ಆರೋಪಿಗಳು. ರೌಡಿ ಲಕ್ಷ್ಮಣನ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ಸಂಬಂಧ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಕಚೇರಿಗೆ ಆರೋಪಿಗಳು ಶ್ಯೂರಿಟಿ ನೀಡಲು ಬಂದಿದ್ದರು. ಈ ವೇಳೆ ಡಿಸಿಪಿ ವಿನಾಯಕ್ ಪಾಟೀಲ್ ಶ್ಯೂರಿಟಿಯನ್ನು ಪರಿಶೀಲಿಸಿದಾಗ ನಕಲಿ ಎಂದು ತಿಳಿದು ಬಂದಿದೆ. ಯಶವಂತಪುರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಸಮಾಜಕ್ಕೆ ಮಾರಕವಾಗಿರುವ ರೌಡಿಶೀಟರ್ ಗಳಿಗೆ CRPC ಅಡಿ ಕೇಸ್ ಹಾಕಲಾಗುತ್ತೆ ಅಪರಾಧ ದಂಡ ಸಂಹಿತೆ 107, 109, 110 ಅಡಿಯಲ್ಲಿ ಕೇಸ್ ಹಾಕಲಾಗುತ್ತೆ. ಮ್ಯಾಜಿಸ್ಟ್ರೇಟ್ ಮಾದರಿಯಲ್ಲೇ ಡಿಸಿಪಿ ಮುಚ್ಚಳಿಕೆ ಬರೆಸಿ ಶ್ಯೂರಿಟಿ ಪಡೆದು ಬಿಡುಗಡೆಗೊಳಿಸ್ತಾರೆ. ಮತ್ತೆ ಅಪರಾಧ ಕೃತ್ಯದಲ್ಲಿ ಭಾಗಿಯಾದ್ರೆ ಶ್ಯೂರಿಟಿ ಪಡೆದವ್ರಿಗೂ ಹಾಗೂ ರೌಡಿಗೂ ದಂಡ ವಿಧಿಸಲಾಗುತ್ತೆ. ಮುಚ್ಚಳಿಕೆ ಬರೆದೆಕೊಡುವುದರ ಜತೆಗೆ ಶ್ಯೂರಿಟಿಗೆ ಬಾಂಡ್ ನೀಡಬೇಕು. ಆ ಬಾಂಡನ್ನೇ ನಕಲಿ ಮಾಡಿ ಶ್ಯೂರಿಟಿ ನೀಡೋ ಕೆಲಸಕ್ಕೆ ಇಬ್ಬರು ಆರೋಪಿಗಳು ಮುಂದಾಗಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:11 pm, Mon, 6 June 22