ರಾಜ್ಯ ಸರ್ಕಾರ 2 ವರ್ಷ ಪೂರ್ಣಗೊಳಿಸ್ತಿರೋದ್ರಿಂದ ಶಾಸಕಾಂಗ ಸಭೆ ಕರೆದ ಸಿಎಂ, ಸಭೆಯಲ್ಲಿ ನಾಯಕತ್ವ ಬದಲಾವಣೆಗೆ ತೆರೆ ಬೀಳುತ್ತಾ?

ಕೆಲ ದಿನ ಸಿಎಂ ಬದಲಾವಣೆ ಸುದ್ದಿಗೆ ಬ್ರೇಕ್ ಬಿದ್ದಿತ್ತು. ಆದ್ರೆ, ಬಿ.ಎಸ್‌.ಯಡಿಯೂರಪ್ಪ ದೆಹಲಿಗೆ ಹೋಗಿ ಬಂದಾಗಿನಿಂದ ಸಿಎಂ ಬದಲಾವಣೆ ಬೆಂಕಿ ಮತ್ತೆ ಹೊತ್ತಿ ಕೊಂಡಿದೆ. ಎರಡು ದಿನದ ಹಿಂದೆ ಪ್ರಧಾನಿ ಮೋದಿ ಜೊತೆ 10 ನಿಮಿಷ ಮಾತನಾಡಿದ್ದ ಸಿಎಂ, ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಮಾಡಿ ಚರ್ಚಿಸಿದ್ರು.

ರಾಜ್ಯ ಸರ್ಕಾರ 2 ವರ್ಷ ಪೂರ್ಣಗೊಳಿಸ್ತಿರೋದ್ರಿಂದ ಶಾಸಕಾಂಗ ಸಭೆ ಕರೆದ ಸಿಎಂ, ಸಭೆಯಲ್ಲಿ ನಾಯಕತ್ವ ಬದಲಾವಣೆಗೆ ತೆರೆ ಬೀಳುತ್ತಾ?
ಬಿ.ಎಸ್. ಯಡಿಯೂರಪ್ಪ, ನರೇಂದ್ರ ಮೋದಿ

ಬೆಂಗಳೂರು: ಸಿಎಂ ಯಡಿಯೂರಪ್ಪ ಜುಲೈ 25 ರಂದು ಸಂಪುಟ ಸಹೋದ್ಯೋಗಿಗಳು ಮತ್ತು ಸ್ವಪಕ್ಷದ ಶಾಸಕರಿಗೆ ಭೋಜನಕೂಟ ಆಯೋಜಿಸಿದ್ದಾರೆ. ಜುಲೈ 26 ರಂದು ರಾಜ್ಯ ಸರ್ಕಾರ 2 ವರ್ಷ ಪೂರ್ಣಗೊಳಿಸ್ತಿರೋದ್ರಿಂದ ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ.

ಇತ್ತ, ಸಿಎಂ ಕರೆದಿರುವ ಶಾಸಕಾಂಗ ಪಕ್ಷದ ಸಭೆ ಮತ್ತು ಭೋಜನಕೂಟವನ್ನು ವಿರೋಧಿ ಬಣ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದೆ. ದೆಹಲಿಯಲ್ಲಿ ವರಿಷ್ಠರು ಬಿಎಸ್ವೈಗೆ ಬೇರೆಯವರಿಗೆ ಅವಕಾಶ ಮಾಡಿಕೊಡಿ ಅನ್ನೋ ಸೂಚನೆ ಕೊಟ್ಟಿದ್ದಾರೆ ಅಂತಾ ವಿರೋಧಿ ಬಣ ಹೇಳ್ತಿದೆ. ಇಷ್ಟೇ ಅಲ್ಲ, ಶಾಸಕಾಂಗ ಪಕ್ಷದ ಸಭೆ ನಡೆದ ಎರಡು ದಿನಗಳಲ್ಲಿ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಡಲಿದ್ದಾರೆ ಅಂತಿದ್ದಾರೆ. ಆದ್ರೆ, ಸಿಎಂ ಪಾಳಯ ಈ ವಾದವನ್ನು ಒಪ್ಪಲು ಸಿದ್ಧವಿಲ್ಲ.

ಕೆಲ ದಿನ ಸಿಎಂ ಬದಲಾವಣೆ ಸುದ್ದಿಗೆ ಬ್ರೇಕ್ ಬಿದ್ದಿತ್ತು. ಆದ್ರೆ, ಬಿ.ಎಸ್‌.ಯಡಿಯೂರಪ್ಪ ದೆಹಲಿಗೆ ಹೋಗಿ ಬಂದಾಗಿನಿಂದ ಸಿಎಂ ಬದಲಾವಣೆ ಬೆಂಕಿ ಮತ್ತೆ ಹೊತ್ತಿ ಕೊಂಡಿದೆ. ಎರಡು ದಿನದ ಹಿಂದೆ ಪ್ರಧಾನಿ ಮೋದಿ ಜೊತೆ 10 ನಿಮಿಷ ಮಾತನಾಡಿದ್ದ ಸಿಎಂ, ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಮಾಡಿ ಚರ್ಚಿಸಿದ್ರು. ಇದಕ್ಕೂ ಮುನ್ನ ಎಲ್ಲಾ ಊಹಾಪೋಹಗಳಿಗೂ ಸಿಎಂ ತೆರೆ ಎಳೆದಿದ್ದಾರೆ. ರಾಜೀನಾಮೆ ಸಲ್ಲಿಸುತ್ತೇವೆ ಅನ್ನೋದೆಲ್ಲಾ ಸುಳ್ಳು ಅಂತಾ ಖಡಕ್ ಆಗಿ ಹೇಳಿದ್ದಾರೆ.

ಯಡಿಯೂರಪ್ಪ ಏನೋ ಸಿಎಂ ಸ್ಥಾನದಿಂದ ಕೆಳಗಿಳಿಯಲ್ಲ. ಅಂತಹ ಸಮಯ ಬಂದಿಲ್ಲ ಅಂತಿದ್ದಾರೆ. ಆದ್ರೆ, ಸಿಎಂ ಬದಲಾವಣೆಗೆ ಹೈಕಮಾಂಡ್‌ನಿಂದ ಸೂಚನೆ ಸಿಕ್ಕಿದೆ ಅನ್ನೋ ಮಾತಿಗೆ ರೆಕ್ಕೆಪುಕ್ಕ ಹುಟ್ಟಿಕೊಂಡಿದೆ. ಈಗಲೇ ರಾಜೀನಾಮೆ ಕೊಡದಿದ್ದರೂ ಆಗಸ್ಟ್‌ ವೇಳೆಗೆ ಯಡಿಯೂರಪ್ಪ ರಾಜೀನಾಮೆ ಪಡೆಯಬಹುದು ಅನ್ನೋ ಮಾತು ಕಮಲ ಪಾಳಯದಿಂದ ಕೇಳಿ ಬರ್ತಿದೆ. ಆದ್ರೆ, ಜೆ.ಪಿ.ನಡ್ಡಾ ಭೇಟಿಯಾದ ನಂತರ ಮಾತಾಡಿದ ಸಿಎಂ, ರಾಜೀನಾಮೆ ಕೊಡುವಂತಹ ವಿಚಾರ ಇದ್ರೆ, ಅದರಲ್ಲಿ ಮುಚ್ಚಿಡುವಂತದ್ದೂ ಏನೂ ಇಲ್ಲ ಅಂತೇಳಿ ಸ್ಥಾನ ತ್ಯಜಿಸುವ ಮಾತಿಗೆ ವಿರಾಮ ಎಳೆಯುವ ಪ್ರಯತ್ನ ಮಾಡಿದ್ರು.

ಇದರಲ್ಲಿ ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ನಡ್ಡಾ ಭೇಟಿ ನಂತ್ರ, ಬೆಂಗಳೂರಿಗೆ ವಾಪಸ್ ಆಗಲು ವಿಮಾನ ನಿಲ್ದಾಣದತ್ತ ಹೊರಟಿದ್ದ ಸಿಎಂರನ್ನ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಾಪಸ್‌ ಕರೆಸಿಕೊಂಡಿದ್ರು. ಈ ವೇಳೆ ರಾಜ್ಯದ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದ್ರು. ಅಮಿತ್‌ ಶಾ ಜತೆ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದ್ದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಲಾಕ್ಡೌನ್ ವಿಸ್ತರಣೆ ಬಗ್ಗೆ ಸಚಿವರ ಸಭೆಯಲ್ಲಿ ಬಿಎಸ್ ಯಡಿಯೂರಪ್ಪ ನಿರ್ಧಾರ ಮಾಡ್ತಾರೆ -ಗೃಹ ಸಚಿವ ಬಸವರಾಜ ಬೊಮ್ಮಾಯಿ

Click on your DTH Provider to Add TV9 Kannada