ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿ: ಸರ್ಕಾರ ಸೇಫ್​, BSYಗೆ ಬಂತು ಆನೆ ಬಲ

ಬೆಂಗಳೂರು:  ರಾಜ್ಯದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸೇಫ್ ಎಂದು ತಿಳಿದು ಬಂದಿದೆ. ಉಪಚುನಾವಣೆಗೆ ಅನರ್ಹರು ಅರ್ಹರಾಗಲಿ, ಅನರ್ಹರಾಗಲಿ ಅಥವಾ ಬಿಜೆಪಿ ಸರ್ಕಾರ ಬಿದ್ದರೂ ಸರ್ಕಾರಕ್ಕೆ ಯಾವುದೇ ಅಡ್ಡಿಯಿಲ್ಲ. ನಿಮ್ಮ ಸರ್ಕಾರದ ಜೊತೆ JDS ಇರುತ್ತದೆ ಎಂದು ಜೆಡಿಎಸ್​ ವರಿಷ್ಠ ಹೆಚ್​.ಡಿ.ದೇವೇಗೌಡರು ಅಭಯ ನೀಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಫೋನ್​ನಲ್ಲಿ ಉಭಯ ನಾಯಕರೂ ಮಾತುಕತೆ  ನಡೆಸಿದ್ದು, ದೂರವಾಣಿಯಲ್ಲಿ ಬಿಎಸ್​​ವೈ ಗೆ ಖುದ್ದು ದೇವೇಗೌಡರೇ ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ. ದೋಸ್ತಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣವೆಂಬ ಅಂಶ […]

ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿ: ಸರ್ಕಾರ ಸೇಫ್​, BSYಗೆ ಬಂತು ಆನೆ ಬಲ

Updated on: Nov 06, 2019 | 6:39 AM

ಬೆಂಗಳೂರು:  ರಾಜ್ಯದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸೇಫ್ ಎಂದು ತಿಳಿದು ಬಂದಿದೆ. ಉಪಚುನಾವಣೆಗೆ ಅನರ್ಹರು ಅರ್ಹರಾಗಲಿ, ಅನರ್ಹರಾಗಲಿ ಅಥವಾ ಬಿಜೆಪಿ ಸರ್ಕಾರ ಬಿದ್ದರೂ ಸರ್ಕಾರಕ್ಕೆ ಯಾವುದೇ ಅಡ್ಡಿಯಿಲ್ಲ. ನಿಮ್ಮ ಸರ್ಕಾರದ ಜೊತೆ JDS ಇರುತ್ತದೆ ಎಂದು ಜೆಡಿಎಸ್​ ವರಿಷ್ಠ ಹೆಚ್​.ಡಿ.ದೇವೇಗೌಡರು ಅಭಯ ನೀಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಫೋನ್​ನಲ್ಲಿ ಉಭಯ ನಾಯಕರೂ ಮಾತುಕತೆ  ನಡೆಸಿದ್ದು, ದೂರವಾಣಿಯಲ್ಲಿ ಬಿಎಸ್​​ವೈ ಗೆ ಖುದ್ದು ದೇವೇಗೌಡರೇ ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದೋಸ್ತಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣವೆಂಬ ಅಂಶ ಈಗ ಮನವರಿಕೆ ಆಗ್ತಿದೆ. ಹೆಚ್‌ಡಿಕೆ ಸರ್ಕಾರ ಅಸ್ಥಿರಗೊಳಿಸಿದ್ದೇ ಸಿದ್ದರಾಮಯ್ಯ. ಸರ್ಕಾರ ಬಿದ್ದ ಬಳಿಕ ಎಲ್ಲಾ ಅಂಶಗಳು ಗಮನಕ್ಕೆ ಬರುತ್ತಿವೆ. ನಿಮ್ಮ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ. 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಳ್ಳುವುದು, ಬಿಡುವುದು ಬೇರೆ ಮಾತು. ಚುನಾವಣೆ ಫಲಿತಾಂಶ ಏನೇ ಬರಲಿ ನಿಮ್ಮ ಜೊತೆ ಜೆಡಿಎಸ್‌ ಇರುತ್ತೆಂದು ಸಿಎಂ ಯಡಿಯೂರಪ್ಪಗೆ ದೇವೇಗೌಡರು ಭರವಸೆ ನೀಡಿದ್ದಾರೆ.

Published On - 6:22 pm, Tue, 5 November 19