Karnataka Assembly Session: ಸದನದಲ್ಲಿ ಬೆಳಗಿನ ಜಾವ 1 ಗಂಟೆಯವರೆಗೆ ಕಲಾಪ, ಸಭಾಧ್ಯಕ್ಷ ಯುಟಿ ಖಾದರ್ ಹೇಳಿದ್ದೇನು?
Karnataka Assembly Session: ಬಿಜೆಪಿ ಶಾಸಕರ ಸಭೆಯಿದ್ದ ಕಾರಣ ಮೊದಲು ಅವರಿಗೆ ಮಾತಾಡುವ ಅವಕಾಶ ಮಾಡಿಕೊಡಲಾಯಿತು, ತಮಗೆ ಮಾತಾಡುವ ಮತ್ತು ತಮ್ಮ ಕ್ಷೇತ್ರದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವ ಅವಕಾಶ ಸಿಗುತ್ತದೆ ಎಂಬ ವಿಶ್ವಾಸ ಶಾಸಕರಲ್ಲಿ ಮೂಡಿದೆ, ತಾನಂದುಕೊಳ್ಳುವ ಹಾಗೆ ಸುಮಾರು 100ಕ್ಕೂ ಹೆಚ್ಚು ಶಾಸಕರು ಹಲವಾರು ವಿಷಯಗಳ ಮೇಲೆ ಮಾತಾಡಿದರು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.
ಬೆಳಗಾವಿ: ನಿನ್ನೆ ಬೆಳಗ್ಗೆ 10 ಗಂಟೆಗೆ ಶುರುವಾದ ವಿಧಾನಸಭೆಯ ಕಲಾಪ ಇಂದು ಬೆಳಗ್ಗೆ ಒಂದು ಗಂಟೆಯವರೆಗೆ ನಡೆದಿದೆ. ಕಲಾಪವನ್ನು ನಡೆಸಿದ ಸಭಾಧ್ಯಕ್ಷ ಯುಟಿ ಖಾದರ್ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ್ದಾರೆ. ದಾಖಲೆ ಸೃಷ್ಟಿಸುವ ಉದ್ದೇಶದಿಂದ ಸುದೀರ್ಘ ಅವಧಿಯವರೆಗೆ ಕಲಾಪ ನಡೆಸಲಿಲ್ಲ, ಬಿಸಿನೆಸ್ ಅಜೆಂಡಾದಲ್ಲಿದ್ದಿದ್ದನ್ನು ಮುಗಿಸಲೇಬೇಕೆಂಬ ಉಮೇದಿ ಎಲ್ಲರಲ್ಲೂ ಇತ್ತು, ಆಡಳಿತ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸಹಕಾರ ನೀಡಿದರು, ಶಾಸಕರು ಸಹ ಜನಪ್ರತಿನಿಧಿಗಳಾಗಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು; ಉತ್ತರ ಕರ್ನಾಟಕ, ಪ್ರಮುಖ ಅಂಶಗಳು, ಪ್ರಶ್ನೋತ್ತರ ಮತ್ತು 60 ಗಮನ ಸೆಳೆಯುವ ಸೂಚನೆಗಳ ಮೇಲೆ ಚರ್ಚೆ ನಡೆಯಿತು ಎಂದು ಖಾದರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Assembly Session: ಮುನಿರತ್ನ ಮೇಲೆ ಚರ್ಚೆಗೆ ಅವಕಾಶ ಕೋರಿದ ನರೇಂದ್ರ ಸ್ವಾಮಿ, ಸ್ವಲ್ಪ ಕಾಯಬೇಕು ಎಂದ ಸ್ಪೀಕರ್