ಯೋಗೀಶ್ ಗೌಡ ಹತ್ಯೆ ಕೇಸ್: ಪ್ರಮುಖ ಆರೋಪಿ ಕೊಲೆಗೆ ಮಾಜಿ ಸಚಿವರಿಂದ ನಡೆದಿತ್ತಾ ಸ್ಕೆಚ್?
ಬಿಜೆಪಿ ಜಿ.ಪಂ. ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ CBI ತನಿಖೆಯ ವೇಳೆ ಬೆಚ್ಚಿಬೀಳಿಸುವ ವಿಷಯ ಬಯಲಾಗಿದೆ ಎಂದು ತಿಳಿದುಬಂದಿದೆ. ಹೌದು, ಪ್ರಕರಣದಲ್ಲಿ ಕೊಲೆ ಆರೋಪಿಯಾಗಿರುವವರ ಹತ್ಯೆಗೇ ಸಂಚು ರೂಪಿಸಿರುವ ಆರೋಪ ಕೇಳಿಬಂದಿದೆ.
ಧಾರವಾಡ: ಬಿಜೆಪಿ ಜಿ.ಪಂ. ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ CBI ತನಿಖೆಯ ವೇಳೆ ಬೆಚ್ಚಿಬೀಳಿಸುವ ವಿಷಯ ಬಯಲಾಗಿದೆ ಎಂದು ತಿಳಿದುಬಂದಿದೆ. ಹೌದು, ಪ್ರಕರಣದಲ್ಲಿ ಕೊಲೆ ಆರೋಪಿಯಾಗಿರುವವರ ಹತ್ಯೆಗೇ ಸಂಚು ರೂಪಿಸಿರುವ ಆರೋಪ ಕೇಳಿಬಂದಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಈ ಆರೋಪ ಕೇಳಿಬಂದಿದ್ದು ಬೆಂಗಳೂರು ಮೂಲದ ರೌಡಿಗೆ ಸುಪಾರಿ ನೀಡಿರುವ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪ್ರಕರಣವನ್ನು ಸಿಬಿಐಗೆ ವಹಿಸುತ್ತಿದ್ದಂತೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ ಹತ್ಯೆಗೆ ಸಂಚು ಮಾಡಿರುವ ಆರೋಪ ಕೇಳಿಬಂದಿದೆ.
ಸಾಕ್ಷ್ಯ ಮುಚ್ಚಿ ಹಾಕುವುದಕ್ಕೆ ಮುತ್ತಗಿಯ ಕೊಲೆಗೆ ಸ್ಕೆಚ್ ನಡೆಸಲಾಗಿತ್ತು ಎಂಬ ಮಾಹಿತಿ ತನಿಖೆ ವೇಳೆ ತಿಳಿದುಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ, ಯೋಗೀಶ್ ಸುಪಾರಿ ಬಗ್ಗೆ ಮಾಹಿತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ, ಮುತ್ತಗಿ ಹತ್ಯೆಯಾದ್ರೆ ಕೇಸ್ ಮುಚ್ಚಿಹಾಕಬಹುದೆಂಬ ಪ್ಲ್ಯಾನ್ ನಡೆದಿತ್ತು ಎಂದು ತನಿಖೆ ವೇಳೆ ಮಾಹಿತಿ ಬಯಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ, ಹತ್ಯೆ ಪ್ರಕರಣವನ್ನು ಯೋಗೀಶ್ ಗೌಡ ಸಹೋದರ ಗುರುನಾಥ ಗೌಡರ ತಲೆಗೆ ಕಟ್ಟೋ ಪ್ಲ್ಯಾನ್ ಸಹ ನಡೆದಿತ್ತು ಎಂದು ಹೇಳಲಾಗಿದೆ.
ಬಸವರಾಜ್ ಮುತ್ತಗಿಗೆ ಸಿಬಿಐ ಬುಲಾವ್ ಇತ್ತ, ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿಗೆ ಸಿಬಿಐ ಬುಲಾವ್ ನೀಡಿತ್ತು. ಹಾಗಾಗಿ, ಮುತ್ತಗಿ ಉಪನಗರ ಠಾಣೆಗೆ ಹಾಜರಾದರು. ಇದಲ್ಲದೆ, ಪ್ರಕರಣದಲ್ಲಿ ಬಳಸಲಾಗಿದ್ದ ಕಂಟ್ರಿ ಪಿಸ್ತೂಲ್ ಸಹ ಸೀಜ್ ಆಗಿದೆ. ಚಂದ್ರಶೇಖರ ಇಂಡಿ ಕೊಟ್ಟಿದ್ದ ಕಂಟ್ರಿ ಪಿಸ್ತೂಲ್ ಸೀಜ್ ಆಗಿದೆ. ಧರ್ಮರಾಜ್ ಚಡಚಣನಿಂದ ಕಂಟ್ರಿ ಪಿಸ್ತೂಲನ್ನು ಒಂದೂವರೆ ತಿಂಗಳ ಹಿಂದೆಯೇ ಸಿಬಿಐ ಅಧಿಕಾರಿಗಳು ಸೀಜ್ ಮಾಡಿದ್ದರು. ಧಾರವಾಡ ತಾಲೂಕಿನ ಮನ್ಸೂರು ಗ್ರಾಮದಲ್ಲಿ ಪಿಸ್ತೂಲ್ ಜಪ್ತಿಯಾಗಿತ್ತು ಎಂದು ತಿಳಿದುಬಂದಿದೆ.
ಕಾನೂನು ಮೀರಿ ಜೈಲ್‌ನಲ್ಲಿ ಕೊಲೆ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನೀಡ್ತಿದ್ದ ರಾಜಾತಿಥ್ಯಕ್ಕೆ ಬ್ರೇಕ್ !