AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಿಧ ಯೋಜನೆಗಳಿಗೆ ಕೇಂದ್ರ ಸಚಿವರ ಒಪ್ಪಿಗೆ ದೊರೆತಿದೆ: ಸಿಎಂ ಬೊಮ್ಮಾಯಿ

ಇಂದು (ಜುಲೈ 25) ಮೂರು ಕೇಂದ್ರ ಮಂತ್ರಿಗಳನ್ನು ಭೇಟಿಯಾಗಿದ್ದು, ಸಂಜೆ ಇಬ್ಬರು ಸಚಿವರನ್ನು ಭೇಟಿಯಾಗುತ್ತೇನೆ ಎಂದು ನವದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ವಿವಿಧ ಯೋಜನೆಗಳಿಗೆ ಕೇಂದ್ರ ಸಚಿವರ ಒಪ್ಪಿಗೆ ದೊರೆತಿದೆ: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: ವಿವೇಕ ಬಿರಾದಾರ|

Updated on:Jul 25, 2022 | 9:16 PM

Share

ನವದೆಹಲಿ: ಇಂದು (ಜುಲೈ 25) ಮೂರು ಕೇಂದ್ರ ಮಂತ್ರಿಗಳನ್ನು ಭೇಟಿಯಾಗಿದ್ದು, ಸಂಜೆ ಇಬ್ಬರು ಸಚಿವರನ್ನು ಭೇಟಿಯಾಗುತ್ತೇನೆ ಎಂದು ನವದೆಹಲಿಯಲ್ಲಿ (Delhi) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹೇಳಿದ್ದಾರೆ. ಹಡಗು ಬಂದರು ಸಚಿವ ಸೊರ್ಬಾನಂದ ಸೋನವಾಲರನ್ನು (Sarbananda Sonawala) ಭೇಟಿಯಾಗಿದ್ದೇನೆ. ಸಾಗರಮಾಲದ 27 ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. 10 ಯೋಜನೆಗಳಿಗೆ ಕೇಂದ್ರದಿಂದ ಒಪ್ಪಿಗೆ ಸಿಕ್ಕಿದೆ ಎಂದು ತಿಳಿಸಿದರು.

ಇನ್ನು ಕೆಲವು ಯೋಜೆನಗಳ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದೇವೆ. ಮಜಾಳಿ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾಳಿ ವಾಟರ್ ವೇ ಯೋಜನೆಗೆ ಡಿಪಿಆರ್ ಕಳುಹಿಸಬೇಕಿದೆ. ಡಿಪಿಆರ್ ಕಳುಹಿಸಿದ ಬಳಿಕ ಮಂಜೂರು ಮಾಡಲಿದ್ದಾರೆ. ಬೈಂದೂರು, ಮಲ್ಪೆ, ಮಂಗಳೂರು ಮರೀನಾ ಯೋಜನೆ‌ ರೂಪಿಸಲಾಗಿದೆ ಎಂದರು.

ಪ್ಲೋಟಿಂಗ್ ಜಟ್ಟಿಸ್​ಗೂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಕೇಂದ್ರ ಸಚಿವ ನಿತಿನ್​ ಗಡ್ಕರಿಯವರನ್ನು ಭೇಟಿಯಾಗಿ ಐದು ರಿಂಗ್ ರೋಡ್​​ಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ರೈಲ್ವೇ ಓವರ್ ಬ್ರಿಡ್ಜ್​​ಗಳ ನಿರ್ಮಾಣದ ಬಗ್ಗೆ ಚರ್ಚೆ ಮಾಡಲಾಗಿದೆ.  ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರ ಬಳಿ ಟೆಕ್ಟ್ ಟೈಲ್ ಪಾರ್ಕ್ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕಸ್ತೂರಿ ರಂಗನ್ ವರದಿ ಬಗ್ಗೆ ಕೆಲ ವಿಚಾರಗಳ ಬಗ್ಗೆ ಆಕ್ಷೇಪ ಇದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಡಾ.ಕಸ್ತೂರಿ ರಂಗನ್​ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈಗಿರುವ ಅರಣ್ಯ ಕಾನೂನಿನಿಂದಲೇ ಪರಿಸರ ರಕ್ಷಣೆಯಾಗುತ್ತಿದೆ. ಗುಜರಾತ್, ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ ಎಂದರು.

ಜನಜೀವನ, ಪರಿಸರ ಸಂರಕ್ಷಣೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಗ್ರೌಂಡ್​ಲೆವೆಲ್​ ಸರ್ವೆ ಮಾಡದಿದ್ದರೆ ವಾಸ್ತವಾಂಶ ಗೊತ್ತಾಗುವುದಿಲ್ಲ. ಹೀಗಾಗಿ ಮತ್ತೊಮ್ಮೆ ಪರಿಶೀಲನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಸದ್ಯಕ್ಕೆ ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲ್ಲ, ಜೆ.ಪಿ.ನಡ್ಡಾ ಬರುತ್ತಾರೆ ಎಂದು ಮಾತನಾಡಿದರು.

ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಮಲೆನಾಡು ,ಕರಾವಳಿ ಭಾಗದ ಶಾಸಕರು ಸಂಸದರು ಭೇಟಿ ಮಾಡಿದ್ದೆವು. ಕಸ್ತೂರಿ ರಂಗನ್ ಸಮಿತಿ ಬಗ್ಗೆ ನಮ್ಮ ನಿಲುವು ಹೇಳಿದ್ದೇವೆ. ವಾಸ್ತವವಾಗಿ ಸರ್ವೆ ಮಾಡದೇ ಸ್ಮೂಕ್ಷ ಪ್ರದೇಶ ಎನ್ನಲಾಗಿದೆ. ಇದರಿಂದ ಜನರಿಗೆ ಭಾರೀ ಅನಾನುಕೂಲ ಆಗಲಿದೆ. ಕಾಫಿ,ರಬ್ಬರ ಬೆಳೆ ಜೊತೆಗೆ ಕೃಷಿ ಚಟುವಟಿಕೆಗಳು ನಡೆಯುತ್ತಿದೆ ಎಂದರು.

ಗ್ರೌಂಡ್ ಸರ್ವೆ ಮಾಡದ ಹೊರತು ಯಾವುದು ಗೊತ್ತಾಗಲ್ಲ. ಗ್ರಾಮಪಂಚಾಯಿತಿ, ಜನರ ಅಭಿಪ್ರಾಯ ಸಂಗ್ರಹ ಮಾಡಿಲ್ಲ. ಕೃಷಿ ಚಟುವಟಿಕೆಗಳಿಂದಲ್ಲೂ ಪರಿಸರ‌ ಸಮತೋಲನ ಸಾಧ್ಯವಿದೆ. ಈಗಿರುವ ಕಾನೂನಿನಿಂದಲೇ ಪರಿಸರ ಸಂರಕ್ಷಣೆ ನಡೆಯುತ್ತಿದೆ. ನಾವು ಪರಿಸರ ರಕ್ಷಕರು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ.  ಎಲ್ಲ ರಾಜ್ಯಗಳು ನಿಲುವನ್ನು ತೆಗೆದುಕೊಂಡಿವೆ ಎಂದು ಹೇಳಿದರು.

ಎಲ್ಲವನ್ನು ಅವಲೋಕಿಸಿ ಕೇಂದ್ರ ನಿಲುವು ತೆಗೆದುಕೊಳ್ಳುತ್ತಿದೆ ಸಧ್ಯಕ್ಕೆ ಯಾವುದನ್ನು ಅನುಷ್ಠಾನ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಪರಿಸರ ಸಚಿವಾಲಯದಿಂದ ಒಂದು ವರ್ಷಕ್ಕೆ ಸಮಿತಿ ರಚಿಸಲಾಗಿದೆ. ಸಮತಿ‌ ಎಲ್ಲಾ ಅಧ್ಯಯನ ನಡೆಸಿ, ಸ್ಥಳೀಯ ಮಾಹಿತಿ ಸಂಗ್ರಹಿಸಲಾಗುತ್ತೆ. ನೇರವಾಗಿ ಅನುಷ್ಠಾನ ಮಾಡುವುದಿಲ್ಲ. ರಾಜ್ಯ ಮಟ್ಟದಲ್ಲೂ ಹೈಲೆವೆಲ್ ಸಮಿತಿ‌ ರಚಿಸಲಾಗುವುದು ಎಂದು ಮಾತನಾಡಿದರು.

ವೈಜ್ಞಾನಿಕ ಅಧ್ಯಯನ ನಡೆಸಿ ಕೇಂದ್ರದ ಸಮಿತಿಗೆ ತಿಳಿಸಲಿದ್ದೇವೆ. ಜನರ ರಕ್ಷಣೆಗೆ ಮತ್ತೊಮ್ಮೆ ಅವಕಾಶ ಸಿಕ್ಕಂತಾಗಿದೆ. ಕೇಂದ್ರ ಸಚಿವರನ್ನು ರಾಜ್ಯಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದೇವೆ.

ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶಖಾವತ್ ಭೇಟಿಯಾಗಿದ್ದೇವೆ. ಮೇಕೆದಾಟು, ಕೃಷ್ಣಮೇಲ್ದಂಡೆ, ಭದ್ರಾ ಮೇಲ್ದಂಡೆ ಸೇರಿ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ಆಗಿದೆ. ಮೇಕೆದಾಟು ಯೋಜನೆಯ ಬಗ್ಗೆ ವಿಪಕ್ಷದ ನಾಯಕರು ಏನು ವಿವಾದವೇ ಇಲ್ಲ ಎನ್ನುತ್ತಿದ್ದರು. ನಾವು ಮೊದಲಿಂದಲೂ ಹೇಳುತ್ತಿದ್ದೇವೆ. ಮಿಸಲೇನಿಯಸ್ ಅರ್ಜಿ ಬಾಕಿ ಇದೆ. ಆದರೂ ಕೂಡ ನಾವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಸಿಡಬ್ಲ್ಯೂಎಂಎ ಗೆ ಅಧಿಕಾರ ಇದೆ ಅಂಥ ಹೇಳಿದ್ದೇವೆ. ಆದರೂ ಹೊಸ ಅರ್ಜಿ ನಾಳೆ ಸುಪ್ರೀಂ ಕೋರ್ಟ್​ನಲ್ಲಿ ಬರಲಿದೆ ಎಂದರು.

Published On - 4:22 pm, Mon, 25 July 22